ಬೆಂಗಳೂರು: ಕಳೆದ ವಾರ ಏರಿಕೆ ಆದೇಶವಾಗಿ ನಂತರ ಮುಖ್ಯಮಂತ್ರಿಗಳ ಮಧ್ಯಪ್ರವೇಶದಿಂದ ಸ್ಥಗಿತವಾಗಿದ್ದ ನಂದಿನಿ ಹಾಲು ಮತ್ತು ಮೊಸರು ದರದಲ್ಲಿ ಇದೀಗ ಏರಿಕೆಯಾಗಿದೆ. ನವೆಂಬರ್ 24ರಿಂದ ಜಾರಿಗೆ ಬರುವಂತೆ ಪ್ರತಿ ಲೀಟರ್ ಗೆ ಎರಡು ರೂ ಹೆಚ್ಚಿಸಲಾಗಿದೆ.
ಇಂದು ನಡೆದ ಕೆಎಂಎಫ್ ಆಡಳಿತ ಮಂಡಳಿಯ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಮಾಡಲಾಗಿದೆ.
ಇದನ್ನೂ ಓದಿ:ಮಹಾರಾಷ್ಟ್ರದ ಒಂದು ಹಳ್ಳಿಯನ್ನೂ ಕರ್ನಾಟಕಕ್ಕೆ ಬಿಟ್ಟುಕೊಡುವುದಿಲ್ಲ: ದೇವೇಂದ್ರ ಫಡ್ನವೀಸ್
ವಾರದ ಹಿಂದೆ ಪ್ರತಿ ಲೀಟರ್ ಹಾಲಿಗೆ ಮೂರು ರೂ. ಬೆಲೆ ಹೆಚ್ಚಿಸಿ ಕೆಎಂಎಫ್ ತೀರ್ಮಾನ ಮಾಡಿತ್ತು. ಆದರೆ ಆಗ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಧ್ಯಪ್ರವೇಶ ಮಾಡಿದ್ದರು. ಇದೀಗ ಸಿಎಂ ಸೂಚನೆಯಂತೆ ತಲಾ ಎರಡು ರೂ. ಏರಿಕೆ ಮಾಡಲಾಗಿದೆ.
ಜಾನುವಾರುಗಳಿಗೆ ಚರ್ಮಗಂಟು ರೋಗದ ಹಿನ್ನೆಲೆಯಲ್ಲಿ ರೈತರಿಗೆ ನೆರವಾಗಲು ಹೆಚ್ಚಳವಾದ ಎರಡು ರೂ. ರೈತರಿಗೆ ಸಿಗಲಿದೆ ಎಂದು ಕೆಎಂಎಫ್ ತಿಳಿಸಿದೆ.