ಕುಷ್ಟಗಿ: ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅನೇಕ ಉಪ ಚುನಾವಣೆಗಳಲ್ಲಿ ಬಿಜೆಪಿ ಗೆದ್ದಿದ್ದು, ಹಾನಗಲ್, ಸಿಂದಗಿ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವ ವಿಶ್ವಾಸವನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಕೇಂದ್ರ ಸಚಿವ ನಾರಾಯಣಸ್ವಾಮಿ ವ್ಯಕ್ತಪಡಿಸಿದರು.
ಸಿಂದಗಿ ಉಪ ಚುನಾವಣೆ ಹಿನ್ನೆಲೆಯಲ್ಲಿ ಕುಷ್ಟಗಿ ಮಾರ್ಗವಾಗಿ ತೆರಳುವ ಸಂದರ್ಭದಲ್ಲಿ ಇಲ್ಲಿನ ಮೇಲ್ಸೇತುವೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಲಂಬಾಣಿ, ಬೋವಿ ಇತರೇ ಸಮುದಾಯಗಳಿಗೆ ಅನ್ಯಾಯವಾಗದಂತೆ ನ್ಯಾಯಮೂರ್ತಿ ಏ.ಜೆ.ಸದಾಶಿವ ಆಯೋಗ ವರದಿ ಜಾರಿಗೆ ಬಿಜೆಪಿ ಬದ್ದವಾಗಿದೆ.
ಈ ವರದಿ ಪ್ರಸ್ತಾಪ ಕೇಂದ್ರ ಸರ್ಕಾರದ ಮುಂದಿದ್ದು ಯಾವ ರೀತಿಯಲ್ಲಿ ಜಾರಿಗೆ ಹಾಗೂ ನ್ಯಾಯಯುತ ದಿಕ್ಕಿನ ಕುರಿತಾಗಿ ಖಂಡಿತವಾಗಿಯೂ ಬಿಜೆಪಿ ಬದ್ದವಾಗಿದೆ ಎಂದರು. ಅಲ್ಲದೇ ಪರಿಶಿಷ್ಟ ವರ್ಗಕ್ಕೆ ಶೇ.7.5 ಹೆಚ್ಚಳ, ಬೋವಿ, ಲಂಬಾಣಿ ಸಮಾಜಕ್ಕೆ ಮೀಸಲಾತಿ ಹೆಚ್ಚಳ, ಮಾದಿಗ, ಬಲಗೈ ಮೀಸಲಾತಿ ಹೆಚ್ಚಿಸುವ ನಿಟ್ಟಿನಲ್ಲಿ ಬಿಜೆಪಿ ಬದ್ದವಾವಿದೆ ಎಂದರು.
ಇದನ್ನೂ ಓದಿ : ತರುಣ್ ತೇಜ್ ಪಾಲ್ ಕೇಸ್: ವಿಚಾರಣಾಧೀನ ಕೋರ್ಟ್ ತೀರ್ಪು, 5ನೇ ಶತಮಾನಕ್ಕೆ ಸೂಕ್ತ: ಗೋವಾ
ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ವಿನಯಕುಮಾರ ಮೇಲಿನಮನಿ, ಮಾದಿಗ ಮಹಾಸಭಾ ಅಧ್ಯಕ್ಷ ನಾಗರಾಜ ಮೇಲಿನಮನಿ ಸೇರಿದಂತೆ ಮಾದಿಗ ಸಮಾಜ ಕಾರ್ಯಕರ್ತರು ಭಾಗವಹಿಸಿದ್ದರು. ಕೇಂದ್ರ ಸಚಿವರಾಗಿ ಈ ಭಾಗಕ್ಕೆ ಮೊದಲ ಭೇಟಿ ಇದಾಗಿದ್ದರಿಂದ ಮಾದಿಗ ಸಮುದಾಯ ಹಾಗೂ ಬಿಜೆಪಿ ಕಾರ್ಯಕರ್ತರು ಸಚಿವ ನಾರಾಯಣಸ್ವಾಮಿ ಅವರನ್ನು ಪುಷ್ಪವೃಷ್ಟಿಯ ಮೂಲಕ ಬರಮಾಡಿಕೊಂಡರು.