Advertisement

ಮಣಿಪಾಲ ವಿವಿ: ಮಿದುಳಿನ ಕ್ಯಾನ್ಸರಿಗೆ ನ್ಯಾನೋ ತಂತ್ರಜ್ಞಾನ ಚಿಕಿತ್ಸೆ

08:40 AM Sep 03, 2017 | Team Udayavani |

ಉಡುಪಿ: ಮಣಿಪಾಲ ವಿಶ್ವ ವಿದ್ಯಾಲಯ ವಿಜ್ಞಾನಿಗಳ ತಂಡವು ಮಿದುಳಿನ ಕ್ಯಾನ್ಸರಿಗೆ ನ್ಯಾನೊ ತಂತ್ರಜ್ಞಾನ ಆಧಾರಿತ ಔಷಧೀಯ ಚಿಕಿತ್ಸೆಯ ಆವಿಷ್ಕಾರ ಮಾಡಿದೆ.

Advertisement

ಮಣಿಪಾಲದ ಸ್ಕೂಲ್‌ ಆಫ್ ಲೈಫ್ ಸೈನ್ಸಸ್‌ನ ಡಿಪಾರ್ಟ್‌ ಮೆಂಟ್‌ ಆಫ್ರೆàಡಿಯೇಶನ್‌ ಬಯಾಲಜಿ, ಟಾಕ್ಸಿಕಾಲೊಜಿ ವಿಭಾಗದ ಪ್ರಾಧ್ಯಾಪಕ ಡಾ| ಬಿ.ಎಸ್‌. ಸತೀಶ್‌ ರಾವ್‌ ಅವರ ನೇತೃತ್ವದಲ್ಲಿ ಡಾಕ್ಟರೇಟ್‌ ವಿದ್ಯಾರ್ಥಿನಿ ಡಾ| ಸುಮಾ ಪ್ರಭು, ಮಣಿಪಾಲ್‌ ಕಾಲೇಜ್‌ ಆಫ್ ಫಾರ್ಮಾಸೂಟಿಕಲ್‌ ಸೈನ್ಸ್‌ನ ಡಾ| ಎನ್‌. ಉಡುಪ, ಡಾ| ಶ್ರೀನಿವಾಸ ಮುತಾಲಿಕ್‌, ಮಂಗಳೂರಿನ ಕಸ್ತೂರ್ಬಾ ವೈದ್ಯಕೀಯ ಮಹಾ ವಿದ್ಯಾಲಯದ ಡಾ| ಶಾರದಾ ರೈ ಮತ್ತು ಮುಂಬಯಿಯ ಟಾಟಾ ಮೆಮೋರಿಯಲ್ಸೆಂಟರ್ನ್ ಅಡ್ವಾನ್ಸ್‌ ಡೆಂಟರ್ಫಾಟ್ರೀಟೆ¾ಂಟ್‌, ರಿಸರ್ಚ್‌ ಆ್ಯಂಡ್‌ ಎಜುಕೇಶನ್‌ ವಿಭಾಗದ ಡಾ| ಜಯಂತ್‌ ಶಾಸಿŒ ಗೋಡಾ, ಡಾ| ಪ್ರದೀಪ್‌ ಚೌಧರಿ ಮತ್ತು ಭವಾನಿ ಶಂಕರ್‌ ಮೊಹಾಂತಿ ಅವ ರನ್ನು ಒಳಗೊಂಡ ತಂಡವು ನ್ಯಾನೋ ಮೆಡಿಸಿನ್‌ ಕ್ಷೇತ್ರದಲ್ಲಿ ಆಸಕ್ತಿದಾಯಕ ಸಂಶೋಧನೆಯನ್ನು ನಡೆಸಿದೆ.

ಈ ತಂಡವು ಮೆದುಳಿನ ಕ್ಯಾನ್ಸರ್‌ ಗೆಡ್ಡೆಯನ್ನು ಗುರಿಯಾಗಿಸಿ ಪ್ರತಿ ರೋಧಕ ಟೆಮೊಜೋಲಾಮೈಡ್‌ ಔಷಧವನ್ನು ಸಾಗಿಸುವ ಬಹು ಕ್ರಿಯಾತ್ಮಕ ನ್ಯಾನೋ ಕಾಂಪಾಸಿಟ್‌ ಅನ್ನು ವಿನ್ಯಾಸಗೊಳಿಸಿದೆ. ಈ ಸೂಪರ್‌ ಪ್ಯಾರಾಮ್ಯಾಗ್ನೆಟಿಕ್‌ ಐರನ್‌ ಆಕ್ಸೆ„ಡ್‌ ನ್ಯಾನೊಪಾರ್ಟಿಕಲ್ಸ್‌ ಅನ್ನು “ಟ್ರಾನ್ಸ್‌ಫೆರಿನ್‌’ ಪ್ರೋಟೀನ್‌ನಂತಹ ಟ್ಯಾಗಿಂಗ್‌ ಲಿಗಂಡ್‌ ಮೂಲಕ ಕಾರ್ಯಗತಗೊಳಿಸಲಾಯಿತು. 

ಈ ಟ್ರಾನ್ಸ್‌ಫೆರಿನ್‌ ಮಿದುಳಿನ ರಕ್ತದ ತಡೆಗೋಡೆಯನ್ನು ಸರಾಗ ವಾಗಿ ದಾಟಲು ಸಹಾಯ ಮಾಡು ತ್ತದೆ. ಇನ್ನೊಂದು ಪ್ರೋಟೀನ್‌ “ನೆಸ್ಟಿನ್‌’ ಕ್ಯಾನ್ಸರಿನ ಜೀವಕೋಶಗಳಿಗೆ ಔಷಧವನ್ನು ಗುರಿ ತಲುಪಿಸ ಬಲ್ಲುದಾಗಿದೆ. ಈ ನ್ಯಾನೋ ಆಧಾರಿತ ತಂತ್ರಜ್ಞಾನವು ಮಿದುಳಿನ ತಡೆಗೋಡೆಗಳನ್ನು ಸುಲಭವಾಗಿ ದಾಟಲು ಸಹಾಯ ಮಾಡಿ ಕ್ಯಾನ್ಸರ್‌ ಗೆಡ್ಡೆಯ ಜೀವಕೋಶಗಳನ್ನು ಕೇಂದ್ರೀಕರಿಸಿ ನಿರ್ಜೀವ ಗೊಳಿಸಬಲ್ಲುದು. ಸುತ್ತುವರಿದಿರುವ ಇತರ ಆರೋಗ್ಯಕರ ಅಂಗಾಂಶಗಳಿಗೆ ಯಾವುದೇ ಹಾನಿಯನ್ನು ಉಂಟು ಮಾಡಲಾರದು ಎಂದು ಸ್ಪೆಕ್ಟ್ ಸಿಟಿಯ ವಿಶ್ಲೇಷಣೆಯಲ್ಲಿ ದೃಢೀಕರಿಸಲಾಗಿದೆ. ಈ ಸಂಶೋಧನೆಯನ್ನು ಇಲಿಗಳ ಮೇಲೆ ಯಶಸ್ವಿಯಾಗಿ ಪ್ರಯೋಗಿಸಲಾಗಿದೆ.

ಈ ಪುರಾವೆ ಮತ್ತು ತಣ್ತೀ ಸಂಶೋಧನೆಯನ್ನು ಇಂಗ್ಲಂಡಿನ ಪ್ರತಿಷ್ಠಿತ ಜರ್ನಲ್‌ ನ್ಯಾನೋಸ್ಕೇಲ್‌ನ ಸಂಚಿಕೆಯಲ್ಲಿ ಪ್ರಕಟಿಸಲಾಗಿದೆ. ಈ ಸಂಶೋಧನಾ ಕಾರ್ಯಕ್ಕೆ ಡಾ| ಬಿ.ಎಸ್‌. ಸತೀಶ್‌ ರಾವ್‌ ಅವರ ನೇತೃತ್ವದಲ್ಲಿ ಡಾ| ಸುಮಾ ಪ್ರಭು ಅವರಿಗೆ ಒಂದು ರಚನಾತ್ಮಕ ಪಿಎಚ್‌ಡಿ ಫೆಲೋಷಿಪ್‌ ರೂಪದಲ್ಲಿ ಮಣಿಪಾಲ ಸ್ಕೂಲ್‌ ಆಫ್ ಲೈಫ್ ಸೈನ್ಸಸ್‌ ಮತ್ತು ಮಣಿಪಾಲ ವಿಶ್ವವಿದ್ಯಾನಿಲಯವು ಆರ್ಥಿಕ ಬಲವನ್ನು ಒದಗಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next