Advertisement
ನಾರಾಯಣ ಗುರು ಪ್ರತಿಮೆಯ ಬೃಹತ್ ಮೆರವಣಿಗೆ ಮೂಲಕ ಕುರುವಳ್ಳಿ ಅಗ್ರಹಾರದ ನಾರಾಯಣ ಗುರು ಮಂದಿರದಲ್ಲಿ ಶುರುವಾದ ಮೆರವಣಿಗೆ ಸಾವಿರಾರು ಈಡಿಗರ ಸಮುದಾಯದವರ ಜತೆ ಕಲಾ ತಂಡಗಳ ಸಮಾಗಮದೊಂದಿಗೆ ಬಾನುವಾರ ಪಟ್ಟಣದಲ್ಲಿ ಮೆರವಣಿಗೆ ಮಾಡಲಾಯಿತು. ಬಳಿಕ ಸಂಸ್ಕೃತಿ ಮಂದಿರದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಧರ್ಮಸ್ಥಳ ಶ್ರೀರಾಮ ಕ್ಷೇತ್ರದ ಮಠಾಧೀಶರಾದ ಶ್ರೀ ಬ್ರಹ್ಮಾನಂದ ಸರಸ್ವತಿ ಶ್ರೀಗಳು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಸಮಾಜದ ಒಗ್ಗಟ್ಟು ಪ್ರದರ್ಶನ ಇಂದು ಅಗತ್ಯ ಇದೆ.
Related Articles
Advertisement
ರಾಜ್ಯ ಈಡಿಗರ ಸಂಘದ ಅಧ್ಯಕ್ಷ ಡಾ.ಎಂ. ತಿಮ್ಮೆಗೌಡ ಮಾತನಾಡಿ, ರಾಜ್ಯದಲ್ಲಿ ಈಡಿಗ ನಿಗಮದ ಬಗ್ಗೆ ಮುಖ್ಯ ಮಂತ್ರಿಗಳ ಜತೆ ಮಾತನಾಡಲಾಗಿದೆ. ರಾಜ್ಯದ ಈಡಿಗ ಸಂಘಟನೆಗೆ ರಾಜ್ಯ ಸಂಘ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.
ಕಾರ್ಯಕ್ರಮದಲ್ಲಿ ಈಡಿಗ ಸಮುದಾಯದ ನಾಯಕರಾದ ಮಾಲೀಕಯ್ಯ ಗುತ್ತೇದಾರ್, ರಾಜಶೇಖರ್ ಕೋಟ್ಯಾನ್, ಡಾ. ಗೋವಿಂದ ಬಾಬು ಪೂಜಾರಿ, ಸಿನಿಮಾ ಸಾಹಿತಿ ಕವಿರಾಜ್ , ತಾಲೂಕು ಸಂಘಟನೆ ಅಧ್ಯಕ್ಷ ವಿಶಾಲ್ ಕುಮಾರ್, ಈಡಿಗರ ಸಂಘದ ಅಧ್ಯಕ್ಷ ಮಟ್ಟಿನಮನೆ ರಾಮಚಂದ್ರ, ಬಿಲ್ಲವ ಸಂಘದ ಅಧ್ಯಕ್ಷ ಮಂಜುನಾಥ್ ಇತರರು ಇದ್ದರು.
ಸಾಧಕರಿಗೆ ಸನ್ಮಾನ..!:
ಸಮಾರಂಭದಲ್ಲಿ ಈಡಿಗ ಸಮುದಾಯದ ಸಾಧಕರಾದ ಸಾಹಿತಿ ಕವಿರಾಜ್, ಮಾದರಿ ಉದ್ಯಮಿ ಗೋಪಾಲ್ ಬಾಬು ಪೂಜಾರಿ, ಹಿನ್ನೆಲೆ ಗಾಯಕಿ ದಿವ್ಯಾ ರಾಮಚಂದ್ರ, ಎಸ್ಎಸ್ಎಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಗಳಿಸಿದ ಶ್ರೀಷ, ಸಮಾಜ ಸೇವಕರಾದ ಗೋಪಾಲ ಪೂಜಾರಿ, ಪ್ರಮೋದ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಈಡಿಗ ಸಮುದಾಯದ ಬಹುತೇಕ ಎಲ್ಲಾ ನಾಯಕರು ಹಾಜರಿದ್ದರು. ಸುಮಾರು 1500ಕ್ಕೂ ಹೆಚ್ಚು ಈಡಿಗ ಸಮುದಾಯವರು ಭಾಗಿಯಾಗಿದ್ದು ತೀರ್ಥಹಳ್ಳಿಯಲ್ಲಿ ಈಡಿಗ ಸಮುದಾಯದ ಒಗ್ಗಟ್ಟು ಪ್ರದರ್ಶನವಾಯಿತು. ಪಕ್ಷ ಬೇಧ ಮರೆತು ಈಡಿಗ ಸಮುದಾಯದ ಬಹುತೇಕ ನಾಯಕರು, ಉದ್ಯಮಿಗಳು, ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.