ಚನ್ನರಾಯಪಟ್ಟಣ: ರೈತನ ಮಿತ್ರ ನ್ಯಾನೋ ಯೂರಿಯಾ ಎಂಬ ಮಾತು ಸತ್ಯ. ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಹೇಳಿದರು.
ದೇವನಹಳ್ಳಿ ತಾಲೂಕು ನಾಗನಾಯಕನಹಳ್ಳಿ ಗ್ರಾಮದಲ್ಲಿ ಏರೋಸ್ಪೇಸ್ ಪಾರ್ಕ್‌ನಲ್ಲಿ ಆಯೋ ಜಿಸಿದ್ದ ಇಪ್ರೋ ನ್ಯಾನೋ ಯೂರಿಯಾ ದ್ರವ ಸ್ಥಾವರ ಸ್ಥಾಪನೆಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ರಸಗೊಬ್ಬರ ಮತ್ತು ಕ್ರಿಮಿನಾಶಕಗಳು ಭೂಮಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದರೆ, ಇಪ್ರೋ ನ್ಯಾನೊ ಯೂರಿಯಾ ಮಣ್ಣು ಮತ್ತು ಭೂಮಿಯ ಮೇಲೆ ಯಾವುದೇ ದುಷ್ಪರಿಣಾಮ ಬೀರದಂತೆ ನೋಡಿಕೊಳ್ಳುತ್ತದೆ. ರೈತರಿಗೆ ಅನು ಕೂಲವಾಗುವ ರೀತಿಯಲ್ಲಿ ನ್ಯಾನೋ ಯೂರಿಯಾದ ದ್ರವ ರೂಪ ದಲ್ಲಿ ಇಪ್ರೋ ಕಂಪನಿ ವತಿಯಿಂದ ತಯಾರಾಗುತ್ತಿದೆ. ಒಳ್ಳೆಯ ಬೆಳೆ ಬರುತ್ತದೆ ಎಂಬುದು ಪ್ರಾಯೋಗಿಕವಾಗಿದೆ ಎಂದರು.
ಮುಂದೆ ದ್ರವ ರೂಪದ ಡಿಎಪಿ ತಯಾರು ಮಾಡುತ್ತಾರೆ. ರೈತರಿಗೆ ಅನುಕೂಲವಾಗುತ್ತದೆ. ಉಕ್ರೇನ್ ಯುದ್ಧ ಪರಿಣಾಮದಿಂದ ಅಮೋನಿಯಾ ಕೊರತೆಯಿಂದ ಡಿಎಪಿ ಸರಬರಾಜು ಆಗುತ್ತಿಲ್ಲ. ಈಗ ಮಂಗಳೂರಿನ ಒಂದು ಕಂಪನಿಯಲ್ಲಿ ಅಮೋನಿಯಾ ಉತ್ಪಾದನೆ ಮಾಡುತ್ತಾರೆ. ಡಿಎಪಿ ರೈತರಿಗೆ ಸಿಗುವಂತೆ ಆಗುತ್ತಿದೆ. ನಮ್ಮ ರಾಜ್ಯದಲ್ಲಿ ನ್ಯಾನೋ ಯೂರಿಯಾ ತಯಾರು ಮಾಡುವ ಕಂಪನಿ ಮಾಡುತ್ತಿರುವುದರಿಂದ ಬಹಳಷ್ಟು ಸಂತೋಷವಾಗುತ್ತಿದೆ. ಇದರಿಂದ ನ್ಯಾನೋ ಯೂರಿಯಾದಿಂದ ಸಾಗಾಣೆ ವೆಚ್ಚ ಹಾಗೂ ಕಡಿಮೆ ಬೆಲೆಯಲ್ಲಿ ರೈತರಿಗೆ ಸಿಗುತ್ತದೆ ಎಂದರು.
ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ರೈತರು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರನ್ನು ಭೇಟಿ ಮಾಡಿ, ”ಫಲವತ್ತಾದ ಭೂಮಿಯನ್ನು ಬಿಟ್ಟುಕೊಡಲು ಸಾಧ್ಯವಿಲ್ಲ .ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಈ ಬಗ್ಗೆ ಸಭೆ ಕರೆದು ಪರಿಹರಿಸಲು ಯತ್ನಿಸುವುದಾಗಿ ಭರವಸೆ ನೀಡಿದರು. ಈ ವೇಳೆ ರಸಗೊಬ್ಬರ ರಾಜ್ಯ ಸಚಿವರಾದ ಭಗವಂತ್ ಖೂಭಾ, ಸಂಸದ ಬಚ್ಚೇಗೌಡ, ಇಪ್ರೋ ಅಧ್ಯಕ್ಷ ದಿಲೀಪ್ ಸಂಫಾನಿ, ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ, ಇಪ್ರೋ ಸಂಸ್ಥೆ ವ್ಯವಸ್ಥಾಪಕ ಉದಯ್‌ಶಂಕರ್, ಶಾಸಕ ನಾರಾಯಣಸ್ವಾಮಿ ಇದ್ದರು.
500 ಎಂಎಲ್ ಬ್ಯಾಟಲ್‌ನಲ್ಲಿ ಸಿಗುತ್ತೆ ನ್ಯಾನೋ ಯೂರಿಯಾ ಕೇಂದ್ರ ಆರೋಗ್ಯ ಹಾಗೂ ರಸಗೊಬ್ಬರ ಸಚಿವ ಮನ್ಸೂಖ್ ಮಾಂಡವಿಯಾ ಮಾತನಾಡಿ, ನ್ಯಾನೋ ಯೂರಿಯಾ ದೇಶದಲ್ಲಿ ಉತ್ಪಾದನೆಯಾಗುತ್ತಿದೆ. ಇದು 500 ಎಂಲ್ ಬ್ಯಾಟಲ್‌ನಲ್ಲಿ ಸಿಗುತ್ತಿದೆ. ನರೇಂದ್ರ ಮೋದಿಯವರು ರೈತರ ಹಿತಕ್ಕಾಗಿ ರಸಾಯನಿಕ ಗೊಬ್ಬರದ ಸಬ್ಸಿಡಿ ಹಣದಿಂದ ಕಡಿಮೆ ಬೆಲೆಗೆ ಸಿಗುವಂತೆ ಮಾಡಿದ್ದಾರೆ. ನ್ಯಾನೋ ಯೂರಿಯಾ ಗುಜರಾತ್‌ನಲ್ಲಿ ಉತ್ಪಾದನೆ ಆಗುತ್ತಿದೆ. ನ್ಯಾನೋ ಯೂರಿಯಾ ಸಿಂಪಡಣೆ ಮಾಡುವುದರಿಂದ ಬೆಳೆ ಚೆನ್ನಾಗಿ ಬರುತ್ತದೆ. ಹೆಚ್ಚು ಜಮೀನು ಇರುವ ಬೆಳೆಗೆ ಡ್ರೋಣ್ ಮೂಲಕ ಸಿಂಪಡಿಸಬಹುದು ಎಂದು ತಿಳಿ ಸಿದರು.