ಕುಂದಾಪುರ: ಕೊಡಪಾಡಿಯ ಸವ್ಯಸಾಚಿ ಯುವಕ ಮಂಡಲದ 16ನೇ ವಾರ್ಷಿಕೋತ್ಸವ ಕೊಡಪಾಡಿ ಸರಕಾರಿ ಕಿ. ಪ್ರಾ. ಶಾಲೆಯ ವಠಾರದಲ್ಲಿ ಜರಗಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಂದಾಪುರ ತಾ.ಪಂ.ಅಧಿಕಾರಿ ಕೆ. ರಾಮಚಂದ್ರ ಮಯ್ಯ ಸಂಘ ಸಂಸ್ಥೆಗಳು ಸಮಾಜಮುಖೀ ಕಾರ್ಯಗಳನ್ನು ನಡೆಸುತ್ತಿರಬೇಕು. ಪರಿಸರದ ಜನರಿಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ರೂಪಿಸುವುದರ ಮೂಲಕ ಜನರ ಅಭಿವೃದ್ಧಿಗೆ ಸಹಕಾರ ನೀಡಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಪತ್ರಕರ್ತ ಬಿ. ರಾಘವೇಂದ್ರ ಪೈ, ಉಡುಪಿ ಸವಿತಾ ಸಮಾಜದ ಸಂಘಟನಾ ಕಾರ್ಯದರ್ಶಿ ಮಂಜುನಾಥ ಸಾಲಿಯಾನ್, ಗಂಗೊಳ್ಳಿಯ ಉದ್ಯಮಿ ಜಿ. ವಿಟuಲ ಭಾಸ್ಕರ ಶೆಣೈ ಶುಭಾಶಂಸನೆ ಗೈದರು.
ಇದೇ ಸಂದರ್ಭ ನಿವೃತ್ತ ಮುಖ್ಯೋಪಾಧ್ಯಾಯ ನಾರಾಯಣ ಬೈಂದೂರು ಅವರನ್ನು ಸಮ್ಮಾನಿಸಿ, ಗೌರವಿಸಲಾಯಿತು. ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯಿನಿ ವೀಣಾ, ತಾಯಿ ಮಾರಿಕಾಂಬಾ ಮಹಿಳಾ ಮಂಡಳಿ ಅಧ್ಯಕ್ಷೆ ಕವಿತಾ ಗಾಣಿಗ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಾಮಚಂದ್ರ ಗಾಣಿಗ, ಸವ್ಯಸಾಚಿ ಯುವಕ ಮಂಡಲದ ಅಧ್ಯಕ್ಷ ಸುಧೀರ ಗಾಣಿಗ ಉಪಸ್ಥಿತರಿದ್ದರು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಸಂಘದ ಸಲಹೆಗಾರ ಭಾಸ್ಕರ ಗಾಣಿಗ ಸ್ವಾಗತಿಸಿದರು. ಸಂಗೀತಾ ಪೂಜಾರಿ ಸಮ್ಮಾನಿತರನ್ನು ಪರಿಚಯಿಸಿದರು. ಶಿಕ್ಷಕಿ ಸುಚಿತ್ರಾ ಪೂಜಾರಿ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸುನೀತಾ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿ ಶೀಲಾವತಿ ವಂದಿಸಿದರು.