Advertisement

ನರಸಿಂಹರಾಜು ಹೆಸರಲ್ಲಿ ಪ್ರಶಸ್ತಿ

11:16 AM Jul 25, 2018 | |

ಚೇತೋಹಾರಿ ಹಾಸ್ಯಕ್ಕೆ ಮತ್ತೂಂದು ಹೆಸರೇ ತಿಪಟೂರು ರಾಮರಾಜು ನರಸಿಂಹರಾಜು. ಇವರು ಕನ್ನಡದ “ಚಾರ್ಲಿ ಚಾಪ್ಲಿನ್‌’ಎಂದೇ ಹೆಸರಾದವರು. ಸದಾ ನೆನಪಾಗುವ ಅಪರೂಪದ ಹಾಸ್ಯ ಕಲಾವಿದ. ಎಲ್ಲರ ಮನದಲ್ಲೂ ಕಚಗುಳಿ ಇಟ್ಟು ಮರೆಯಾದ “ಹಾಸ್ಯ ಚಕ್ರವರ್ತಿ’. ಕಪು-ಬಿಳುಪು ಕಾಲದಲ್ಲೇ ಕನ್ನಡ ಚಿತ್ರರಂಗದ ವೇಗ ಹೆಚ್ಚಿಸಿದ ಕೀರ್ತಿ ಅವರದು.

Advertisement

ಅವರೀಗ ನಮ್ಮೊಂದಿಗಿಲ್ಲ. ಆದರೆ, ಹಾಸ್ಯ ಪಾತ್ರಗಳ ಮೂಲಕ ಇಂದಿಗೂ ಜೀವಂತ. ಜುಲೈ 24 ಅವರ ಹುಟ್ಟುಹಬ್ಬ. 95ನೇ ಹುಟ್ಟುಹಬ್ಬದ ಸವಿನೆನಪಿಗೆ ಅವರ ಅಭಿಮಾನಿ ವರ್ಗ ಹುಟ್ಟುಹಬ್ಬ ಆಚರಿಸಿದೆ, ಕುಟುಂಬದಲ್ಲೂ ಸಂಭ್ರಮವಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕುಟುಂಬ ವರ್ಗದೊಂದಿಗೆ ಸವಿನೆನಪು ಹಂಚಿಕೊಂಡಿದೆ.

ಅವರ ಕುಟುಂಬ ವರ್ಗ, ನರಸಿಂಹರಾಜು ಹುಟ್ಟುಹಬ್ಬದ ನೆನಪಿಗೆ ಇನ್ನು ಮುಂದೆ ಪ್ರತಿ ವರ್ಷ ಹೊಸ ಕಾರ್ಯಕ್ರಮ ನಡೆಸಲು ಸಜ್ಜಾಗಿದೆ. ಹೌದು, “ಬೆಂಗಳೂರು ಇಂಟರ್‌ನ್ಯಾಷನಲ್‌ ಕಾಮಿಡಿ ಶಾರ್ಟ್ಸ್’ ಇನ್‌ ಮೆಮೋರಿ ಆಫ್ ನರಸಿಂಹರಾಜು’ ಹೆಸರಲ್ಲಿ ಅವಾರ್ಡ್‌ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದೆ.

ಈ ಕುರಿತು ವಿವರ ಕೊಡುವ ಅವರ ಮೊಮ್ಮಗ ನಿರ್ದೇಶಕ ಕಮ್‌ ನಿರ್ಮಾಪಕ ಅರವಿಂದ್‌, “ಇಷ್ಟು ವರ್ಷ ನರಸಿಂಹರಾಜು ಅವರ ಹುಟ್ಟಹಬ್ಬದ ಆಚರಣೆ ಮತ್ತು ನೆನಪಷ್ಟೇ ಇರುತ್ತಿತ್ತು. ಆದರೆ, ಅವರ ನೆನಪು ಸದಾ ಇರಬೇಕು ಎಂಬ ಕಾರಣಕ್ಕೆ ಕಾಮಿಡಿ ಶಾರ್ಟ್ಸ್ ಫಿಲ್ಮ್ ಅವಾರ್ಡ್‌ ನಡೆಸಬೇಕು ಅಂತ ಕಳೆದ ಮೂರ್‍ನಾಲ್ಕು ವರ್ಷಗಳಿಂದಲೂ ಚರ್ಚಿಸಲಾಗುತ್ತಿತ್ತು.

ಈ ವರ್ಷದಿಂದ ಅದಕ್ಕೆ ಚಾಲನೆ ಕೊಡಲು ಕುಟುಂಬ ತೀರ್ಮಾನಿಸಿದೆ. ಈ ಮೂಲಕ ನರಸಿಂಹರಾಜು ಅವರ ಹೆಸರನ್ನು ಇನ್ನಷ್ಟು ಶೋಕೇಸ್‌ ಮಾಡಲು ಅನುಕೂಲವಾಗುತ್ತಿದೆ. ಭಾರತದಲ್ಲಿ ಕಾಮಿಡಿ ಶಾರ್ಟ್‌ ಫಿಲ್ಮ್ ಫೆಸ್ಟಿವಲ್‌ ನಡೆಸುತ್ತಿರುವುದು ಇದೇ ಮೊದಲು. 20 ನಿಮಿಷ ಅವಧಿಯ ಕಾಮಿಡಿ ಶಾರ್ಟ್‌ ಫಿಲ್ಮ್ಗಳನ್ನು ಆಹ್ವಾನಿಸಿ, ಉತ್ತಮ ಹಾಸ್ಯ ಕಿರುಚಿತ್ರಗಳಿಗೆ ಪ್ರಶಸ್ತಿ ನೀಡಲಾಗುವುದು.

Advertisement

ಇದರೊಂದಿಗೆ ಕನ್ನಡ ಚಿತ್ರರಂಗವನ್ನೂ ಬೆಸೆಯುತ್ತಿದ್ದೇವೆ. ಆ ವರ್ಷದ ಬೆಸ್ಟ್‌ ಕಾಮಿಸಿ ಚಿತ್ರ, ಕಾಮಿಡಿ ಸಿನಿಮಾ ಡೈರೆಕ್ಟರ್‌, ಕಾಮಿಡಿ ಆ್ಯಕ್ಟರ್‌ ಅವರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ. ಇಲ್ಲಿ ಹೊಸಬರು ಮತ್ತು ಹಳಬರಿಗೂ ಅವಕಾಶವಿದೆ’ ಎನ್ನುತ್ತಾರೆ ಅರವಿಂದ್‌. ಇನ್ನು, ಭಾರತದ ಎಲ್ಲಾ ಭಾಷೆ ಚಿತ್ರರಂಗದ ಮೇರು ಹಾಸ್ಯ ನಟರನ್ನು ಗುರುತಿಸಿ ಅವರಿಗೆ ನರಸಿಂಹರಾಜು ಅವರ ಹೆಸರಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲು ತೀರ್ಮಾನಿಸಲಾಗಿದೆ.

ಈಗಾಗಲೇ ಕಾಮಿಡಿ ಶಾರ್ಟ್‌ ಫಿಲ್ಮ್ಗಳ ಆಯ್ಕೆಗಾಗಿ ಆನಂದ್‌ ವರದರಾಜ್‌ ನೇತೃತ್ವದ ಸಮಿತಿ ಇದೆ. ಜೊತೆಗೆ ನರಸಿಂಹರಾಜು ಕುಟುಂಬವೂ ಇರಲಿದೆ. ಅವಿನಾಶ್‌ ನರಸಿಂಹರಾಜು ಅವರ ಸ್ಟುಡಿಯೋದಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದ್ದು, ಆ ನಂತರ ಬೆಂಗಳೂರಿನ ಅನೇಕ ಕೇಂದ್ರಗಳಲ್ಲಿ ಕಿರುಚಿತ್ರೋತ್ಸವ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next