ಚೇಳಾೖರು: ಸ್ಥಳೀಯ ಮರಳಿನ ತ್ಯಾಜ್ಯ, ಒಳಚರಂಡಿಯ ತ್ಯಾಜ್ಯವು ಮತ್ತು ಸ್ಥಳೀಯ ಸಂಸ್ಥೆಗಳ ಕೊಳಚೆ ನೀರು ನೇರವಾಗಿ ನದಿ ನೀರಿಗೆ ಬಿಡಲಾಗುತ್ತಿದ್ದು, ಶುಕ್ರವಾರ ದ.ಕ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಭೇಟಿ ನೀಡಿ ಪರಿಶೀಲಿಸಿದರು.
ಖಾಸಗಿ ಸಂಸ್ಥೆಯ ಕೊಳಚೆ ನೀರು ಪೊದೆ ಗಿಡಗಳ ನಡುವೆ ಹೋಗಿ ಬಳಿಕ ನಂದಿನಿ ನದಿಯನ್ನು ಸೇರುತ್ತಿದೆ. ತ್ಯಾಜ್ಯ ದ ನೀರಿನಲ್ಲಿ ನ್ಯಾಪ್ಕಿನ್ ಮುಂತಾದ ತ್ಯಾಜ್ಯ ವಸ್ತುಗಳು ಸೇರಿ ಕೊಳೆತು, ಈ ಭಾಗದಲ್ಲಿ ಮೂಗು ಮುಚ್ಚಿಕೊಂಡು ತೆರಳು ವಂತಾಗಿದೆ. ಸೂಕ್ತ ವ್ಯವಸ್ಥೆ ಕಲ್ಪಿಸದೇ ಈ ರೀತಿ ನದಿಗೆ ಬಿಡುತ್ತಿರುವುದು ಬಹಳ ಹಾನಿಕರಕ. ಮರಳು ತಯಾ ರಿಕಾ ಘಟಕ ದಲ್ಲಿನ ತ್ಯಾಜ್ಯ ನೀರು ಕೂಡ ನದಿ ತಟವನ್ನು ಸೇರಿ ನೀರನ್ನು ಮಲಿಗೊ ಳಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳಿಗೆ ಮನವಿ
ಈ ಸಂದರ್ಭ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪತ್ರಿಕೆಯಲ್ಲಿ ಬಂದ ವರದಿ ಗಮನಿಸಿ ಭೇಟಿ ನೀಡಿ ದ್ದೇನೆ. ನದಿಯ ನೀರು ಸಂಪೂರ್ಣ ಕಲುಷಿತಗೊಂಡಿದ್ದು, ಕುಡಿಯಲು ಬಿಡಿ, ನೀರಿಗೆ ಇಳಿಯಲು ಸಾಧ್ಯವಿಲ್ಲದಂತಾಗಿದೆ. ನದಿಯಲ್ಲಿ ಕಳೆಯ ಸಮಸ್ಯೆ ಹೆಚ್ಚಾಗಿತ್ತು, ಅದನ್ನು ತೆರವು ಗೊಳಿಸಿದ ಬಳಿಕ ಇದೀಗ ಸ್ಥಳೀಯ ಕೆಲವು ಖಾಸಗಿ ಸಂಸ್ಥೆಗಳ ತ್ಯಾಜ್ಯವು ನೇರ ನದಿತಟವನ್ನೇ ಸೇರಿ ಇಡೀ ಮತ್ಸ್ಯಸಂಪತ್ತಿಗೆ ಬದುಕಲು ಯೋಗ್ಯವಿಲ್ಲದಂತಾಗಿದೆ. ಸ್ಥಳೀಯರು ಪಂಚಾಯತ್ ಮೂಲಕ ಜಿಲ್ಲಾಧಿ ಕಾರಿಗಳಿಗೆ ಸಮಸ್ಯೆಯ ಕುರಿತು ಮನವಿ ನೀಡಿದ್ದು, ಜಿಲ್ಲಾಧಿಕಾರಿಗಳು ಸಮಸ್ಯೆ ಬಗೆಹರಿಸುವಂತೆ ಪಾಲಿಕೆ ಕಮಿಷನರ್‌ಗೆ ಸೂಚನೆ ನೀಡಿದ್ದಾರೆ.
ತಾ.ಪಂ.ಸದಸ್ಯೆ ವಜ್ರಾಕ್ಷಿ ಶೆಟ್ಟಿ, ಚೇಳಾೖರು ಖಂಡಿಗೆ ದೇವಸ್ಥಾನದ ಆಡ ಳಿತ ಸಮಿತಿಯ ಅಧ್ಯಕ್ಷ ದಯಾನಂದ ಶೆಟ್ಟಿ ಖಂಡಿಗೆಬೀಡು, ಚೇಳಾೖರು ಗ್ರಾಮ ಪಂಚಾಯತ್ ಅಧ್ಯಕ್ಷ ಜಯಾನಂದ ಮತ್ತಿತರರು ಉಪಸ್ಥಿತರಿದ್ದರು.
ಶೀಘ್ರ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಊರವರೊಂದಿಗೆ ಸೇರಿ ಪ್ರತಿಭಟ ನೆಗೂ ಸಿದ್ಧವಾಗಿದ್ದೇವೆ ಎಂದು ಕಸ್ತೂರಿ ಪಂಜ ಅವರು ಎಚ್ಚರಿಸಿದರು.