Advertisement

ರಿಯಾಯಿತಿ ದರದಲ್ಲಿ ನಂದಿನಿ ಸಿಹಿ ಉತ್ಪನ್ನ

02:15 PM Jul 07, 2018 | Team Udayavani |

ಬೆಂಗಳೂರು: ಕರ್ನಾಟಕ ಹಾಲು ಒಕ್ಕೂಟವು (ಕೆಎಂಎಫ್) ತನ್ನ 20 ವಿವಿಧ ಸಿಹಿ ಉತ್ಪನ್ನಗಳನ್ನು ಗ್ರಾಹಕರಿಗೆ ಪರಿಚಯಿಸುವ ಉದ್ದೇಶದಿಂದ “ನಂದಿಸಿ ಸಿಹಿ ಉತ್ಸವ’ ಹಮ್ಮಿಕೊಂಡಿದ್ದು, ಎಲ್ಲಾ ನಂದಿನಿ ಸಿಹಿ ಉತ್ಪನ್ನಗಳ ಮೇಲೆ ಶೇ.10 ರಿಯಾಯಿತಿ ನೀಡಿದೆ. 

Advertisement

ಕೆಎಂಎಫ್ ಹಾಲಿನ ಜತೆ 64 ಬಗೆಯ ಹಾಲು ಉತ್ಪನ್ನಗಳನ್ನು ಸಿದ್ಧಪಡಿಸಿ ನಂದಿನಿ ಬ್ರಾಂಡ್‌ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದು, ಅವುಗಳಲ್ಲಿ 20ಕ್ಕೂ ಹೆಚ್ಚು ಸಿಹಿ ಉತ್ಪನ್ನಗಳಿವೆ. ಆದರೆ, ಗ್ರಾಹಕರಿಗೆ ಮೈಸೂರು ಪಾಕ್‌, ಪೇಡಾ ಹೊರತು ಪಡಿಸಿ ಮತ್ಯಾವ ಸಿಹಿ ಪದಾರ್ಥಗಳ ಪರಿಚಯವಿಲ್ಲ. ಹೀಗಾಗಿ ಶುಕ್ರವಾರದಿಂದ ಜು.20 ವರೆಗೂ 15 ದಿನಗಳ ನಂದಿನಿ ಸಿಹಿ ಉತ್ಸವ ಎಂಬ ವಿಶೇಷ ಕಾರ್ಯಕ್ರಮದ ಆಯೋಜಿಸಿದೆ.

ಉತ್ಸವದ ಅಂಗವಾಗಿ ಬಾದಾಮ್‌ ಬರ್ಫಿ, ಕ್ಯಾಷೂÂಬರ್ಫಿ, ಕೇಸರ್‌ ಪೇಡಾ, ಚಾಕಲೇಟ್‌ ಬರ್ಫಿ, ಜಾಮೂನ್‌, ರಸಗುಲ್ಲಾ ಸೇರಿದಂತೆ ತನ್ನ ಎಲ್ಲಾ ಸಿಹಿ ಉತ್ಪನ್ನಗಳ ಮೇಲೆ ಶೇ.10 ರಿಯಾಯಿತಿ ನೀಡಿದೆ. ರಾಜ್ಯದ ಎಲ್ಲಾ ನಂದಿನಿ ಮಳಿಗೆಗಳಲ್ಲಿ ಗ್ರಾಹಕರು ಈ ಸೌಲಭ್ಯ ಪಡೆಯಬಹುದು ಎಂದು ಕೆಎಂಎಫ್ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next