ನಂಜನಗೂಡು : ಮನೆವೊಂದರಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ನಗದು, ಆಭರಣ ಹಾಗೂ ಬೆಳ್ಳಿ ಪದಾರ್ಥಗಳನ್ನು ಕದ್ದೊಯ್ದ ಘಟನೆ ವರದಿಯಾಗಿದೆ.
ನಗರದ ದೇವಿರಮ್ಮನಹಳ್ಳಿ ರಸ್ತೆಯ ಸಾಯಿಬಾಬಾ ದೇವಾಲಯದ ಪಕ್ಕದ ಬೀದಿಯಲ್ಲಿ ಈ ಘಟನೆ ನಡೆದಿದೆ. ಈ ಬೀದಿಯ ಪಾರ್ವತಿ ನಿಲಯದಲ್ಲಿ ಭೋಗ್ಯಕ್ಕಿದ್ದ ರಂಗರಾಜು ಭುವನೇಶ್ವರಿ ಕುಂಟುಂಬ ಮಂಗಳವಾರ ಸಂಜೆ ಸಂಬಂಧಿಕರ ಮನೆಗೆ ತೆರಳಿದ್ದ ವೇಳೆ ಕಳ್ಳರು ಮಹಡಿ ಮನೆಯ ಬಾಗಿಲನ್ನು ಲಾಕ್ ಮಾಡಿ ಕೆಳಗಿನ ಮನೆಯ ಬೀಗವನ್ನು ಮುರಿದು ಮನೆಯ ಒಳಗೆ ಪ್ರವೇಶಿಸಿ ಕೊಠಡಿಯಲ್ಲಿರುವ ಕಪಾಟಿನ ಬೀಗ ಮುರಿದ ಕಳ್ಳರು ೨೫೦ ಗ್ರಾಂ ಚಿನ್ನದ ಆಭರಣ, ೧.೩೦ ಕೆ.ಜಿ.ಬೆಳ್ಳಿ ಪದಾರ್ತಗಳು ಹಾಗೂ ೮೦ ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.
ಪಕ್ಕದ ಬಿಸಿಎಂ ಹಾಸ್ಟೇಲ್‌ನ ಬೀಗ ಮುರಿದ ಕಳ್ಳರು, ಅಲ್ಲಿದ್ದ ೭ ಸಾವಿರ ರೂ.ನಗದು ಹಾಗೂ ಬೆಳಗಾವಿಯ ರುದ್ರಮ್ಮ ಅವರ ೪ ಗ್ರಾಂ. ನ ಉಂಗುರವನ್ನು ಕಳವುಗೈದು ಅಲ್ಲಿದ್ದ ಸಿಸಿ ಕ್ಯಾಮೆರಾದ ಡಿವಿಆರ್‌ನ್ನು ಕದ್ದೊಯ್ದಿದ್ದಾರೆ.
ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳಕ್ಕೆ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಲಾಗಿತ್ತು. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್, ಡಿವೈಎಸ್‌ಪಿ ಗೋವಿಂದರಾಜು, ಗ್ರಾಮಾಂತರ ಠಾಣೆಯ ಸಿಪಿಐ ಶಿವನಂಜ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ : ಭಟ್ಕಳ : ಟ್ಯಾಕ್ಸಿ ಚಾಲಕನ ಮೇಲೆ ಸಬ್ ಇನ್ಸ್ ಪೆಕ್ಟರ್ ಹಲ್ಲೆ : ಸೂಕ್ತ ಕ್ರಮಕ್ಕೆ ಆಗ್ರಹ