ನಂಜನಗೂಡು: ರಾಜ್ಯದ ಕೆಲವೇ ಕೆಲವು ಕ್ಷೇತ್ರಗಳಗಳಲ್ಲಿ ನಡೆಯಬೇಕಾದ ಉಪ ಚುನಾವಣೆ ಈಗ ನಂಜನಗೂಡಿ ನಲ್ಲೂ ನಡೆಯುವಂತಾಗಿದ್ದು ಈ ಮೂಲಕ ಜಾತಿ ರಾಜಕಾರಣಿಗಳ ದಂಡು ಕಾಣಿಸಿಕೊಂಡಿದೆ. ಕಳೆದ ನಾಲ್ಕು ವರ್ಷಗಳಿಂದ ನೆನಪಾಗದಿದ್ದ ಜಾತಿ ಈಗ ಇಲ್ಲಿ ಎದ್ದು ತಾಂಡವ ನರ್ತನ ಮಾಡತೊಡಗಿದ್ದು, ಜಾತ್ಯತೀತ ರಾಷ್ಟ್ರಕ್ಕೆ ಸೆಡ್ಡು ಹೊಡೆಯುವಂತಿವೆ.
ಬಾಯಲ್ಲಿ ಜಾತ್ಯತೀತರು ಎಂದು ಹಸಿ ಸುಳ್ಳು ಹೇಳವ ರಾಜಕಾರಣಿಗಳು ಈ ಉಪ ಚುನಾವಣೆಯ ಗೆಲುವಿಗಾಗಿ ಒಳಗೊಳಗೆ ಜಾತಿ ನಾಯಕರ ಪಟ್ಟಿ ಸಿದ್ಧಪಡಿಸಿ ಅವರನ್ನು ನಂಜನಗೂಡಿಗೆ ಕರೆತಂದು ಇಲ್ಲಿನ ಜನತೆ ಮರೆತು ಹೋಗಿದ್ದ ಜಾತಿ ಎಂಬ ಜಾÌಲೆಗೆ ತುಪ್ಪ ಸುರಿದು ಪ್ರಜ್ವಲಿಸುವ ಅನಾಹುತಕ್ಕೇ ಕಾರಣರಾಗುತ್ತಿದ್ದಾರೆ.
ಯಾವ ಪಕ್ಷವೂ ಇನ್ನೊಂದಕ್ಕೆ ಕಡಿಮೆ ಇಲ್ಲ ಎಂಬಂತೆ ವರ್ತಿಸುತ್ತಾ ಆಯಾ ಜಾತಿಯ ಮತಗಳ ಪಟ್ಟಿ ಮಾಡಿ ನಾಯಕರನ್ನು ಆಯಾ ಪಂಗಡದ ಬೀದಿಗೆ ಸಿಮಿತ ಗೊಳಿಸುತ್ತ ನಿಜವಾದ ಪ್ರಜಾಪ್ರಭುತ್ವಕ್ಕೆ ಅಪಚಾರ ವೆಸಗಲಾರಂಭಿಸಿದ್ದಾರೆ.
ಒಟ್ಟಾರೆ ಜನತೆಯ ಅಭಿವೃದ್ಧಿ ಸಾಮಾಜಿಕ ಕಳಕಳಿಯ ಮೇಲೆ ಪ್ರಾಮಾಣಿಕತೆ ಎಂಬ ದೀಪ ಬೆಳಗಿಸಿ ಮತ ಯಾಚಿಸಬೇಕಾಗಿದ್ದ ನಮ್ಮ ಜನ ಪ್ರತಿನಿಧಿಗಳು ಜಾತಿಯ ವಿಷಬೀಜವನ್ನು ತಾವೇ ಬಿತ್ತಿ ಬೆಳದು ಅದರ ನಂಜನ್ನು ಜನತೆಗೆ ಕುಡಿಸುತ್ತ ತಾವು ಮಾತ್ರ ಗೆಲುವೆಂಬ ಅಮೃತ ಸವಿಯುವ ಕನಸು ಕಾಣುತ್ತಿದ್ದಾರೆ.
ಈಗ ಕ್ಷೇತ್ರದಲ್ಲಿ ಜಾತಿ ರಾಜಕಾರಣಿಗಳ ದಂಡು ಕಾಣುವಂತಾಗಿದೆ ಬಿಜೆಪಿಯಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಮಾಜಿ ಸಚಿವರಾದ ಸೋಮಣ್ಣ, ಶೋಭಾ ಕರಂದ್ಲಾಜೆ, ರಾಮದಾಸ್, ವಿಜಯ ಶಂಕರ, ಹರತಾಳು ಹಾಲಪ್ಪ, ಕೋಟೆ ಶಿವಣ್ಣ , ಅರವಿಂದ ಲಿಂಬಾವಳಿ, ಬಿ.ಜೆ ಪುಟ್ಟಸ್ವಾಮಿ.
ಕಾಂಗ್ರೆಸ್‌ನಿಂದ ಅಭ್ಯರ್ಥಿ ಕೇಶವ ಮೂರ್ತಿ ಪರವಾಗಿ ಈಗಾಗಲೆ ಮುಖ್ಯಮಂತ್ರಿ ಸಿದ್ಧರಾಮಯ್ಯ,ರಾಜಾÂಧ್ಯಕ್ಷ ಪರಮೇಶ್ವರ, ಕಾರ್ಯಾಧ್ಯಕ್ಷ ದಿನೇಶ ಗುಂಡುರಾವ್, ಸಚಿವರಾದ ಎಚ್.ಸಿ ಮಹದೇವಪ್ಪ, ಸತೀಶ ಜಾರಕಿ ಹೊಳಿ, ಬಿ.ಕೆ ಚಂದ್ರಶೇಖರ ಇತರರು ನಂಜನಗೂಡಿನಲ್ಲಿ ಪ್ರಚಾರ ಕಾರ್ಯ ನಡೆಸುತ್ತಿದ್ದು ಮುಂದಿನ ದಿಗಳಲ್ಲಿ ಇನ್ನಷ್ಟು ಜಾತಿ ನಾಯಕರ ದಂಡು ಇಲ್ಲಿ ಕಾಣಸಿಗಲಿದೆ ಎಂದು ಹೇಳಲಾಗುತ್ತಿದೆ.