Advertisement

ಚಾಮುಂಡಿಬೆಟ್ಟದ ನಂದಿಗೆ ಮಹಾಭಿಷೇಕ

10:54 PM Nov 17, 2019 | mahesh |

ಮೈಸೂರು: ಕಾರ್ತಿಕ ಮಾಸದ ಅಂಗವಾಗಿ ಭಾನು ವಾರ ಚಾಮುಂಡಿಬೆಟ್ಟದ ನಂದಿಗೆ ವಿಶೇಷ ಪೂಜೆ ಹಾಗೂ 40 ಬಗೆಯ ದ್ರವ್ಯ ಗಳಿಂದ ಮಹಾಭಿಷೇಕ ನೆರವೇರಿಸಲಾಯಿತು. ಮಹಾಭಿಷೇಕದ ಅಂಗವಾಗಿ ಬೆಳಗ್ಗೆ 9.30 ರಿಂದಲೇ ನಂದಿ ವಿಗ್ರಹದ ಪೂಜಾ ಕೈಂಕರ್ಯಗಳು ಪ್ರಾರಂಭವಾದವು.

Advertisement

500 ಲೀ.ಹಾಲು, 200 ಲೀ. ಮೊಸರು, 40 ಕೆ.ಜಿ. ತುಪ್ಪ, ಅರಿಶಿಣ- ಕುಂಕುಮ, ಗಂಧ- ಚಂದನ, ವಿಭೂತಿ, ಬಾಳೆ ಹಣ್ಣು, ಕಲ್ಲು ಸಕ್ಕರೆ, ಸೇಬಿನ ಹಣ್ಣು, ಹಸಿ, ಒಣದ್ರಾಕ್ಷಿ, ಜೇನುತುಪ್ಪ, ಕಡಲೆ ಎಣ್ಣೆ ಸೇರಿ ಒಟ್ಟು 40 ಬಗೆಯ ದ್ರವ್ಯ ಹಾಗೂ ಹಣ್ಣುಗಳಿಂದ ಅಭಿ ಷೇಕ ನೇರವೇರಿಸಲಾಯಿತು.

ಪ್ರತಿವರ್ಷ ಕಾರ್ತಿಕ ಮಾಸದ 3ನೇ ಸೋಮವಾರದ ಹಿಂದಿನ ಭಾನುವಾರದಂದು ಬೆಟ್ಟದ ಬಳಗ ಚಾರಿಟಬಲ್‌ ಟ್ರಸ್ಟ್‌, ನಂದಿಗೆ ಮಹಾಭಿಷೇಕ ಆಯೋಜಿಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಭಾನುವಾರ 14ನೇ ವರ್ಷದ ಮಹಾಭಿಷೇಕವನ್ನು ಅದ್ದೂರಿಯಾಗಿ ನೆರವೇರಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next