Advertisement

ನಂಜನಗೂಡು : ಅಂಗನವಾಡಿ ಹಾಲಿನ ಪೌಡರ್ ಗೆ ಕನ್ನ

10:02 PM Jul 22, 2022 | Team Udayavani |

ನಂಜನಗೂಡು :ಅಂಗನವಾಡಿಯ ಹಾಲು ಪೌಡರ್ ಗೆ ಕನ್ನ ಹಾಕಿದ ಖದೀಮನೊಬ್ಬ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಪ್ರಕರಣ ನಂಜನಗೂಡು ತಾಲೂಕಿನ ಮಡುವಿನಹಳ್ಳಿ ಗ್ರಾಮದಲ್ಲಿ ನಡೆದಿದೆ.ಅರ್ಧ ಕೆ.ಜಿ.ತೂಕದ 128 ಪ್ಯಾಕೆಟ್ ಗಳು ಖದೀಮನ ಬಳಿ ಪತ್ತೆಯಾಗಿದೆ.ಗರ್ಭಿಣಿಯರಿಗೆ ಬಾಣಂತಿಯರಿಗೆ ಸೇರಬೇಕಾದ ಹಾಲಿನ ಪೌಡರ್ ಪ್ಯಾಕೆಟ್ ಗಳು ಖಾಸಗಿ ವ್ಯಾಪಾರಸ್ಥರ ಕೈ ಸೇರುತ್ತಿರುವ ದಂಧೆ ಈ ಮೂಲಕ ಬಟ್ಟಾ ಬಯಲಾಗಿದೆ.

Advertisement

ಮಡುವಿನಹಳ್ಳಿ ಗ್ರಾಮದ ಅಂಗನವಾಡಿಯ ಸಿಬ್ಬಂದಿ ಮಂಜುಳಾ ಎಂಬುವರು ಹಾಲಿನ ಪ್ಯಾಕೆಟ್ ಗಳನ್ನ ದಂಧೆಕೋರರಿಗೆ ತಲುಪಿಸಿರುವ ಮಾಹಿತಿಯನ್ನ ಸಿಕ್ಕಿಬಿದ್ದ ವ್ಯಕ್ತಿಯೇ ಬಹಿರಂಗಪಡಿಸಿದ್ದಾನೆ.ನಂಜನಗೂಡು ತಾಲೂಕಿನಾದ್ಯಂತ ಈ ದಂಧೆ ರಾಜಾರೋಷವಾಗಿ ನಡೆಯುತ್ತಿದೆ.ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದರೂ ಪುರಾವೆಗಳು ದೊರೆತಿರಲಿಲ್ಲ.ಇದೀಗ ಹಾಲಿನ ಪ್ಯಾಕೆಟ್ ಗಳನ್ನ ಅಕ್ರಮವಾಗಿ ಸಾಗಿಸುತ್ತಿದ್ದ ನಗರ್ಲೆ ಗ್ರಾಮದ ಜಗದೀಶ್ ಎಂಬ ಖದೀಮ ಗ್ರಾಮಸ್ಥರ ಕೈಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾನೆ.

ಫಲಾನುಭವಿಗಳಿಗೆ ವಿತರಿಸದ ಅಂಗನವಾಡಿ ಸಿಬ್ಬಂದಿಗಳು ದಂಧೆಕೋರರ ಜೊತೆ ಕೈ ಜೋಡಿಸಿರುವುದು ಬೆಳಕಿಗೆ ಬಂದಿದೆ. ತಾಲೂಕಿನಲ್ಲಿ ಅಂಗನವಾಡಿಗೆ ಸರಬರಾಜು ಮಾಡುತ್ತಿರುವ ಸಾಮಗ್ರಿಗಳೆ ಕಳಪೆ ಎಂದು ಇಲ್ಲಿನ ಸರಬರಾಜು ವ್ಯವಸ್ಥೆಯನ್ನೆ ರದ್ದು ಮಾಡಿ ಕೆಲದಿನಗಳ ನಂತ ರಮತ್ತೆ ಅದೆ ಸಂಸ್ಥೆ ಅಧಿಕಾರಸ್ಥರ ನೆರವಿನಿಂದ ಆ ಪ್ರಕರಣಕ್ಕೆ ತೇಪೆ ಹಾಕಿ. ಅದನ್ನು ಮುಂದುವರಿಸಿದ ಘಟನೆ ಹಸಿಯಾಗಿರುವಾಗಲೆ ತಾಲೂಕಿನ ವಿವಿದ ಅಂಗನವಾಡಿ ಕೇಂದ್ರಗಳಲ್ಲಿ ಪದಾರ್ಥಗಳನ್ನು ಅಕ್ರಮವಾಗಿ ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದಾಗಿ ಆರೋಪಿಯೇ ಒಪ್ಪಿಕೊಂಡಿದ್ದಾನೆ.ಮಹಿಳಾ ಮತ್ತು ಶಿಶು ಅಭಿವೃದ್ದಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.ಈ ಸಂಭಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್.ದಾಖಲಾಗಿದ್ದು ಆರೋಪಿಯನ್ನ ವಶಕ್ಕೆ ಪಡೆಯಲಾಗಿದೆ.

ಶಿಶು ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷತನಕ್ಕೆ ಸಾಕ್ಷಿ
ನಂಜನಗೂಡು ವಿಧಾನಸಭೆ ಕ್ಷೇತ್ರದ ಹೆಡಿಯಾಲ ದೇವರಾಯಶೆಟ್ಟಿಪುರ ಮತ್ತು ಹುರ ಭಾಗದಲ್ಲಿ ಅಂಗನವಾಡಿ ಕೇಂದ್ರದ ಮಕ್ಕಳು ಮತ್ತು ಫಲಾನುಭವಿಗಳಿಗೆ ನೀಡಬೇಕಾದ ಹಾಲಿನ ಪೌಡರ್ ಮತ್ತು ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ದಂಧೆಯಾಗಿ ಪರಿಣಮಿಸಿದೆ ಇದಕ್ಕೆ ತಾಲ್ಲೂಕುಮಟ್ಟದ ಅಧಿಕಾರಿಗಳ ಕುಮ್ಮಕ್ಕು ಮತ್ತು ನಿರ್ಲಕ್ಷ್ಯತನ ಕಾರಣ ಎಂದು ಸಾರ್ವಜನಿಕ ವಲಯದಲ್ಲಿ ಗ್ರಾಸವಾಗಿವೆ.

ಕೂಡಲೇ ಮಡುವಿನಹಳ್ಳಿ ಗ್ರಾಮದ 3ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು ಮತ್ತು ಮೇಲ್ವಿಚಾರಕಿ ವಿರುದ್ಧ ಕ್ರಮ ಜರಗಿಸಬೇಕು. ಹೆಡಿಯಾಲ ಗ್ರಾಮದ ವೃತ್ತದಲ್ಲಿ ಮೇಲ್ವಿಚಾರಕ ಟೆಕ್ಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶಿಶು ಅಭಿವೃದ್ಧಿ ಅಧಿಕಾರಿಯೇ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರ ಕಳ್ಳಾಟಕ್ಕೆ ಬೆನ್ನೆಲುಬಾಗಿ ನಿಂತಿದ್ದರು.ಸಾಕಷ್ಟು ಬಾರಿ ಹೆಡಿಯಾಲ ಭಾಗದಲ್ಲಿ ಮೇಲ್ವಿಚಾರಕಿ ಅಂಗನವಾಡಿ ಕಾರ್ಯಕರ್ತೆಯರಿಂದಲೇ ಆಹಾರ ಪದಾರ್ಥ ದಾಸ್ತಾನುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದು ಸಾರ್ವಜನಿಕರ ಕಣ್ಣಿಗೆ ಬಿದ್ದಿತು ಆದರೂ ಕೂಡ ತಾಲ್ಲೂಕುಮಟ್ಟದ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದ ಕಾರಣ ಈಗ ಸ್ಪಷ್ಟವಾಗಿ ದಂಧೆಕೋರರ ಕಳ್ಳಾಟ ಬಟಾ ಬಯಲಾಗಿದೆ.

Advertisement

ಕೂಡಲೇ ಸಂಬಂಧಪಟ್ಟ ಉನ್ನತ ಮಟ್ಟದ ಅಧಿಕಾರಿಗಳು ತನಿಖೆ ಮಾಡಿ ಲೋಪವೆಸಗಿರುವ ಸಿಬ್ಬಂದಿಗಳು ಮತ್ತು ಅಧಿಕಾರಿಗಳ ವಿರುದ್ಧ ಕೂಡ ಪ್ರಕರಣ ದಾಖಲಾಗಿ ತಕ್ಕ ಶಾಸ್ತಿಯಾಗಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ ತಪ್ಪಿದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಮಡುವಿನಹಳ್ಳಿ ಗ್ರಾಮದ ಸಾರ್ವಜನಿಕರು ಸಂದರ್ಭದಲ್ಲಿಹೇಳಿದ್ದಾರೆ.

ವರದಿ : ಶ್ರೀಧರ ಭಟ್ ನಂಜನಗೂಡು

Advertisement

Udayavani is now on Telegram. Click here to join our channel and stay updated with the latest news.

Next