Advertisement

Nandini ಉತ್ಪನ್ನವನ್ನು ಕನ್ನಡಿಗರೇ ಕಾಪಾಡಿಕೊಳ್ಳಬೇಕು:ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ

08:39 PM Apr 06, 2023 | Team Udayavani |

ಬೆಂಗಳೂರು: ನಂದಿನಿ ಹಾಲಿನ ಪದಾರ್ಥಗಳು ಎಲ್ಲೆಡೆ ಸಿಗದಂತೆ ಮಾಡಿ ಕೃತಕ ಅಭಾವ ಸೃಷ್ಟಿಸಿ ಈಗ ಆ ಜಾಗದಲ್ಲಿ ಅಮುಲ್‌ ಉತ್ಪನ್ನ ದೊರೆಯುವಂತೆ ಮಾಡುವ ವ್ಯವಸ್ಥಿತ ಪಿತೂರಿ ನಡೆದಿದೆ. ಈ ಹಿನ್ನೆಲೆಯಲ್ಲಿ ಈ ನೆಲದ ಬ್ರಾಂಡ್‌ ಆಗಿರುವ ನಂದಿನಿ (ಕೆಎಂಎಫ್)ಯನ್ನು ಕನ್ನಡಿಗರೇ ಕಾಪಾಡಿಕೊಳ್ಳಬೇಕಾಗಿದೆ ಎಂದು ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ ಹೇಳಿದ್ದಾರೆ.

Advertisement

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೆಎಂಎಫ್ ಹಾಗೂ ಗುಜರಾತ್‌ನ ಅಮೂಲ್‌ ವಿಲೀನಕ್ಕೆ ಸಂಬಂಧಿಸಿದಂತೆ ಮತ್ತೂಂದು ಸುತ್ತಿನ ಆಕ್ರೋಶ ಕನ್ನಡಿಗರಲ್ಲಿ ಉಂಟಾಗಿದೆ. ಬೆಂಗಳೂರಿನಲ್ಲಿ ಅಮುಲ್‌ ಉತ್ಪನ್ನಗಳನ್ನ ಹೋಮ್‌ ಡಿಲಿವರಿ ಮಾಡಲು ನಿರ್ಧರಿಸಿದ್ದು ಇದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ ಎಂದು ಹೇಳಿದ್ದಾರೆ.

ಇಡೀ ದಕ್ಷಿಣ ರಾಜ್ಯಗಳಿಗೆ ಬೇಕಾಗುವಷ್ಟು ಐಸ್‌ ಕ್ರೀಮ್‌ ಕೆಎಂಎಫ್ ವತಿಯಿಂದ ಬೆಂಗಳೂರು ಮತ್ತಿತರ ಕಡೆ ತಯಾರಿಸಿ ಕೊಡಲಾಗುತ್ತಿದೆ. ರಾಜ್ಯದ ಜನರು ಅಮೂಲ್‌ ಬಳಕೆ ಮಾಡದೇ ಕೇವಲ ನಂದಿನಿ ಹಾಲಿನ ಉತ್ಪನ್ನಗಳನ್ನಷ್ಟೇ ಬಳಕೆ ಮಾಡಬೇಕೆಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next