Advertisement

ಬಸವಣ್ಣ ದೇಗುಲದೆದುರು ಭದ್ರತೆ

03:41 PM Apr 10, 2020 | Naveen |

ನಾರಾಯಣಪುರ: ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಸುಕ್ಷೇತ್ರ ಕಾಲಜ್ಞಾನಿ ಕೊಡೇಕಲ್‌ ಬಸವಣ್ಣ ದೇವರ ಜೋಡು ಪಲ್ಲಕ್ಕಿ ಉತ್ಸವ ಹಾಗೂ ಜಾತ್ರಾ ಮಹೋತ್ಸವ ಕೋವಿಡ್  ವೈರಸ್‌ ಹಿನ್ನೆಲೆಯಲ್ಲಿ ಗುರುವಾರ ರದ್ದಾಗಿದರಿಂದ ದೇಗುಲದ ಎದುರು ಪೊಲೀಸ್‌ ಸಿಬ್ಬಂದಿ ಸೂಕ್ತ ಭದ್ರತೆ ಒದಗಿಸಿದ್ದರು.

Advertisement

ಗುರುವಾರ ಪೀಠಾಧಿಪತಿ ವೃಷಬೇಂದ್ರ ಅಪ್ಪನವರ ಮಾರ್ಗದರ್ಶನ ಅರಸು ಮನೆತನದ ಜಹಗೀರದಾರ ನೇತೃತ್ವದಲ್ಲಿ ವರ್ಷದ ಪದ್ಧತಿಯಂತೆ ಅಷ್ಟ ವಿಧಾರ್ಚನೆಯ ಪೂಜೆ, ಬಾರಾ ಬಲೂತಿ ಸಂಪ್ರದಾಯದಂತೆ ಜೋಡು ಪಲ್ಲಕ್ಕಿಗಳ ಉತ್ಸವ ನಡೆಯಬೇಕಿತ್ತು. ಆದರೆ ಕೋವಿಡ್  ಹಿನ್ನೆಲೆಯಲ್ಲಿ ಲಾಕ್‌ ಡೌನ್‌ ಆದೇಶ ಜಾರಿಗೊಳಿಸಿದ್ದು, ಜಿಲ್ಲಾಡಳಿತ ಜಾತ್ರೆ-ಉತ್ಸವಗಳಿಗೆ ಬ್ರೇಕ್‌ ಹಾಕಿದೆ. ಹೀಗಾಗಿ ಜಾತ್ರಾ ಉತ್ಸವದ ಎಲ್ಲ ಧಾರ್ಮಿಕ ಕಾರ್ಯಕ್ರಮ ರದ್ದುಗೊಳಿಸಿದ್ದರಿಂದ ಭಕ್ತರು ಮನೆಯಿಂದ ಹೊರಬರಲಿಲ್ಲ. ಪ್ರತಿ ವರ್ಷದಂತೆ ಜರುಗುತ್ತಿದ್ದ ಜಾನುವಾರು ಜಾತ್ರೆ ರದ್ದುಗೊಳಿಸಲಾಗಿದೆ. ಹುಣಸಗಿ ಸಿಪಿಐ ನೇತೃತ್ವದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next