ನಾರಾಯಣಪುರ: ಯುವ ಸಮೂಹ ರಾಷ್ಟ್ರ ಶಕ್ತಿಯಾಗಿದ್ದು, ಯುವ ಸಮುದಾಯ ಜ್ಞಾನ, ಕೌಶಲ್ಯ ಸದ್ಬಳಕೆ ಮಾಡಿಕೊಂಡು ಸದೃಢ ರಾಷ್ಟ್ರ ನಿರ್ಮಿಸುವ ಗುರಿಯತ್ತ ಸಾಗಬೇಕು ಎಂದು ಕೊಡೇಕಲ್ ಪೊಲೀಸ್ ಠಾಣೆ ಪಿಎಸ್‌ಐ ಪ್ರದೀಪ್ ಬಿಸೆ ಹೇಳಿದರು.
ಕೊಡೇಕಲ್ ಯುಕೆಪಿ ಕ್ಯಾಂಪ್‌ನಲ್ಲಿನ ಜನಕ ಕಲಾ ಪದವಿ ಮಹಾವಿದ್ಯಾಲಯದ ಬಿ.ಎ. ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭ ಮತ್ತು ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಅವರು ಮಾತನಾಡಿ, ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣ ಪಡೆದರೂ ದೇಶದ ಐಕ್ಯತೆ, ಸಮಗ್ರತೆಗೆ ಯುವಕರು ಸದಾ ಮುನ್ನುಗ್ಗುಬೇಕು. ಕುಟುಂಬ ಹಾಗೂ ಸಮುದಾಯ ಪ್ರೀತಿಸುವ ಮನೋಭಾವ ಮೈಗೂಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ತಾಳಿಕೋಟೆ ಖಾಸ್ಗತೇಶ್ವರ ಕಾಲೇಜು ಪ್ರಾಚಾರ್ಯ ರಮೇಶ ಬಂಟನೂರ ಮಾತನಾಡಿ, ಪದವಿ ಹಂತದಲ್ಲಿ ವಿದ್ಯಾರ್ಥಿಗಳು ಸಂಸ್ಕಾರ ಬೆಳೆಸಿಕೊಳ್ಳಬೇಕು ಎಂದರು. ಶಿಕ್ಷಣ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಆದಿಶೇಷ ನೀಲಗಾರ ಮಾತನಾಡಿ, ಕೊಡೇಕಲ್‌ನಲ್ಲಿ ಪದವಿ ಕಾಲೇಜು ಆರಂಭಿಸಿದ್ದು ಗ್ರಾಮೀಣ ಭಾಗದ ಯುವಕ-ಯುವತಿಯರಿಗೆ ಅನುಕೂಲವಾಗಿದೆ. ಪಿಯು ನಂತರ ಪದವಿ ಶಿಕ್ಷಣ ಪಡೆಯಲು ದೂರದ ಪಟ್ಟಣಗಳಿಗೆ ತೆರಳಿ ವ್ಯಾಸಂಗ ಮಾಡುವ ಪರಿಪಾಡು ತಪ್ಪಿದೆ ಎಂದರು.
ಇದೇ ವೇಳೆ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬಸವಪೀಠ ಪೀಠಾಧಿ ಪತಿ ವೃಷಬೇಂದ್ರ ಅಪ್ಪ ಸಾನ್ನಿಧ್ಯ ವಹಿಸಿದ್ದರು. ತಿಮ್ಮಮ್ಮ ಶಂಭನಗೌಡ ಕಾರ್ಯಕ್ರಮ ಉದ್ಘಾಟಿಸಿದರು. ರಾಜಾ ಜೀತೇಂದ್ರನಾಯಕ ಜಹಾಗೀರದಾರ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಅಮರೇಶ ಕುಂಬಾರ, ವೀರೇಶ
ಮಠ, ವಿಶ್ವನಾಥ ಸರ್ಗಣಾಚಾರಿ, ರುದ್ರಮ್ಮ ಗುರಿಕಾರ, ಬಸವರಾಜ ಉತ್ನಾಳ, ತಿರುಪತಿ ಕೆಂಭಾವಿ, ಬಸವರಾಜ ಅಂಗಡಿ ಇತರರು ಇದ್ದರು. ಭವಾನಿ ಪ್ರಾರ್ಥಿಸಿದರು. ಬಸವರಾಜ ಉತ್ನಾಳ ಸ್ವಾಗತಿಸಿದರು. ಸೋಮಶೇಖರ ಪಂಜಗಲ್ ನಿರೂಪಿಸಿದರು, ಸುಜಾತಾ ಗೊಲ್ಲರ ವಂದಿಸಿದರು.