Advertisement

ಎನ್‌ಎಸ್‌ಯುಐ ಕಾರ್ಯಕರ್ತರಿಂದ ಪ್ರಧಾನ ಮಂತ್ರಿಗೆ ನ್ಯಾಪ್ಕಿನ್‌ ಪೋಸ್ಟ್

11:21 AM Jul 14, 2017 | Team Udayavani |

ಬೆಂಗಳೂರು: ಸ್ಯಾನಿಟರಿ ನ್ಯಾಪ್ಕಿನ್‌ ಪ್ಯಾಡ್‌ಗಳ ಮೇಲೆ ಶೇಕಡಾ 12 ರಷ್ಟು ತೆರಿಗೆ ವಿಧಿಸಿರುವುದನ್ನು ವಿರೋಧಿಸಿ ಎನ್‌ಎಸ್‌ಯುಐ ಮಹಿಳಾ ಘಟಕದ ಸದಸ್ಯೆಯರು ಪ್ರಧಾನಿ ನರೇಂದ್ರ ಮೋದಿಗೆ  ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಅಂಚೆ ಮೂಲಕ ಕಳುಹಿಸಿ ಪ್ರತಿಭಟಿಸಿದ್ದಾರೆ. 

Advertisement

ಪ್ರಧಾನಿ ಅಷ್ಟೇ ಅಲ್ಲದೆ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟಿ, ಮಹಿಳಾ ಸಚಿವೆಯರಾದ ಸುಷ್ಮಾ ಸ್ವರಾಜ್‌, ಸ್ಮತಿ ಇರಾನಿ ಹಾಗೂ ರಾಜ್ಯ ಬಿಜೆಪಿ ಮಹಿಳಾ ಸಹ ವಕ್ತಾರರಾಗಿರುವ ಮಾಳವಿಕಾ ಅವಿನಾಶ್‌ಗೂ ಅಂಚೆ ಮೂಲಕ ನ್ಯಾಪ್ಕಿನ್‌ ಕಳುಹಿಸಿಕೊಟ್ಟಿದ್ದಾರೆ.

ನಗರದ ಬಿಎಂಎಸ್‌ ಕಾಲೇಜಿನಿಂದ ಬಸವನಗುಡಿ ಕೇಂದ್ರ ಅಂಚೆ ಕಚೇರಿವರೆಗೂ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿದ ಮಹಿಳಾ ಕಾರ್ಯಕರ್ತೆಯರು ಕೇಂದ್ರ ಸರ್ಕಾರ ಸ್ಯಾನಿಟರಿ ನ್ಯಾಪ್ಕಿನ್‌ ಮೇಲೆ ಜಿಎಸ್‌ಟಿ ತೆರಿಗೆ ವಿಧಿಸಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ತಕ್ಷಣವೇ ತನ್ನ ನಿರ್ಧಾರ ವಾಪಸ್‌ ಪಡೆದು ಮಹಿಳೆಯರಿಗೆ ಉಚಿತ ನ್ಯಾಪ್ಕಿನ್‌ ಯೋಜನೆ ರೂಪಿಸಬೇಕು ಎಂದು  ಆಗ್ರಹಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next