Advertisement

ಜಾರ್ಜ್‌ ವಿರುದ್ಧ ಕಸ ಮಾಫಿಯಾ ನಂಟಿನ ಆರೋಪ!

11:41 AM Jan 25, 2017 | Team Udayavani |

ಬೆಂಗಳೂರು: “ನಗರದ ಕಸ ವಿಲೇವಾರಿ ಸಂಬಂಧ ಹೈಕೋರ್ಟ್‌ ಆದೇಶವನ್ನೇ ಬಂಡವಾಳವನ್ನಾಗಿಸಿಕೊಂಡ ಗುತ್ತಿಗೆದಾರರು ಕೋಟ್ಯಂತರ ರೂಪಾಯಿ ಹಣ ಲೂಟಿ ಮಾಡುತ್ತಿದ್ದಾರೆ. ಕಸದ ಮಾಫಿಯಾದಲ್ಲಿ ಸಚಿವ ಕೆ.ಜೆ.ಜಾರ್ಜ್‌ ಸೇರಿದಂತೆ ಕಾಂಗ್ರೆಸ್‌ನ ಕೆಲವು ಮುಖಂಡರು ಶಾಮೀಲಾಗಿದ್ದಾರೆ,” ಎಂದು  ಬಿಬಿಎಂಪಿ ಮಾಜಿ ಸದಸ್ಯ ಎನ್‌ ಆರ್‌ ರಮೇಶ್‌ ಗಂಭೀರ ಆರೋಪ ಮಾಡಿದ್ದಾರೆ. 

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕಸ ವಿಲೇವಾರಿ ಹೆಸರಿನಲ್ಲಿ ಗುತ್ತಿಗೆದಾರರು ಪಾಲಿಕೆಯ ಹಣ ನುಂಗುತ್ತಿದ್ದಾರೆ. ಕಾಂಗ್ರೆಸ್‌ನ ಪ್ರಭಾವಿ ಜನಪ್ರತಿನಿಧಿಗಳನ್ನು ಕಸದ ಮಾಫಿಯಾ ತನ್ನ ಮುಷ್ಠಿಯಲ್ಲಿಟ್ಟುಕೊಂಡಿದೆ. ಕಾಲಕಾಲಕ್ಕೆ ಕಪ್ಪಕಾಣಿಕೆ ಒಪ್ಪಿಸಲಾಗುತ್ತಿದೆ. ಈ ಮೂಲಕ ಪಕ್ಷದ ನಿಧಿಗೆ ಹಣ ಪಡೆದುಕೊಳ್ಳುವ ಹುನ್ನಾರ ನಡೆಸುತ್ತಿರುವ ಅನುಮಾನಗಳಿವೆ,”ಎಂದರು. 

“ಪಾಲಿಕೆ ವ್ಯಾಪ್ತಿಯಲ್ಲಿನ  ಕಸ ಸಮಸ್ಯೆ ಬಗೆಹರಿಯುತ್ತಲೇ ಇಲ್ಲ. ಹೀಗಾಗಿ  ಗುತ್ತಿಗೆದಾರರ ಕಾರ್ಯಾದೇಶ ರದ್ದುಪಡಿಸಿ ಪಾಲಿಕೆಯಿಂದಲೇ ಕಸ ನಿರ್ವಹಣೆ ಮಾಡಬೇಕು ಎಂದು ನ್ಯಾಯಾಲಯ ಆದೇಶಿಸಿತ್ತು. ಆದರೆ, ಪಾಲಿಕೆ ಅಧಿಕಾರಿಗಳು ನ್ಯಾಯಾಲಯ ಆದೇಶ ಪಾಲಿಸುತ್ತಿಲ್ಲ. ಗುತ್ತಿಗೆದಾರರು ಹಣ ಮಾಡಿಕೊಳ್ಳಲು ದುಪ್ಪಟ್ಟು ಹಣ ನೀಡುವ ಕೆಲಸ ಮಾಡಿದ್ದಾರೆ,” ಎಂದು ಹೇಳಿದರು. 

“ಕಸ ವಿಲೇವಾರಿ ಹೆಸರಿನಲ್ಲಿ ಸಾವಿರಾರು ಕೋಟಿ ರೂ.ಗಳ ಅವ್ಯವಹಾರ ನಡೆದಿರುವ  ಬಗ್ಗೆ ಎಸಿಎಂಎಂ ನ್ಯಾಯಾಲಯದಲ್ಲಿ ಕ್ರಿಮಿನಲ… ಪ್ರಕರಣ, ಎಸಿಬಿ ಹಾಗೂ ಬಿಎಂಟಿಎಫ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಸ ವಿಲೇವಾರಿಗಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಪ್ರತಿ ವರ್ಷ 385 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಈ ಪೈಕಿ ಗುತ್ತಿಗೆದಾರರಿಗಾಗಿಯೇ 236 ಕೋಟಿ ರೂ. ಪಾವತಿ ಮಾಡಲಾಗುತ್ತಿದೆ. ಕಸ ವಿಲೇವಾರಿಗಾಗಿ ಎಂಟು ವಲಯದಲ್ಲೂ ಪ್ರತಿ ವಾರ್ಡ್‌ನ ಕಸ ವಿಲೇವಾರಿ ಮೊತ್ತ ಹೆಚ್ಚಿಸಬೇಕಿದೆ,” ಎಂದರು. 

ಆರೋಪ ಮಾಡೋದೆ ರಮೇಶ್‌ ಕಸುಬು 
ಬೆಂಗಳೂರು:
ಎನ್‌.ಆರ್‌. ರಮೇಶ್‌ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ಜಾರ್ಜ್‌, ಆರೋಪ ಮಾಡುವುದೇ ಎನ್‌.ಆರ್‌. ರಮೇಶ್‌ ಕಸಬು. ಅದಕ್ಕೆ ಮಾಧ್ಯಮಗಳೂ ಪ್ರಚಾರ ಕೊಡುತ್ತಿವೆ. ಕಳೆದ ವಾರ ನನ್ನ ಮೇಲೆ ಒತ್ತುವರಿ ಆರೋಪ ಮಾಡಿದರು. ಈಗ ಕಸ ಮಾಫಿಯಾ ಎನ್ನುತ್ತಿದ್ದಾರೆ. ಅಷ್ಟಕ್ಕೂ ಕಸ ಮಾಫಿಯಾ ಸೃಷ್ಟಿಕರ್ತರೇ ಅವರು’ ತಾವು ಮಾಡುವ ಆರೋಪಗಳಿಗೆ ದಾಖಲೆಗಳಿದ್ದರೆ ರಮೇಶ್‌ ಅವರು ದಾಖಲೆ ಸಲ್ಲಿಸಬೇಕು.ಬಿಬಿಎಂಪಿಯಲ್ಲಿ ಈಗ ಲೂಟಿ ಹೊಡೆಯಲು ಅವಕಾಶ ಸಿಗುತ್ತಿಲ್ಲ ಎಂಬ ಹತಾಶೆಯಿಂದ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ 

Advertisement

ಬಿಬಿಎಂಪಿ ವ್ಯಾಪ್ತಿಯ ಸ್ವತ್ಛತಾ ಕಾರ್ಯದಲ್ಲಿ 2,734 ಖಾಯಂ ನೌಕರರು ಮತ್ತು 22,176 ಗುತ್ತಿಗೆ ಪೌರಕಾರ್ಮಿಕರು ಇರುವುದಾಗಿ ಗುತ್ತಿಗೆದಾರರು ಮಾಹಿತಿ ನೀಡಿದ್ದಾರೆ. ವಾಸ್ತವವಾಗಿ 22,176 ಗುತ್ತಿಗೆ ಪೌರ ಕಾರ್ಮಿಕರಿಲ್ಲ. ಪೌರಕಾರ್ಮಿಕರ ಬಗ್ಗೆ ಸುಳ್ಳು ಮಾಹಿತಿ ನೀಡಲಾಗಿದೆ. 
-ಎನ್‌.ಆರ್‌. ರಮೇಶ್‌, ಪಾಲಿಕೆ ಮಾಜಿ ಸದಸ್ಯ  

Advertisement

Udayavani is now on Telegram. Click here to join our channel and stay updated with the latest news.

Next