Advertisement

ಬೇಡಿಕೆ ಈಡೇರಿಸಲು ನಂದಿಹಾಳ ಗ್ರಾಮಸ್ಥರ ಆಗ್ರಹ

03:53 PM Jun 19, 2022 | Shwetha M |

ಬಸವನಬಾಗೇವಾಡಿ: ತಾಲೂಕಿನ ನಂದಿಹಾಳ (ಪಿಯು) ಗ್ರಾಮದಲ್ಲಿ ಪರಿಶಿಷ್ಟ ಪಂಗಡದವರಿಗೆ ಸೇರಿದ ಸಮುದಾಯ ಭವನದ ಅಕ್ಕ ಪಕ್ಕ ತಿಪ್ಪೆ ಹಾಗೂ ವಿವಿಧ ಅಂಗಡಿಗಳನ್ನು ತೆರುವುಗೊಳಿಸಬೇಕೆಂದು ಆಗ್ರಹಿಸಿ ಶನಿವಾರ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಭೀಮವಾದ) ನೇತೃತ್ವದಲ್ಲಿ ಗ್ರಾಮದ ನೂರಾರು ಜನರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

Advertisement

ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಮಾಯಿಸಿದ ಗ್ರಾಮದ ನೂರಾರು ಜನರು ಘೋಷಣೆ ಕೂಗುತ್ತ ತಾಳಿಕೋಟೆ ರಸ್ತೆಯ ಮಿನಿ ವಿಧಾನಸೌಧಕ್ಕೆ ತೆರಳಿ ತಹಶೀಲ್ದಾರ್‌ ಕಚೇರಿ ಮುಂದೆ ಕೆಲ ಹೊತ್ತು ಪ್ರತಿಭಟನೆ ನಡೆಸಿದರು.

ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಡಿಎಸ್‌ಎಸ್‌ ಜಿಲ್ಲಾ ಸಂಘಟನಾ ಸಂಚಾಲಕ ಅರವಿಂದ ಸಾಲವಾಡಗಿ, ಮುಖಂಡರಾದ ನಿಜಪ್ಪ ಔರಸಂಗ, ಪರಶುರಾಮ ಬಡಿಗೇರ, ಮಹಾಂತೇಶ ಸಾಸಾಬಾಳ ಮಾತನಾಡಿ, ಹಲವು ವರ್ಷಗಳ ಹಿಂದೆ ಗ್ರಾಮದಲ್ಲಿ ಲಕ್ಷಾಂತರ ಹಣ ಖರ್ಚು ಮಾಡಿ ಸರ್ಕಾರ 80×80 ಜಾಗೆಯಲ್ಲಿ ಸುಂದರವಾದ ಸಮುದಾಯ ಭವನ ನಿರ್ಮಿಸಿದೆ. ಆದರೆ ಇಲ್ಲಿವರೆಗೆ ವಾಲ್ಮೀಕಿ ಸಮಾಜದ ಬಾಂಧವರಿಗೆ ನೀಡಿಲ್ಲ. ಅದರ ಸುತ್ತ ಮುತ್ತ ತಿಪ್ಪೆ ಹಾಗೂ ಇನ್ನಿತರ ಅಂಗಡಿಗಳನ್ನು ಹಾಕಲಾಗಿದ್ದು ಇದರಿಂದ ಭವನದ ಸುತ್ತಲಿನ ಪರಿಸರ ಹಾಳಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದರು.

ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಲ್ಲಿರುವ ತಿಪ್ಪೆಗಳು ಹಾಗೂ ಅಂಗಡಿಗಳನ್ನು ತೆರುವುಗೊಳಸಿ ಸಮುದಾಯ ಭವನದ ಸುತ್ತಲು ಮುಳ್ಳು ತಂತಿ ಬೇಲಿ ಹಾಕಿ ಭವನದ ಸುತ್ತ ಮುತ್ತಲು ಗಿಡ ಗಂಟೆಗಳನ್ನು ನಿರ್ಮಿಸಬೇಕು. ಒಂದು ವೇಳೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಮಹಾತ್ಮರ ಬಗ್ಗೆ ಇಲ್ಲ ಸಲ್ಲದ ವಿಷಯವನ್ನು ಮುದ್ರಿಸಿರುವುದನ್ನು ಕೈ ಬಿಟ್ಟು ಹಳೆಯ ಪಠ್ಯ ಪುಸ್ತಕವನ್ನು ಮುಂದುವರಿಸಬೇಕು. ಗ್ರಾಮೀಣ ಭಾಗದ ದಲಿತರಿಗೆ ಸ್ಮಶಾನ ಭೂಮಿ ನೀಡಬೇಕು. ಬಸವನಬಾಗೇವಾಡಿ ಪುರಸಭೆಯಿಂದ 22, 75 ಅನುದಾನ ಅಡಿಯಲ್ಲಿ ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌, ಕಂಪ್ಯೂಟರ್‌ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

Advertisement

ಪ್ರತಿಭಟನೆಯಲ್ಲಿ ನೀಲಮ್ಮ ಬಡಿಗೇರ, ಸತ್ಯವ್ವ ಔರಸಂಗ, ಬಸವ್ವ ಬಡಿಗೇರ, ಮಹಾದೇವಿ ಕೂಡಗಿ, ಶರಣವ್ವ ಬಡಿಗೇರ, ಸುಮಿತ್ರಾ ವಾಲೀಕಾರ, ಗಂಗವ್ವ ಬಡಿಗೇರ, ಕಸ್ತೂರಿ ಕೂಡಗಿ, ಚಂದ್ರವ್ವ ಬಡಿಗೇರ, ಸಾವಿತ್ರಿ ಆರೇಶಂಕರ, ಮುತ್ತವ್ವ ಬಡಿಗೇರ, ಭಾಗವ್ವ ಕೂಡಗಿ, ಕಮಲವ್ವ ಬಡಿಗೇರ, ಮುದುಕವ್ವ ಆರೇಶಂಕರ, ಸೋಮು ಔರಸಂಗ, ಕುರುಬಾಯಿ ಬಡಿಗೇರ, ದುಂಡವ್ವ ಮಸ್ತಾಳ, ರಂಗವ್ವ ಬಡಿಗೇರ, ನೀಲಮ್ಮ ಬಡಿಗೇರ, ಅಪ್ಪು ಬಂಗಾರಿ, ರಾಮು ರೇಬಿನಳ, ಶಿವಪ್ಪ ಬಡಿಗೇರ, ಸಿದ್ದರಾಮಪ್ಪ ಬಡಿಗೇರ, ಮುದುಕಪ್ಪ ಆರೇಶಂಕರ, ಶ್ರೀಶೈಲ ದೊಡ್ಡಮನಿ, ಗಂಗವ್ವ ದಳವಾಯಿ, ಮುತ್ತವ್ವ ಬಡಿಗೇರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next