Advertisement

ಯಕ್ಷಗಾನ ಕಲಾವಿದ ಕೊಳ್ತಿಗೆ ನಾರಾಯಣ ಗೌಡರ ಸಹಾಯಾರ್ಥ ಯಕ್ಷಗಾನ

03:20 PM Oct 23, 2018 | |

ಪುಣೆ: ಯಕ್ಷಗಾನ  ವಿಶ್ವ ವಿಖ್ಯಾತಗೊಂಡಿರುವುದಕ್ಕೆ   ನಿಷ್ಠಾ ವಂತ ಹಿರಿಯ ಕಲಾವಿದರು, ಕಲಾ ಪೋಷಕರು, ಕಲಾ ಸಂಘಟಕರು ಹಾಗೂ ಕಲಾಭಿಮಾನಿಗಳ ಪ್ರೋತ್ಸಾಹ ಕಾರಣ. ಯಕ್ಷಗಾನಕ್ಕೆ ಅಳಿವಿಲ್ಲ. ಸಂಘ ಟಕರ, ಕಲಾಭಿಮಾನಿಗಳ ಕೊರತೆ ಎಂದಿಗೂ ಬರಲಾರದು. ಯಕ್ಷ ಕಲಾವಿದರ ಕೊರತೆಯೂ ಆಗದು. ಯಕ್ಷಗಾನವನ್ನೇ ನಂಬಿ ಜೀವನ ಸಾಗಿಸುವ ಕಲಾವಿದರಿದ್ದಾರೆ.  ಕೇವಲ  ಆರು ತಿಂಗಳ  ಯಕ್ಷಗಾನ ಸೇವೆಯ ಸಮಯದಲ್ಲಿ ದುಡಿದು ವರ್ಷಪೂರ್ತಿ ಜೀವನ ನಡೆಸುವ ಈ ಕಲಾವಿದರ ಜೀವನ ನಾವಂದುಕೊಂಡಷ್ಟು ಸುಖಮಯವಾಗಿಲ್ಲ. ಈ ಕಲಾವಿದರ ಕಷ್ಟಗಳಿಗೆ ನಾವೆಲ್ಲರೂ ಸಹಾಯ ನೀಡಿ ಅವರ ಬದುಕಿಗೆ ದೀಪವಾಗಬೇಕು. ಆರ್ಥಿಕ ಸಮಸ್ಯೆಯನ್ನು ಎದುರಿಸುತ್ತಿರುವ  ಕೊಳ್ತಿಗೆ ನಾರಾಯಣ ಗೌಡರಂಥ ಕಲಾವಿದರ ಕಷ್ಟಗಳಿಗೆ ಎಲ್ಲರ ಸಹಾ ಯದ ಅಗತ್ಯವಿದೆ ಎಂದು ಪುಣೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯ ಅಧ್ಯಕ್ಷ,  ಕಲಾಪೋಷಕ ಪ್ರವೀಣ್‌ ಶೆಟ್ಟಿ ನುಡಿದರು.

Advertisement

ಅ 20ರಂದು ಪುಣೆಯ ಕಾತ್ರಜ್‌ ದೇವಸ್ಥಾನದ ವಠಾರದಲ್ಲಿ  ಸುಮಾರು 52 ವರ್ಷಗಳ ಕಾಲ ಯಕ್ಷರಂಗದಲಿದ್ದು ಒಂಟಿ  ಸಲಗ ಎಂಬ ಬಿರುದನ್ನು ಪಡೆದ ಖ್ಯಾತ  ಯಕ್ಷಗಾನ  ಕಲಾವಿದ ಕೊಳ್ತಿಗೆ ನಾರಾಯಣ ಗೌಡ ಅವರ ಗೃಹ  ನಿರ್ಮಾಣದ  ಸಹಾಯಾರ್ಥವಾಗಿ ಆಯೋಜಿಸಲಾಗಿದ್ದ ಯಕ್ಷಗಾನ ಪ್ರದರ್ಶನದ ಸಂದರ್ಭ ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು. 

ನಾರಾಯಣ ಗೌಡರ ಗೃಹ ನಿರ್ಮಾ ಣದ ಸಹಾಯಾರ್ಥ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ. ಅವರಿಗೆ ನಮ್ಮಿಂದಾದ ಸಹಾಯವನ್ನು ಮಾಬೇಕು. ಪುಣೆಯಲ್ಲಿ ಯಕ್ಷಗಾನ ಮಂಡಳಿ ಸ್ಥಾಪಿಸಿ ಕಲಾ  ಸೇವೆ ಮಾಡುತ್ತಿದ್ದೇನೆ. ಇದಕ್ಕಾಗಿ ನನ್ನನ್ನು ಸಮ್ಮಾನಿಸಿದ್ದಕ್ಕೆ ಧನ್ಯ ಎಂದು ಅವರು ಹೇಳಿದರು. 

ನಾರಾಯಣ ಗೌಡರ  ಯಕ್ಷಗಾನ ಪ್ರದರ್ಶನಕ್ಕೆ ಉಚಿತವಾಗಿ ಸ್ಥಳ ನೀಡಿ ಜತೆಗೆ ಸುಮಾರು ಎರಡು ತಿಂಗಳ ಕಾಲ ಅಶ್ರಯ ನೀಡಿ ಸಂಪೂರ್ಣ ಸಹಕಾರ ನೀಡಿದ  ಕಾತ್ರಜ್‌ ಶ್ರೀ  ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸೇವಾ  ಸಮಿತಿಯ ಎಲ್ಲ ಸದಸ್ಯರ ಪರವಾಗಿ ಅಧ್ಯಕ್ಷರಾದ ಸುಭಾಷ್‌ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು. 
ಪುಣೆ ಬಂಟರ ಸಂಘದ  ಅಧ್ಯಕ್ಷ ಸಂತೋಷ್‌ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು, ಉತ್ತರ ಪ್ರಾದೇಶಿಕ ಸಮಿತಿ ಬಂಟರ ಸಂಘ ಪುಣೆ  ಇದರ  ಕಾರ್ಯಾಧ್ಯಕ್ಷ ದಿನೇಶ್‌ ಶೆಟ್ಟಿ ಕಳತ್ತೂರು ಅವರನ್ನು ಗೌರವಿಸಲಾಯಿತು.

ಹಿಮ್ಮೇಳದಲ್ಲಿ ಯುವ ಭಾಗವತ ಯೋಗಿಶ್‌ ಶರ್ಮ, ಚೆಂಡೆ- ಮದ್ದಳೆ
ಯಲ್ಲಿ ಚಂದ್ರಶೇಖರ  ಗುರುವಾಯನ ಕೆರೆ ಮತ್ತು  ರಾಜೇಶ್‌ ಮಡಂತ್ಯಾರು, ಕಲಾವಿದರಾಗಿ ಜಬ್ಟಾರ್‌ ಸಮೋ, ಅರವಿಂದ ಬೋಳಾರ್‌, ಪೆರ್ಲ ಜಗನ್ನಾಥ್‌ ಶೆಟ್ಟಿ, ಮಾಧವ ಪಾಟಾಳಿ, ಶೇಖರ್‌ ಜಯನಗರ, ನಾರಾ ಯಣ ಗೌಡ, ಪ್ರಭಾಕರ ಶೆಟ್ಟಿ ಮೊದ ಲಾದವರು ಪಾಲ್ಗೊಂಡಿದ್ದರು. 

Advertisement

ಕೊನೆಯಲ್ಲಿ ಶ್ರೀ ಅಯ್ಯಪ್ಪ ಸೇವಾ ಸಂಘದ ವತಿಯಿಂದ ಅನ್ನದಾನ ನಡೆ ಯಿತು.  ಕಲಾಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. 

ದುಶ್ಚಟವಿಲ್ಲದೆ ಇಷ್ಟು ವರ್ಷ ಯಕ್ಷರಂಗ ದಲ್ಲಿದ್ದರೂ ಸ್ವಂತ ಮನೆ ಮಾಡಿಕೊಳ್ಳ ಲಾಗದ ನಾನು, ಗೃಹ ನಿರ್ಮಾಣ ಸಂಬಂಧ ಅರ್ಥಿಕ ಅಡಚಣೆ ಪರಿಹರಿ ಸಲು  ಪುಣೆಯಲ್ಲಿ  ಯಕ್ಷಗಾನ ಆಯೋಜಿಸಿದ್ದೇನೆ.  ಸಹಕರಿಸಿದವರಿಗೆ ಚಿರಋಣಿ. ಆದರೂ ನೀರಿಕ್ಷೆಯಷ್ಟು ಸಫ‌ಲತೆ ಪಡೆಯಲಾಗಲಿಲ್ಲ. ಪುಣೆಯ ಕಲಾಪೋಷಕರ ಸಹಾಯ ಯಾಚಿಸುತ್ತಿದ್ದೇನೆ. 
-ಕೊಳ್ತಿಗೆ ನಾರಾಯಣ ಗೌಡ, ಯಕ್ಷಗಾನ ಕಲಾವಿದ

ಚಿತ್ರ-ವರದಿ:ಹರೀಶ್‌ ಮೂಡಬಿದ್ರೆ ಪುಣೆ

Advertisement

Udayavani is now on Telegram. Click here to join our channel and stay updated with the latest news.

Next