Advertisement

ಹಿರಿಯ ಭಾಗವತ ಮತ್ಯಾಡಿ ನರಸಿಂಹ ಶೆಟ್ಟಿ

09:35 AM Jul 11, 2021 | Team Udayavani |

ತೆಕ್ಕಟ್ಟೆ : ಸುಮಾರು ಅರ್ಧ ಶತಮಾನಗಳ ಕಾಲ ಯಕ್ಷಗಾನ ಸಾರಸ್ವತ ಲೋಕವನ್ನು ತನ್ನ ಕಂಠಸಿರಿಯ ಮೂಲಕ ಶ್ರೀಮಂತಗೊಳಿಸಿದ ಬಡಗುತಿಟ್ಟಿನ ಸಾಂಪ್ರದಾಯ ಶೈಲಿಯ ಅಗ್ರಮಾನ್ಯ ಭಾಗವತ ಮತ್ಯಾಡಿ ನರಸಿಂಹ ಶೆಟ್ಟಿ (95) ಅಸೌಖ್ಯದಿಂದ ಜು.10 ರಂದು ನಿಧನ ಹೊಂದಿದರು.

Advertisement

ಹಿರಿಯ ಭಾಗವತ ದಿ|ನಾರಣಪ್ಪ ಉಪ್ಪೂರ ಶಿಷ್ಯರಾಗಿ ತಾಳ, ರಾಗ ಜ್ಞಾನವನ್ನು ಸಂಪಾದಿಸಿಕೊಂಡು ಮೊತ್ತ ಮೊದಲು ಕೊಡವೂರು ಮೇಳದಲ್ಲಿ ಭಾಗವತರಾಗಿ ದುಡಿದರು. ಪೆರ್ಡೂರು ಮೇಳದಲ್ಲಿ  ಭಾಗವತ ಗುಂಡ್ಮಿ ರಾಮಚಂದ್ರ ನಾವಡರ ಒಡನಾಡಿಯಾಗಿ, ಮಾರ್ಗದರ್ಶನದಲ್ಲಿ ಕುಂಜಾಲು ಶೈಲಿಯ ಭಾಗವತಿಕೆ ಅಭ್ಯಾಸ ನಡೆಸಿ, ಭಾಗವತಿಕೆ ಮಟ್ಟುಗಳನ್ನು ಅಧ್ಯಾಯನ ನಡೆಸಿ , ರಂಗ ತಂತ್ರ, ನಡೆ, ಆಟ ಆಡಿಸುವ ಕಲೆಯನ್ನು ಕರಗತ ಮಾಡಿಕೊಂಡು , ಕೋಟ ಅಮೃತೇಶ್ವರೀ ಮೇಳದ ಲ್ಲಿ ಭಾಗವತರಾಗಿ ಸೇವೆ ಸಲ್ಲಿಸಿ, ಮಂದರ್ತಿ, ಮಾರಣಕಟ್ಟೆ ಮೇಳದಲ್ಲಿ ದುಡಿದು ಹಾರಾಡಿ ರಾಮ ಗಾಣಿಗ, ಕುಷ್ಟ ಗಾಣಿಗ, ವೀರಭದ್ರ ನಾಯ್ಕ , ಕೊಕ್ಕರ್ಣೆ ನರಸಿಂಹ, ನೀಲಾವರ ಮಹಾಬಲ ಶೆಟ್ಟಿ, ಮೊಳಹಳ್ಳಿ ಹೆರಿಯ ನಾಯ್ಕ, ಐರೋಡಿ ಗೋವಿಂದಪ್ಪ ರಂತಹ ಮಹಾನ್‌ ಕಲಾವಿದರನ್ನು ತಮ್ಮ ಹಾಡುಗಾರಿಕೆಯ ಮೂಲಕ ವಿಜೃಂಭಿಸಿದ್ದಾರೆ.

ಬಹುತೇಕ ತಿರುಗಾಟವನ್ನು ವಿದ್ಯುದ್ದಿ àಪ ಧ್ವನಿ ವರ್ಧಕಗಳಿಲ್ಲದೆ ಕಳೆದು, ತಮ್ಮ ಕಂಚಿನ ಕಂಠದ ಮೂಲಕ ಯಕ್ಷರಸಿಕರ ಮನ ಗೆದ್ದಿದ್ದಾರೆ. ಸುಮಾರು 40 ಪ್ರಸಂಗಗಳು ಕಂಠಪಾಠವಿದ್ದು ಜೋಡಾಟದ ಭಾಗವತರೆಂದೇ ಜನಜನಿತರು.

ಹಾರಾಡಿ ರಾಮ ಗಾಣಿಗ ಪ್ರಶಸ್ತಿ, ದಿ| ನಾರಣಪ್ಪ ಉಪ್ಪೂರ ಪ್ರಶಸ್ತಿ, ಎಂ. ಎಂ. ಹೆಗ್ಡೆ ಪ್ರಶಸ್ತಿ, ಬಣ್ಣದ ಸಕ್ಕಟ್ಟು ಪ್ರತಿಷ್ಠಾನದ ಪ್ರಶಸ್ತಿ, ಕಾರ್ಕಡ ಶ್ರೀನಿವಾಸ ಉಡುಪ ಪ್ರಶಸ್ತಿ, ಸೀತಾನದಿ ಪ್ರಶಸ್ತಿ, ಕರ್ನಾಟಕ ಜಾನಪದ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿ, ದಿ|ಕಾಳಿಂಗ ನಾವಡ ಪ್ರಶಸ್ತಿ ಮುಂತಾಗಿ ಮಾನ ಸಮ್ಮಾನಗಳು ಲಭಿಸಿವೆ.

ಮೃತರು ಓರ್ವ ಪುತ್ರ ಮೂವರು ಪುತ್ರಿಯರನ್ನು ಅಗಲಿದ್ದಾರೆ.

Advertisement

 

 

 

Advertisement

Udayavani is now on Telegram. Click here to join our channel and stay updated with the latest news.

Next