Advertisement

ನರಗುಂದ: ಅಭಿವ್ಯಕ್ತಿ ಸ್ವಾತಂತ್ರ್ಯದ ಅಗತ್ಯ ಪ್ರತಿಪಾದಿಸಿದ ಡಿವಿಜಿ

05:39 PM Mar 19, 2024 | Team Udayavani |

ಉದಯವಾಣಿ ಸಮಾಚಾರ
ನರಗುಂದ: ಅಭಿಪ್ರಾಯ ಸ್ವಾತಂತ್ರ್ಯದ ಅಗತ್ಯವನ್ನು ಕವಿ ಡಿ.ವಿ. ಗುಂಡಪ್ಪ ಎಲ್ಲ ಕಾಲದಲ್ಲೂ ಎತ್ತಿ ಹಿಡಿದು ಬೆಂಗಳೂರಿನ ಇಂಗ್ಲಿಷ್‌ ರೆಸಿಡೆಂಟರ್‌ ಕೋಪಕ್ಕೆ ಗುರಿಯಾಗಿದ್ದರು ಎಂದು ಕಸಾಪ ತಾಲೂಕಾಧ್ಯಕ್ಷ ಪ್ರೊ| ಬಿ.ಸಿ. ಹನಮಂತಗೌಡ್ರ ಬಣ್ಣಿಸಿದರು.

Advertisement

ಪಟ್ಟಣದ ಯಡೆಯೂರ ಸಿದ್ಧಲಿಂಗೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ನಡೆದ ಕನ್ನಡ ಸಂಘದ ಉದ್ಘಾಟನೆ ಹಾಗೂ ಕವಿ ಡಿ.ವಿ. ಗುಂಡಪ್ಪ ಅವರ ಜಯಂತಿ ಕಾರ್ಯಕ್ರಮದಲ್ಲಿ ಡಿವಿಜಿಯವರ ಬದುಕು-ಬರಹ ವಿಷಯವಾಗಿ ಅವರು ಉಪನ್ಯಾಸ ನೀಡಿದರು.

ಸಂಸ್ಥೆ ಕಾರ್ಯದರ್ಶಿ ಮಹೇಶಗೌಡ ಪಾಟೀಲ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ಕನ್ನಡ ಸಂಘಗಳ ರಚನೆ ಹಾಗೂ ಅವುಗಳ ಕಾರ್ಯಾಚರಣೆ ತೀರಾ ವಿರಳವಾಗುತ್ತಿವೆ. ಇಂತಹ ಸಂದರ್ಭ ಇಂದು ಕನ್ನಡ ಸಂಘದ ಉದ್ಘಾಟನೆ ಅವಿಸ್ಮರಣೀಯ ಎಂದರು.

ವಿ.ಎಸ್‌. ಪಾರ್ವತಿ ಮಾತನಾಡಿ, ಕನ್ನಡ ಸಂಘ ಹಾಗೂ ಕವಿ ಜಯಂತಿ ಕಾರ್ಯಕ್ರಮಗಳು ಶೈಕ್ಷಣಿಕವಾಗಿ ಪಠ್ಯಪೂರಕ ಚಟುವಟಿಕೆಗಳಾಗಿದ್ದು ಇಂತಹ ಚಟುವಟಿಕೆಗಳಲ್ಲಿ ಭಾವಿ ಶಿಕ್ಷಕರಾಗುವ ವಿದ್ಯಾರ್ಥಿಗಳು ಪಾಲ್ಗೊಂಡು ಮಕ್ಕಳಿಗೂ ಅದರ
ಉದ್ದೇಶ ತಿಳಿಸಬೇಕೆಂದು ಹೇಳಿದರು.

ಕಾಲೇಜಿನ ಕನ್ನಡ ಉಪನ್ಯಾಸಕ ಎಂ.ಪಿ. ಕ್ಯಾತನಗೌಡ್ರ, ಡಿವಿಜಿ ಬುದ್ಧಿವಂತರ ಜಾತಿ ಮತ್ತು ಹೃದಯವಂತರ ಜಾತಿಗಳನ್ನು ಗುರುತಿಸಿದ್ದರು. ಆದರೆ ಇದರಲ್ಲಿ ಹೃದಯವಂತರೇ ನಿರ್ಣಾಯಕ ಎಂದು ಅವರು ತೀರ್ಮಾನಿಸಿದ್ದರು ಎಂದರು.

Advertisement

ಸೌಭಾಗ್ಯ ಲಕ್ಷ್ಮೀ ಮಾನಣ್ಣವರ ಹಾಗೂ ತೇಜಸ್ವಿನಿ ದುಂಡೂರ ಕವಿ ಡಿವಿಜಿ ಪರಿಚಯ ಮಾಡಿದರು ಕಾಲೇಜಿನ ಪ್ರಾಚಾರ್ಯರು
ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next