Advertisement
ರವಿವಾರ ಮುಗಿದ “ರೋಜರ್ ಕಪ್’ ಪಂದ್ಯಾವಳಿಯ ಕ್ವಾರ್ಟರ್ ಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್‌ಗೆ ಶರಣಾದರೂ ಒಸಾಕಾ ನಂ.1 ಆಗಿ ಮೂಡಿಬಂದದ್ದು ವಿಶೇಷ. ಇದಕ್ಕೆ ಕಾರಣ, ಇದೇ ಕೂಟದಲ್ಲಿ ಆ್ಯಶ್ಲಿ ಬಾರ್ಟಿ ಮತ್ತು ಕ್ಯಾರೋಲಿನಾ ಪ್ಲಿಸ್ಕೋವಾ ಅನುಭವಿಸಿದ ವೈಫಲ್ಯ. ಇದರಿಂದ ಕಳೆದ 7 ವಾರಗಳ ಕಾಲ ಅಗ್ರಸ್ಥಾನದಲ್ಲಿದ್ದ ಆಸ್ಟ್ರೇಲಿಯದ ಆ್ಯಶ್ಲಿ ಬಾರ್ಟಿ ಎರಡಕ್ಕಿಳಿದರು. ಪ್ಲಿಸ್ಕೋವಾ ಮೂರರಲ್ಲೇ ಉಳಿದರು.ಸತತವಾಗಿ ಯುಎಸ್ ಓಪನ್, ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದ ನವೋಮಿ ಒಸಾಕಾ ಕಳೆದ ಜನವರಿಯಲ್ಲಿ ಅಗ್ರಸ್ಥಾನಕ್ಕೇರಿ ಇತಿಹಾಸ ನಿರ್ಮಿಸಿದ್ದರು. ಜಪಾನಿನ ಮೊಟ್ಟಮೊದಲ ನಂ.1 ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಬಳಿಕ ಆ್ಯಶ್ಲಿ ಬಾರ್ಟಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದು ಅಗ್ರಸ್ಥಾನದ ಗೌರವ ಸಂಪಾದಿಸಿದ್ದರು.
ಪುರುಷರ ರ್‍ಯಾಂಕಿಂಗ್‌ನಲ್ಲಿ ಮಹತ್ತರ ಬದಲಾವಣೆ ಸಂಭವಿಸಿಲ್ಲ. ಸರ್ಬಿಯಾದ ನೊವಾಕ್ ಜೊಕೋವಿಕ್ ಅಗ್ರಸ್ಥಾನ ಕಾಯ್ದು ಕೊಂಡಿದ್ದಾರೆ. ನಡಾಲ್, ಫೆಡರರ್, ಥೀಮ್ ಅನಂತರದ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಆದರೆ ನಿಶಿಕೊರಿ, ಜ್ವೆರೇವ್, ಮೆಡ್ವೆಡೇವ್ ಒಂದೊಂದು ಸ್ಥಾನ ಮೇಲೇರಿದ್ದಾರೆ. ಸಿಸಿಪಸ್‌ಗೆ 2 ಸ್ಥಾನ ನಷ್ಟವಾಗಿದೆ.