Advertisement

ನಂಜನಗೂಡು ಬಿಜೆಪಿ ಅಭ್ಯರ್ಥಿ ಘೋಷಣೆಗೆ ಪಟ್ಟು

02:35 PM Dec 01, 2017 | Team Udayavani |

ನಂಜನಗೂಡು: ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಘೋಷಿಸಿ ಗೊಂದಲ ನಿವಾರಿಸಬೇಕು ಎಂದು ಕಾರ್ಯಕರ್ತರು ಪಟ್ಟು ಹಿಡಿದರು. ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆ ಪೂರ್ವಭಾವಿ ಸಭೆಯಲ್ಲಿ ನಗರಸಭಾ ಸದಸ್ಯ ಮಹದೇವಸ್ವಾಮಿ ಸೇರಿದಂತೆ ಹಲವಾರು ಕಾರ್ಯಕರ್ತರು,

Advertisement

ಅಭ್ಯರ್ಥಿ ಘೋಷಣೆಗೆ ಬಿಜೆಪಿ ಮೈಸೂರು ಗ್ರಾಮಾಂತರ ಜಿಲ್ಲಾಧ್ಯಕ್ಷ, ಮಾಜಿ ಸಚಿವ ಕೋಟೆ ಎಂ. ಶಿವಣ್ಣ ಅವರನ್ನು ಆಗ್ರಹಿಸಿದರು.  ಈ ವೇಳೆ ಕಾರ್ಯಕರ್ತರನ್ನು ಸಮಾಧಾನ ಪಡಿಸಿ ಮಾತನಾಡಿದ ಕೋಟೆ ಶಿವಣ್ಣ , ಕ್ಷೇತ್ರದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ಶಾ ಸೂಚಿಸಿದ ಅಭ್ಯರ್ಥಿಗೆ ಟಿಕೆಟ್‌ ದೊರೆಯಲಿದೆ. ಇದಕ್ಕಾಗಿ ಅಮಿತ್‌ ಶಾ ಮೂರು ಸುತ್ತಿನ ಸಮೀಕ್ಷೆ ನಡೆಸಿದ್ದಾರೆ ಎಂದು ತಿಳಿಸಿದರು. 

10 ಸ್ಥಾನ ಗೆಲುವಿಗೆ ಅವಕಾಶ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿಗೆ ಉತ್ತಮ ಅವಕಾಶವಿದ್ದು, ಟಿಕೆಟ್‌ ಗೊಂದಲ ಹಾಗೂ ಗುಂಪುಗಾರಿಕೆ ಕೈಬಿಟ್ಟು ಸಂಘಟಿತ ಹೋರಾಟ ನಡೆಸಬೇಕು. ಮಾಜಿ ಸಚಿವ ವಿ.ಶ್ರೀನಿವಾಸ್‌ ಪ್ರಸಾದ್‌ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು.

ಬಿಜೆಪಿಗೆ ಅವರೇ ಪ್ರಮುಖ ಶಕ್ತಿಯಾಗಿದ್ದಾರೆ. ಜಿಲ್ಲೆಯಲ್ಲಿ 10 ಸ್ಥಾನ ಗೆಲ್ಲುವ ಉತ್ತಮ ಅವಕಾಶ ಇದೆ ಎಂದು ಹೇಳಿದರು. ನಂಜನಗೂಡಿನಲ್ಲಿ ಜನವರಿ 23 ರಂದು ನಡೆಯಲಿರುವ ಪರಿವರ್ತನಾ ಯಾತ್ರೆಗೆ ರಾಜಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪಆಗಮಿಸಲಿದ್ದು,  ರಾಜ್ಯ ಉಪಾಧ್ಯಕ್ಷ ವಿ.ಶ್ರೀನಿವಾಸ್‌ ಪ್ರಸಾದ್‌ ನೇತೃತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.

15 ಸಾವಿರ ಮಂದಿ ನಿರೀಕ್ಷೆ: ರಾಜ್ಯ ಉಪಾಧ್ಯಕ್ಷ ಎಸ್‌.ಮಹದೇವಯ್ಯ ಮಾತನಾಡಿದ ಇಲ್ಲಿನ ವಿದ್ಯಾವರ್ಧಕ ಶಾಲಾ ಮೈದಾನದಲ್ಲಿ ನಡೆಯುವ ಸಮಾವೇಶಕ್ಕೆ  15 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ. ಇದಕ್ಕೆ ಸಮಿತಿ ರಚಿಸಲಾಗುವುದು ಎಂದರು.

Advertisement

ಸಭೆಯಲ್ಲಿ ಜಿಲ್ಲಾ ಗ್ರಾಮಾಂತರ ಉಪಾಧ್ಯಕ್ಷರಾದ ಕೆ.ಕೆ.ಜಯದೇವ್‌, ರಾಮಕೃಷ್ಣಪ್ಪ, ಜಿಪಂ ಸದಸ್ಯೆ ಮಂಗಳಾ, ಎಚ್‌.ಎಸ್‌. ದಯಾನಂದಮೂರ್ತಿ, ತಾಲೂಕು ಅಧ್ಯಕ್ಷ ಕೆಂಡಗಣ್ಣಪ್ಪ, ನಗರಾಧ್ಯಕ್ಷ ವಿನಯ್‌ಕುಮಾರ್‌,  ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಕುಂಬ್ರಳ್ಳಿ ಸುಬ್ಬಣ್ಣ, ಜಿಪಂ ಮಾಜಿ ಸದಸ್ಯ ಚಿಕ್ಕರಂಗನಾಯಕ,  ನಂಜನಗೂಡು ನಗರ ಉಸ್ತುವಾರಿ ಬೋರೆಗೌಡ,

ಬಸವರಾಜು, ಸಿದ್ದರಾಜು,  ಎನ್‌.ಸಿ,ಬಸವಣ್ಣ,  ಹಗಿನವಾಳು ಸುರೇಶ್‌, ಹುಂಡಿ ಶಂಕರಪ್ಪ, ಸ್ವಾಮಿ, ಹುಣಸನಾಳು  ಸಿದ್ದರಾಜು, ಎಪಿಎಂಸಿ ಗುರುಸ್ವಾಮಿ, ಆಕಲ ಮಹದೇವಪ್ಪ,  ಯುವ ಮೋರ್ಚಾ ಅಧ್ಯಕ್ಷ ಶ್ರೀಕಂಠ, ದೇಬೂರು ಶಿವುಕುಮಾರ್‌, ಗಾಯಿತ್ರಿ, ಶಿವನಾಗಪ್ಪ, ದೇವರಸನಹಳ್ಳಿ ಮಹದೇವು, ಬಸವರಾಜು ಜಯಪ್ರಕಾಶ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next