ಕೋಲಾರ: ಸುಪ್ರೀಂ ಕೋರ್ಟ್ ತಡೆ ಯಾಜ್ಞೆ ತೆರವಾದ ನಂತರ ಕೆ.ಸಿ.ವ್ಯಾಲಿ ನೀರು ಲಕ್ಷ್ಮೀಸಾಗರ ಕೆರೆಯಿಂದ ನರಸಾಪುರ ಕೆರೆ ಸೇರಿ ಕೋಡಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕೆರೆಗಳು ಭರ್ತಿಯಾದರೆ ಈ ಭಾಗದ ಅಂತರ್ಜಲ ವೃದ್ಧಿಗೆ ಸಹಕಾರಿ. ರೈತರು ಈ ನೀರನ್ನು ನೇರವಾಗಿ ಕೃಷಿಗೆ ಬಳಸ ಬಾರದು ಎಂದು ತಿಳಿಸಿದರು.
ಅಂತರ್ಜಲ ಹೆಚ್ಚಳ: ರೈತರೊಂದಿಗೆ ಸಂವಾದ ನಡೆಸಿದ ಜಿಲ್ಲಾಧಿಕಾರಿ, ಪ್ರಸ್ತು ತ 250 ಎಂಎಲ್ಡಿ ನೀರು ಹರಿ ಯುತ್ತಿ ದೆ. ಮುಂದಿನ ದಿನಗಳಲ್ಲಿ ಹೆಚ್ಚು ವರಿ ನೀರು ಹರಿಯುವುದರಿಂದ ಅಂತ ರ್ಜ ಲ ಮಟ್ಟ ಹೆಚ್ಚಳವಾಗಲಿದೆ ಎಂದರು.
ಮುನ್ನೆಚ್ಚರಿಕೆ ವಹಿಸಿ: ರೈತರು ಯಾವುದೇ ಕಾರಣಕ್ಕೂ ಕೆರೆ ನೀರನ್ನು ಭತ್ತ ಬೆಳೆಯಲು ಉಪಯೋಗಿಸ ಬಾರದು, ಅಕ್ರಮವಾಗಿ ತೂಬು ತೆರೆದು ಹೊಲಗದ್ದೆಗಳಿಗೆ ನೀರನ್ನು ಬಳಸಿಕೊಳ್ಳ ಬಾರದು, ಕೆ.ಸಿ. ವ್ಯಾಲಿ ನೀರಿನ ಜತೆಗೆ ಮಳೆ ಬರುವ ಮುನ್ಸೂಚನೆ ಇರುವುದ ರಿಂದ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿದರು.
ಇಳುವರಿ ಪಡೆಯಿರಿ: ಕೆ.ಸಿ. ವ್ಯಾಲಿ ಮೂಲಕ ಮತ್ತೆ ಕೆರೆಗಳಲ್ಲಿ ನೀರು ಶೇಖರಣೆಯಾಗುತ್ತಿರುವುದು ಸಂತಸದ ಸಂಗತಿ. ಎಲ್ಲಾ ಕೆರೆಗಳು ಭರ್ತಿಯಾದರೆ ಜಿಲ್ಲೆಯ ನೀರಿನ ಸಮಸ್ಯೆ ಬಗೆಹರಿಯು ತ್ತದೆ. ಮುಂದಿನ ದಿನಗಳಲ್ಲಿ ರೈತರು ಅಂತರ್ಜಲ ಬಳಸಿ ಉತ್ತಮ ಇಳುವರಿ ಪಡೆಯಬಹುದೆಂದರು. ಕೆರೆ ನೀರು ಸಂರಕ್ಷಣೆಗಾಗಿ ಲಕ್ಷ್ಮೀ ಸಾಗರ ಇನ್ನಿತರ ಹಳ್ಳಿಗಳ ಜನರು ಕೆರೆಗಳ ಸುತ್ತಮುತ್ತಲಿನ ನೀಲಗಿರಿ ಮರಗಳನ್ನು ತೆರವುಗೊಳಿ ಸುವ ಮೂಲಕ ಪ್ರಜ್ಞಾ ವಂತಿಕೆ ಪ್ರದರ್ಶಿಸಿದ್ದಾರೆಂದು ಶ್ಲಾಘಿಸಿ ದರು.
ಹೊಂಡಗಳಲ್ಲಿ ನೀರು ಸಂಗ್ರಹ: ಕೆರೆಯ ಅಕ್ಕಪಕ್ಕದ ಜಮೀನುಗಳಲ್ಲಿ ರೈತರು ಕೃಷಿ ಹೊಂಡಗಳನ್ನು ನಿರ್ಮಿಸಿ ಕೊಂಡಿದ್ದು, ಇತ್ತೀಚೆಗೆ ಬಿದ್ದ ಮಳೆ ಹಾಗೂ ಕೆರೆ ಕೋಡಿ ಹರಿಯುತ್ತಿರು ವುದರಿಂದ ಹೊಂಡಗಳಲ್ಲಿ ನೀರು ಸಂಗ್ರಹವಾಗಿದೆ ಎಂದರು.
ಉತ್ತಮ ಬೆಳವಣಿಗೆ: ಜಿಲ್ಲೆಯಲ್ಲಿ ಬರ ಪರಿಸ್ಥಿತಿ ತೀವ್ರಗೊಂಡಿರುವುದರಿಂದ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗಿತ್ತು. ಪ್ರಸ್ತುತ ಕೃಷಿ ಹೊಂಡ ಗಳಲ್ಲಿ ನೀರು ಸಂಗ್ರಹವಾಗಿರುವುದ ರಿಂದ ಇದೇ ನೀರನ್ನು ಬಳಸಿ ಹಸಿರು ಮೇವು,ತರಕಾರಿ ಬೆಳೆಯಲಾರಂಭಿ ಸಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.