Advertisement

‘ಭಗವಂತ, ಭಕ್ತನ ಕೊಂಡಿ ಭಕ್ತಿ’

12:50 PM Apr 29, 2018 | Team Udayavani |

ಸುಬ್ರಹ್ಮಣ್ಯ:  ಭಕ್ತಿಪೂರ್ವಕ ಪ್ರಾರ್ಥನೆಗೆ ದೇವರು ಒಲಿದು ಹರಸುತ್ತಾರೆ. ಭಗವಂತ ಮತ್ತು ಭಕ್ತನ ನಡುವೆ ಭಕ್ತಿ ಕೊಂಡಿಯಾಗಿದೆ ಎಂದು ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.

Advertisement

ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾಸಂಸ್ಥಾನಮ್‌ನ ಶ್ರೀ ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದಲ್ಲಿ ಐದು ದಿನಗಳ ಕಾಲ ನಡೆಯುವ ನರಸಿಂಹ ಜಯಂತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಶುಕ್ರವಾರ ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಭಕ್ತಿಯ ಅಭಿವ್ಯಕ್ತಿಗೆ ಸಾಂಸ್ಕೃತಿಕ ಕಲೆಗಳ ಕೊಡುಗೆ ಅನನ್ಯವಾಗಿದೆ. ಕಲೆಗಳು ಮನಸ್ಸಿಗೆ ಮುದ ನೀಡುವುದರೊಂದಿಗೆ ಭಗವಂತನಿಗೆ ಅರ್ಪಿತವಾಗುವ ವಸ್ತುವಾಗಿದೆ. ಕಲೆಗಳ ಅನುಷ್ಠಾನವು ಅವಶ್ಯ ಎಂದರು.

ಮಠದ ದಿವಾನ ಸುದರ್ಶನ ಜೋಯೀಸ, ಕಲಾವಿದ ಯಜ್ನೇಶ್‌ ಆಚಾರ್‌ ಉಪಸ್ಥಿತರಿದ್ದರು. ಮುಖ್ಯ ಗುರು ಶ್ರೀಕೃಷ್ಣ ಶರ್ಮ ಸ್ವಾಗತಿಸಿ, ವಂದಿಸಿದರು. ಬಳಿಕ ಶ್ರೀ ಹನುಮನಗಿರಿ ಕೋದಂಡರಾಮ ಮೇಳದವರಿಂದ ಕಂಸ ವಿವಾಹ-ಕೃಷ್ಣಾರ್ಜುನ ಯಕ್ಷಗಾನ ಬಯಲಾಟ ನೆರವೇರಿತು.

Advertisement

Udayavani is now on Telegram. Click here to join our channel and stay updated with the latest news.

Next