Advertisement
ತಾಲೂಕಿನ ಬನಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮೂಗನೂರ ಗ್ರಾಮದಲ್ಲಿ ತಾಲೂಕು ಆರೋಗ್ಯಾಕಾರಿಗಳ ಕಾರ್ಯಲಯ, ಗ್ರಾಮ ಪಂಚಾಯಿತಿ ಬನಹಟ್ಟಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಜಗಾಪೂರ ಅವರ ಸಂಯುಕ್ತ ಆಶ್ರಯದಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯ ಕೂಲಿ ಕಾರ್ಮಿಕರಿಗೆ ಆರೋಗ್ಯ ತಪಾಸಣೆ ಹಾಗೂ ಆರೋಗ್ಯದ ಕುರಿತು ಮೂಗನೂರ ಗ್ರಾಮದಲ್ಲಿ ಕಾಮಗಾರಿ ಸ್ಥಳದಲ್ಲಿ ನಡೆದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಸಾಂಕ್ರಾಮಿಕ ರೋಗಗಳಾದ ಅಧಿಕ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್, ಪಾರ್ಶ್ವವಾಯುನಂತಹ ರೋಗಗಳು ಹರಡುವ ಬಗ್ಗೆ ಮಾಹಿತಿ ನೀಡಿದರು.
ಗುನ್ಯಾ, ಮಲೇರಿಯಾ, ಮೆದುಳು ಜ್ವರ ಮತ್ತು ಆನೆಕಾಲು ರೋಗಗಳನ್ನು ನಿಯಂತ್ರಿಸುವಲ್ಲಿ ಸೊಳ್ಳೆ, ಸಾರ್ವಜನಿಕರು ಹಾಗೂ ವಿವಿಧ ಇಲಾಖೆಗಳ ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದರು.
Related Articles
Advertisement
ಎರಡು ವಾರ ಅಥವಾ ಅದಕ್ಕಿಂತ ಹೆಚ್ಚು ಸತತವಾದ ಕೆಮ್ಮು, ಕೆಮ್ಮಿನ ಜೊತೆ ಕಫ, ಕಫದೊಂದಿಗೆ ರಕ್ತ, ಎದೆನೋವು,ಹಸಿವಾಗದೆ ಇರುವುದು, ತೂಕ ಕಡಿಮೆಯಾಗುವುದು, ಸಂಜೆ ವೇಳೆ ಜ್ವರ ಇವೆ ಮೊದಲಾದವುಗಳ ಕ್ಷಯರೋಗದ
ಲಕ್ಷಣಗಳಾಗಿವೆ ಎಂದರು. ಇಂತಹ ಲಕ್ಷಣಗಳು ಕಂಡು ಬಂದಲ್ಲಿ ಆರೋಗ್ಯ ಸಿಬ್ಬಂದಿ, ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ ಕಫ ಪರೀಕ್ಷೆ ಮಾಡಿಸಬೇಕು. ಖಚಿತಪಟ್ಟಲ್ಲಿ 6ರಿಂದ 9 ತಿಂಗಳವರೆಗೆ ಉಚಿತ ಚಿಕಿತ್ಸೆ ನೀಡಿ ಗುಣಪಡಿಸಬಹುದು ಎಂದು ತಿಳಿಸಿದರು. ಎನ್.ಎಲ್.ಮಡಿವಾಳರ ಮಾತನಾಡಿ, ಎಚ್‌ಐವ್ಹಿ, ಏಡ್ಸ್ ಹರಡುವ ವಿಧಾನಗಳಾದ ಅಸುರಕ್ಷಿತ ಲೈಂಗಿಕ ಕ್ರಿಯೆ, ಸಂಸ್ಕರಿಸದ ಸೂಜಿ, ಸಿರಿಂಜ್, ಸೋಂಕಿತ ತಾಯಿಯಿಂದ ಮಗುವಿಗೆ, ಸಂಸ್ಕರಿಸದ ರಕ್ತ ಪಡೆಯುವುದರಿಂದ ರೋಗ ಹರಡುತ್ತದೆ ಎಂದು ತಿಳಿಸಿದರು. ಪಿಡಿಒ ಎಂ.ಎಂ.ಪೂಜಾರ ಮಾತನಾಡಿ, ಮೇ 10ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲರು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ತಿಳಿಸಿದರು. 150ಕ್ಕೂ ಹೆಚ್ಚು ಕಾರ್ಮಿಕರು ಭಾಗವಹಿಸಿದ್ದರು. 70 ಜನರಿಗೆ ಅಧಿಕ ರಕ್ತದೊತ್ತಡ, ಮಧುಮೇಹ ರೋಗಗಳ ತಪಾಸಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಎ.ಎಂ.ಕಾಡದೇವರಮಠ, ಲಕ್ಷಿ¾à ಮನಗೇನಿ, ಪದ್ಮಶ್ರೀ ಚೌಗಲೆ, ಅಜಯ್ ನೀಲವಾನಿ, ಶೋಭಾ ಮಲ್ಲನಗೌಡ್ರ, ಬಸವರಾಜ ಕಲ್ಲಾಪೂರ ಹಾಜರಿದ್ದರು.