Advertisement
ಶನಿವಾರ ಬೆಳಿಗ್ಗೆಯಿಂದಲೂ ಬಿಟ್ಟು ಬಿಡದೆ ಸುರಿಯುತಿರುವ ಮಳೆಯು ರವಿವಾರವು ಮುಂದುವರಿದ ಪರಿಣಾಮ ನಾರಾಯಣಪುರ ಗ್ರಾಪಂ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ಮನೆಗಳು ಕುಸಿದಿವೆ. ನಾರಾಯಣಪುರ, ದೇವರಗಡ್ಡಿ, ಮೇಲಿನಗಡ್ಡಿ, ಹನುಮನಗರ, ನಾರಾಯಣಪುರ ಗ್ರಾಮದಲ್ಲಿ 20ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ, ಗೋಡೆಗಳು ಕುಸಿದಿದ್ದು, ನಿವಾಸಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ತಗ್ಗುಪ್ರದೇಶದಲ್ಲಿನ ಕೆಲ ಮನೆಗಳಿಗೆ ನೀರು ನುಗ್ಗಿ ಜನ ಸಂಕಷ್ಟ ಎದುರಿಸುವಂತಾಗಿದೆ. ಗ್ರಾಮ ಲೆಕ್ಕಿಗ ಅಪ್ಪಣ್ಣ ಮಳೆಯಿಂದ ಹಾನಿಗೊಳಾದ ಮನೆಗಳಿಗೆ ಭೇಟಿ ನೀಡಿ ವೀಕ್ಷಿಸಿ, ಈ ಕುರಿತು ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
Related Articles
Advertisement
ಶಹಾಪುರ: ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ನಗರದ ಸಗರಾದ್ರಿ ಬೆಟ್ಟದಲ್ಲಿರುವ ದಬದಭೆ ಫಾಲ್ಸ್ ಮೈದುಂಬಿ ಹರಿಯುತ್ತಿದ್ದು, ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಜನತೆಗೆ ಜಲಾಪತದಲ್ಲಿ ಮಿಂದೆದ್ದು ಸೃಷ್ಟಿ ವೈಭವ ಕಣ್ತುಂಬಿಕೊಳ್ಳುತ್ತಿದ್ದಾರೆ. ಸಿದ್ಧಲಿಂಗೇಶ್ವರ ಬೆಟ್ಟಕ್ಕೆ ಹೋಗುವ ಮಾರ್ಗ ಮಧ್ಯ ಬಲಗಡೆ ಕಲ್ಲುಬಂಡೆಗಳ ಮಧ್ಯೆ ಝುಳು ಝುಳು ನಾದದೊಂದಿಗೆ ಬಿಳಿನೊರೆ ಹಾಲಿನಂತೆ ನೀರು ಧುಮ್ಮಿಕ್ಕುತ್ತಿದೆ. ದಬದಬಾ ಅಂಥ ನೀರು ಬೀಳುವ ಶಬ್ಧ ಬರುತ್ತಿರುವುದರಿದಲೋ ಏನೋ ಇದಕ್ಕೆ ದಬೆದಭೆ ಫಾಲ್ಸ್ ಅಂತಲೇ ಕರೆಯುತ್ತಾರೆ. ಜೋರಾಗಿ ಮಳೆ ಬಂದರೆ ದಬದಭೆ ಫಾಲ್ಸ್ ಮೈದುಂಬಿ ಹರಿಯುತ್ತ ಜನರನ್ನು ತನ್ನತ್ತ ಸೆಳೆಯುತ್ತಿದೆ. ಹೀಗಾಗಿ ರವಿವಾರ ಸಾವಿರಾರು ಜನ ಫಾಲ್ಸ್ ಗೆ ಭೇಟಿ ನೀಡಿ ನೀರಲ್ಲಿ ಮಿಂದೆದ್ದು ಸಂಭ್ರಮಿಸುತ್ತಿರುವುದು ಕಂಡುಬಂತು.
ನಗರದ ಜನತೆ ಮಕ್ಕಳು, ಕುಟುಂಬ ಸಮೇತ ರವಿವಾರ ಸಿದ್ಧಲಿಂಗೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ಕೆಲಕಾಲ ಮೋಜು ಮಸ್ತಿಯಲ್ಲಿ ಸಮಯ ಕಳೆದರು. ಸಂಜೆಯಾದರೂ ಜನ ಸೇರುತ್ತಲೇ ಇರುವುದು ಕಂಡು ಬಂದಿತು. ಕೋವಿಡ್ ದಿಂದಾಗಿ ಶಾಲಾ ಕಾಲೇಜುಗಳಿಗೆ ರಜೆ ಇದೆ. ಮನೆಯಲ್ಲೂ ಕೊರೊನಾ ಭಯದಿಂದ ಕಳೆದ ಆರೇಳು ತಿಂಗಳಿಂದ ಎಲ್ಲೂ ಹೋಗಿಲ್ಲ. ಹೀಗಾಗಿ ಸ್ಥಳೀಯವಾಗಿ ಈ ಫಾಲ್ಸ್ ಮಳೆಗಾಲದಲ್ಲಿ ಕೈ ಬೀಸಿ ಕರೆಯುತ್ತದೆ. ಮಕ್ಕಳ ಒತ್ತಾಯಕ್ಕೆ ಬಂದಿದ್ದೇವೆ. ಹಚ್ಚ ಹಸಿರಿನ ಮಧ್ಯೆ ಇರುವ ಫಾಲ್ಸ್ ನೋಡಿ ಮಕ್ಕಳುಖುಷಿಯಾಗಿ ಆಟವಾಡುವುದನ್ನು ಕಂಡು ಸಂತೋಷವಾಗಿದೆ ಎಂದು ಶಿಕ್ಷಕಿ ಮೇಘಾ ದೇಗನಾಳ ತಿಳಿಸಿದರು.