ನಟ ಜೆ.ಕೆ (ಜಯರಾಮ್ ಕಾರ್ತಿಕ್) ಅಭಿನಯದ ಮತ್ತೂಂದು ಚಿತ್ರ ತೆರೆಗೆ ಬರಲು ರೆಡಿಯಾಗಿದೆ. ಆ ಚಿತ್ರದ ಹೆಸರು “ನನ್ನ ಗುರಿ ವಾರೆಂಟ್’. ಎಸ್.ಕೆ ನಾಗೇಂದ್ರ ಅರಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ “ವಾರೆಂಟ್’ ಚಿತ್ರಕ್ಕೆ ಮನಿಷಾ ವೈಗನ್‌ಕರ್ ಕಥೆಯನ್ನು ಬರೆದು, ನಿರ್ಮಾಣ ಮಾಡಿದ್ದಾರೆ.
ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿರುವ ಮನಿಷಾ ವೈಗನ್ ಕರ್ ಅವರಿಗೆ ಕಿರುತೆರೆ ನಟ ರಾಮ್ ತಾಂಡವ್ ಹಿರಿತೆರೆಯಲ್ಲಿ ಜೋಡಿಯಾಗಿ ಅಭಿನಯಿಸಿದ್ದಾರೆ. “ನನ್ನ ಗುರಿ ವಾರೆಂಟ್’ ಚಿತ್ರದ ಟೈಟಲ್‌ಗೆ “ದಿ ಮಿಷನ್’ ಎಂಬ ಅಡಿಬರಹವಿದೆ. ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಕಥಾಹಂದರ ಹೊಂದಿರುವ “ನನ್ನ ಗುರಿ ವಾರೆಂಟ್’ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಇದೇ ತಿಂಗಳ ಕೊನೆವಾರ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ ಚಿತ್ರತಂಡ.
ಇದನ್ನೂ ಓದಿ:ಹೀರೋ ಟೆಂಪರ್ ಜೋರು
“ನನ್ನ ಗುರಿ ವಾರೆಂಟ್’ ಚಿತ್ರದ ಬಗ್ಗೆ ಮಾತನಾಡುವ ನಾಯಕಿ ಕಂ ನಿರ್ಮಾಪಕಿ ಮನಿಷಾ ವೈಗನ್‌ಕರ್, “ಇದೊಂದು ಸಸ್ಪೆನ್ಸ್ ಕಂ ಕ್ರೈಂ-ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ. ಭೇಟಿ ಬಚಾವೋ, ಭೇಟಿ ಫಡಾವೋ ಆಶಯವನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ನಾನು ಕಂಡ ಕೆಲವು ಅಂಶಗಳನ್ನು
ಇಟ್ಟುಕೊಂಡು ಈ ಸಿನಿಮಾದ ಕಥೆ ಮಾಡಿದ್ದೇನೆ. ಅನೇಕ ಥ್ರಿಲ್ಲಿಂಗ್ ಆಂಶಗಳು ಸಿನಿಮಾದಲ್ಲಿದ್ದು, ಆಡಿಯನ್ಸ್‌ಗೆ ಕಂಪ್ಲೀಟ್ ಎಂಟರ್‌ಟೈನ್ಮೆಂಟ್ ಸಿಗಲಿದೆ’ ಎನ್ನುತ್ತಾರೆ