Advertisement

ಸಂಭ್ರಮದ ನಂದೀಶ್ವರ ಪಲ್ಲಕ್ಕಿ ಉತ್ಸವ

02:52 PM Aug 15, 2017 | |

ಬಸವನಬಾಗೇವಾಡಿ: ಪ್ರತಿ ವರ್ಷದಂತೆ ಈ ವರ್ಷ ಕೂಡಾ ಕರ್ನಾಟಕ, ಮಹಾರಾಷ್ಟ್ರ, ಸೀಮಾಂಧ್ರ, ತೆಲಂಗಾಣ,
ತಮಿಳುನಾಡು ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಬಸವೇಶ್ವರ (ನಂದೀಶ್ವರ) ಪಲ್ಲಕ್ಕಿ
ಉತ್ಸವಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಬೆಳಗ್ಗೆ 4ರಿಂದ ಆರಂಭವಾದ ಅಭಿಷೇಕದಲ್ಲಿ ಪಾಲ್ಗೊಂಡು ದೇವರಿಗೆ ಅಭಿಷೆಕ ಮಾಡಿಸಿ ಸಹಸ್ರಾರು ಭಕ್ತರು ತಮ್ಮ ಹರಕೆ ತೀರಿಸಿದರು. ಇನ್ನೂ ಕೆಲ ಭಕ್ತರು ಉರುಳು ಸೇವೆ ಮಾಡಿದರು. ಮೊದಲು ದೇವಸ್ಥಾನದಲ್ಲಿ ನಂದೀಶ್ವರ ಮೂರ್ತಿಗೆ ವಿಶೇಷ ಅಭಿಷೇಕ ನೆರವೇರಿದ ನಂತರ ವಿವಿಧ ಹೂವು ಹಾಗೂ ವಿಳೆದ ಎಲೆ ಹಾಗೂ ವಿವಿಧ ಆಭರಣಗಳಿಂದ
ಅಲಂಕರಿಸಲಾಗಿತ್ತು. ವಿವಿಧ ರಾಜ್ಯಗಳಿಂದ ಆಗಮಿಸಿದ ಭಕ್ತ ಸಮೂಹ ತಮ್ಮ ಕುಟುಂಬ ಸಮೇತರಾಗಿ ಬಂದಿದ್ದ ಭಕ್ತರಿಗೆ ದೇವಸ್ಥಾನ ಆವರಣದಲ್ಲಿ ಅಡುಗೆ ಮಾಡಿ ದೇವರಿಗೆ ನೈವೇದ್ಯ ಹಿಡಿದು ಕೆಲ ಭಕ್ತರಿಗೆ ಊಟಬಡಿಸಿದರು. ಬೆಳಗ್ಗೆ 10ಕ್ಕೆ ದೇವಸ್ಥಾನದಲ್ಲಿ ದೇವರ ಪೂಜೆ ನೆರವೇರಿದ ನಂತರ ಆನೆ ಅಂಬಾರಿ ಮೆರವಣಿಗೆಯೊಂದಿಗೆ ದೇವಸ್ಥಾನದಿಂದ ಸಾವಿರಾರು ಭಕ್ತರು ಪಟ್ಟಣದ ವಿರಕ್ತಮಠಕ್ಕೆ ತೆರಳಿದ ಭಕ್ತರು ಸಾಂಗ್ಲಿ ಜಿಲ್ಲೆ ಬೀಳೂರ ಸಂಖದ ವಿರಕ್ತಮಠದ ಮುರುಘೇಂದ್ರ ಸ್ವಾಮೀಜಿ ಹಾಗೂ ಪಟ್ಟಣದ ಸಿದ್ದಲಿಂಗ ಶ್ರೀಗಳು ಮತ್ತು ಮೂಲನಂದಿಶ್ವರನ ಪೂಜಾರಿ ಈರಕಾರ ಮೂತ್ಯಾ ಅವರನ್ನು ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು. ದೇವಸ್ಥಾನದಲ್ಲಿ ಮೂಲನಂದಿಶ್ವರ ಮೂರ್ತಿಗೆ ಪೂಜೆ ಹಾಗೂ ಆರತಿ ಬೆಳಗಿದ ಶಾಸಕ ಶಿವಾನಂದ ಪಾಟೀಲ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿದರು. ನಂತರ ಪಟ್ಟಣದ ಶಿವಪ್ಪ ಮೋದಿ ಅವರ ಮನೆಗೆ ಅವರಿಗೆ ತೆರಳಿ ಹೋರಿಮಟ್ಟಿ ಗುಡ್ಡದ ದೇವಸ್ಥಾನ ಕಳಸಕ್ಕೆ ಪೂಜೆ ಸಲ್ಲಿಸಿದ ನಂತರ ನಿಡಗುಂದಿ ಮನೆತನದವರು ಕಳಸ ಹೊತ್ತುಕೊಂಡು ಸಾಗಿದ ಉತ್ಸವ ಹೋರಿಮಟ್ಟಿ ಗುಡ್ಡಕ್ಕೆ ತೆರಳಿತು. ಪಲ್ಲಕ್ಕಿ ಉತ್ಸವದ ಮೆರಣಿಗೆಯಲ್ಲಿ ಶಾಸಕ ಶಿವಾನಂದ ಪಾಟೀಲ, ಬಸವರಾಜೇಶ್ವರಿ ಮಾತಾಜಿ, ಕೂಡಲಸಂಗಮ ಅಭಿವೃದ್ಧಿ ಮಂಡಳಿ ಆಯುಕ್ತ ಮಹಾದೇವ ಮುರಗಿ, ಈರಣ್ಣ ಪಟ್ಟಣಶೆಟ್ಟಿ, ಲೋಕನಾಥ ಅಗರವಾಲ, ಪುರಸಭೆ ಅಧ್ಯಕ್ಷ ಬಸವರಾಜ ತುಂಬಗಿ, ಬಿಜೆಪಿ ಮುಖಂಡ ಸಂಗರಾಜ ದೇಸಾಯಿ, ಜಗದೀಶ ಕೊಟ್ರಶೆಟ್ಟಿ, ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ರವಿ ಹಂಜಗಿ, ಬಸವ ಸೈನ್ಯ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ, ಬಸವರಾಜ ಹಾರಿವಾಳ, ಸಂಗಪ್ಪ ವಾಡೇದ, ಬಸವರಾಜ ಗೊಳಸಂಗಿ, ವೈ.ಡಿ. ನಾಯೋಡಿ, ಸುರೇಶಗೌಡಪಾಟೀಲ, ಬಸವರಾಜ ಕೋಟಿ, ಮಲ್ಲು ಪಾಟೀಲ, ರವಿ ರಾಠೊಡ, ಮಹಾಂತೇಶ ಹಂಜಗಿ, ಅನಿಲ ಪವಾರ, ವಿಶ್ವನಾಥ
ಹಾರಿವಾಳ, ಡಾ| ಕರುಣಾಕರ ಚೌಧರಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಸಂಜೆ 7ಕ್ಕೆ ಮನಗೂಳಿ-ಬಿಜ್ಜಳ ರಾಜ್ಯ ಹೆದ್ದಾರಿ ಬಳಿ
ಇರುವ ಮಿನಿ ವಿಧಾನ ಸೌಧದ ಎದುರು ಪಲ್ಲಕ್ಕಿ ಕಟ್ಟೆಗೆ ಬಂದು ತಲುಪಿತು. ನಂತರ ಸಕಲ ವಾದ್ಯ ವೈಭವದೊಂದಿಗೆ ಆನೆ ಅಂಬಾರಿಯೊಂದಿಗೆ ಪಲ್ಲಕ್ಕಿಯನ್ನು ಪುನಃ ದೇವಸ್ಥಾನಕ್ಕೆ ತರಲಾಯಿತು. ನಂತರ ರಾತ್ರಿಯಿಡಿ ಪಲ್ಲಕ್ಕಿ ಉತ್ಸವ ಜರುಗಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next