ಲಂಡನ್: ಫ್ರೆಂಚ್ ಓಪನ್‌ನಿಂದ ಅರ್ಧದಲ್ಲೇ ಹೊರನಡೆದು ಸುದ್ದಿಯಾಗಿದ್ದ ಜಪಾನಿನ ಟೆನಿಸ್ ತಾರೆ ನವೋಮಿ ಒಸಾಕಾ ಮುಂಬರುವ ವಿಂಬಲ್ಡನ್ ಪಂದ್ಯಾವಳಿಯಿಂದಲೂ ದೂರ ಉಳಿಯಲಿದ್ದಾರೆ.
ವೈಯಕ್ತಿಕ ಕಾರಣಗಳಿಂದ ಅವರು ಈ ನಿರ್ಧಾರ ತೆಗೆದುಕೊಂಡಿದ್ದು, ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದ ಬ್ರಿಟಿಷ್ ಮಾಧ್ಯಮವೊಂದು ವರದಿ ಮಾಡಿದೆ.
“ಒಸಾಕಾ ವೈಯಕ್ತಿಕ ಕಾರಣಗಳಿಂದ ವಿಂಬಲ್ಡನ್‌ನಲ್ಲಿ ಆಡುತ್ತಿಲ್ಲ. ಕುಟುಂಬಮತ್ತು ಸ್ನೇಹಿತರೊಂದಿಗೆಕಾಲ ಕಳೆಯುವುದು ಅವರ ಯೋಜನೆಯಾಗಿದೆ. ಆದರೆ ಒಲಿಂಪಿಕ್ಸ್‌ನಲ್ಲಿ ಆಡಲಿದ್ದಾರೆ. ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ಆಡುವುದು ಅವರ ಪಾಲಿಗೆ ರೋಮಾಂಚನಕಾರಿ ಅನುಭವ ಆಗಲಿದೆ’ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಹಾರುವ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಇನ್ನಿಲ್ಲ
ಸ್ಪೇನ್ ಟೆನಿಸಿಗ ರಫಾಯೆಲ್ ನಡಾಲ್ ವಿಂಬಲ್ಡನ್ ಮತ್ತು ಒಲಿಂಪಿಕ್ಸ್ ಪಂದ್ಯಾವಳಿಯಿಂದ ಹಿಂದೆ ಸರಿದ ಒಂದೇ ದಿನದಲ್ಲಿ ಒಸಾಕಾ ಅವರ ನಿರ್ಧಾರ ಪ್ರಕಟಗೊಂಡಿದೆ