Advertisement
ಸ್ಥಳೀಯರು ನಿರಂತರವಾಗಿ ಬಹುವರ್ಷದಿಂದ ನಡೆಸಿದ ಹೋರಾಟದಿಂದ ಸುಮಾರು 2.5 ಕೋ. ರೂ. ವೆಚ್ಚದಲ್ಲಿ ಸಚಿವರಾಗಿದ್ದ ಅಭಯಚಂದ್ರ ಜೈನ್ ಅವರು ಮೀನುಗಾರಿಕಾ ಇಲಾಖೆಯ ವಿಶೇಷ ನಿಧಿಯಲ್ಲಿ ನಬಾರ್ಡ್ ಯೋಜನೆಯ ಮೂಲಕ ಈ ರಸ್ತೆಯನ್ನು ನಿರ್ಮಿಸಿದರು. ಪಡುಪಣಂಬೂರು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸೇರಿರುವ ಈ ರಸ್ತೆಯ ಅಂಚು ಕುಸಿತ ಕಂಡು ನದಿಗೆ ಹಾಕಲಾಗಿರುವ ತಡೆಗೋಡೆಯೂ ಅಲ್ಲಲ್ಲಿ ಬಿರುಕು ಬಿಟ್ಟಿದೆ. ಇಲಾಖೆಯು ಸೂಕ್ತವಾಗಿ ದುರಸ್ತಿ ನಡೆಸದಿದ್ದಲ್ಲಿ ಇನ್ನಷ್ಟು ಉದ್ದದಲ್ಲಿ ತಡೆಗೋಡೆ ನದಿ ಪಾಲಾಗಿ ರಸ್ತೆಯೂ ಸಹ ನದಿಯ ಒಡಲಿಗೆ ಸೇರುವ ಆತಂಕ ಸ್ಥಳೀಯರಲ್ಲಿದೆ.
– ಮೋಹನ್‌ದಾಸ್ ಅಧ್ಯಕ್ಷರು, ಗ್ರಾಮ ಪಂಚಾಯತ್, ಪಡುಪಣಂಬೂರು ನೆಲಹಾಸು ಕಾಮಗಾರಿ ನಡೆಸುತ್ತೇವೆ
ತಡೆಗೋಡೆ ಕುಸಿತವನ್ನು ಇಲಾಖೆ ಗಮನಿಸಿದೆ. ಕೆಲವೊಂದು ಪ್ರದೇಶದಲ್ಲಿ ನದಿಯ ಮಟ್ಟವು ಆಳವಾಗಿರುವುದರಿಂದ ಈ ಭಾಗದಲ್ಲಿ ತಡೆಗೋಡೆ ಕುಸಿತ ಕಂಡಿದೆ. ನೆರೆ ನೀರಿನ ಸೆಳೆತ ಕ್ಷೀಣಿಸಿದ ತತ್ ಕ್ಷಣ ಕಾಮಗಾರಿ ಕೈಗೊಳ್ಳಲಾಗುವುದು. ರಸ್ತೆಯನ್ನು ಉಳಿಸುವ ಜವಾಬ್ದಾರಿ ಇಲಾಖೆಯದ್ದಾಗಿದೆ. ಕುಸಿತ ಪ್ರದೇಶದಲ್ಲಿ ಪಿಚಿಂಗ್ ನಂತೆ (ನೆಲಹಾಸು) ಕಾಮಗಾರಿ ನಡೆಸುತ್ತೇವೆ.
– ಪ್ರವೀಣ್ ಕುಮಾರ್, ಸಹಾಯಕ ಎಂಜಿನಿಯರ್ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ , ಮಂಗಳೂರು