Advertisement
ನಂಜನಗೂಡು ಸರ್ಕಾರಿ ಬಾಲಕಿಯರ ಶಾಲೆಯ ವಿದ್ಯುತ್ ಬಿಲ್ ಬಾಕಿ 15,000 ರೂ., ಬಾಲಕರ ಪ್ರೌಢಶಾಲೆಯ ಬಿಲ್ ಬಾಕಿ 19,000 ರೂ. ಇದ್ದು, ನಗರ ವ್ಯಾಪ್ತಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಶಾಲೆಗಳ ಬಿಲ್ ತಲಾ 10 ಸಾವಿರ ರೂ. ದಾಟಿದೆ ಎನ್ನಲಾಗಿದೆ. ಈ ಹಣವನ್ನು 30 ದಿನದಲ್ಲಿ ಪಾವತಿಸದೇ ಇದ್ದಲ್ಲಿ ಮಕ್ಕಳ ಲ್ಯಾಬ್, ಕಂಪ್ಯೂಟರ್ ಶಿಕ್ಷಣ ಕೊನೆಗೆ ಶೌಚಾಲಯಗಳ ನಿರ್ವಹಣೆ ಹೇಗೆ ಎಂಬ ಆತಂಕ ಶಾಲಾ ಮುಖ್ಯಸ್ಥರನ್ನು ಕಾಡತೊಡಗಿದೆ.
Related Articles
Advertisement
ನಗರಸಭಾ ವ್ಯಾಪ್ತಿಯ ಸರ್ಕಾರಿ ಶಾಲೆಗಳಿಗೆ ಈ ಬಾಬ್ತು ಹಣ ನೀಡಲು ಅವಕಾಶ ಇದೆ. ಈ ಕುರಿತು 21-12 -22ರಂದು ನಗರ ವ್ಯಾಪ್ತಿಯ 16 ಶಾಲೆಗಳು ಅಧಿಕೃತವಾಗಿ ನಗರಸಭೆಗೆ ಮನವಿ ಮಾಡಿವೆ. ಅವರ ಉತ್ತರವನ್ನು ಕಾಯಲಾಗುತ್ತಿದೆ. ● ಶಾಲಾ ಮುಖ್ಯಸ್ಥರು.
ಸರ್ಕಾರಿ ಶಾಲೆಗಳಲ್ಲಿನ ವಿದ್ಯುತ್ ಬಿಲ್ ಸಮಸ್ಯೆ ಇದೀಗ ತಮ್ಮ ಗಮನಕ್ಕೆ ಬಂದಿದೆ. ತಕ್ಷಣ ವಿದ್ಯುತ್ ಸ್ಥಗಿತ ಮಾಡದಂತೆ ಸೆಸ್ಕ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಪಾವತಿಗೆ ಶಿಕ್ಷಣ ಇಲಾಖೆಯಲ್ಲಿ ಹಣ ಇಲ್ಲವಾದ್ದರಿಂದ ಬದಲಿ ವ್ಯವಸ್ಥೆಯತ್ತ ಯೋಚಿಸಬೇಕಿದೆ. ●ದರ್ಶನ್ ಧ್ರುವನಾರಾಯಣ, ಶಾಸಕ.
ಸರ್ಕಾರಿ ಶಾಲೆಗಳಿಗೆ ವಿದ್ಯುತ್ ಬಿಲ್ ಪಾವತಿಗಾಗಿ ಸಾಕಷ್ಟು ಕಾಲಾವಕಾಶ ನೀಡಲಾಗಿದೆ. ಸೆಸ್ಕ್ ನಮಗೆ ಬಾಕಿ ವಸೂಲಿಗಾಗಿ ಟಾರ್ಗೆಟ್ ನೀಡಿದೆ. ನಾವೀಗ ವಸೂಲಿ ಮಾಡಲು ಕಠಿಣ ಕ್ರಮಕ್ಕೆ ಮುಂದಾಗುವುದು ಅನಿವಾರ್ಯ. ●ಕಿರಣ, ನಂಜನಗೂಡು ಸೆಸ್ಕ್ ಅಧಿಕಾರಿ.
ಪ್ರಸಕ್ತ ಸಾಲಿನ ನಗರಸಭೆ ಮುಂಗಡ ಪತ್ರದಲ್ಲಿ 16 ಸರ್ಕಾರಿ ಶಾಲೆಗಳ ವಿದ್ಯುತ್ ಬಿಲ್ ಪಾವತಿಗಾಗಿ 10 ಲಕ್ಷ ರೂ. ಕಾಯ್ದಿರಿಸಲಾಗಿದೆ. ●ಕಪೀಲೇಶ, ನಗರಸಭಾ ಸದಸ್ಯ
ಸರ್ಕಾರಿ ಶಾಲೆಗಳ ವಿದ್ಯುತ್ ಶುಲ್ಕ ಪಾವತಿಗೆ ನಗರಸಭೆಯಲ್ಲಿ ಅವಕಾಶ ಇಲ್ಲ. ●ಶ್ರೀನಿವಾಸ್, ನಗರಸಭೆ ಇಇ
-ಶ್ರೀಧರ್ ಆರ್. ಭಟ್