Advertisement

Kalaburagi; ಮುತ್ತಗಾದಲ್ಲಿ ನಂದಿ ಬಸವೇಶ್ವರ ಮೂರ್ತಿ ಧ್ವಂಸ: ವಾರದೊಳಗೆ ಎರಡನೇ ಪ್ರಕರಣ

04:51 PM Oct 17, 2023 | Team Udayavani |

ಕಲಬುರಗಿ: ಜಿಲ್ಲೆಯ ಶಹಾಬಾದ್ ತಾಲೂಕಿನ ಮುತ್ತಗಾ ಗ್ರಾಮದಲ್ಲಿ ಕಂಠಿ ಬಸವೇಶ್ವರ ದೇವಸ್ಥಾನದ ನಂದಿ ಬಸವೇಶ್ವರ ಮೂರ್ತಿಯನ್ನು ಕಿಡಿಗೇಡಿಗಳು ಧ್ವಂಸಗೊಳಿದ್ದಾರೆ.

Advertisement

ನಂದಿ ಬಸವೇಶ್ವರರ ಮೂರ್ತಿಯನ್ನು ಸಂಪೂರ್ಣ ಧ್ವಂಸಗೊಳಿಸಿ ಅವಮಾನ ಎಸಗಲಾಗಿದ್ದು, ವಾರದಲ್ಲೇ ಜಗಜ್ಯೋತಿ ಬಸವೇಶ್ವರ ಭಾವಚಿತ್ರಕ್ಕೆ ಅವಮಾನ ಎಸಗಿದ ಎರಡನೇ ಪ್ರಕರಣ ಇದಾಗಿದೆ.

ಮುತ್ತಗಾ ಗ್ರಾಮದಲ್ಲಿ ಪ್ರಸಿದ್ದ ಕಂಠಿ ಬಸವೇಶ್ವರ ದೇವಸ್ಥಾನದ ಒಳಗೆ ನುಗ್ಗಿ ನಂದಿ ಬಸವೇಶ್ವರ ಪುತ್ಥಳಿಯನ್ನು ಧ್ವಂಸಗೊಳಿಸಲಾಗಿದೆ.

ವಾರದ ಹಿಂದೆ ಅಂದರೆ ಕಳೆದ ಅ. 10 ರಂದು ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ಕೆಲ‌ ಕಿಡಿಗೇಡಿಗಳು ಅವಮಾನಗೊಳಿಸಿರುವ ಪ್ರಕರಣದ ಆರೋಪಿಗಳ ಬಂಧನ ಇನ್ನೂ ಆಗಿಲ್ಲ, ಇದರ ನಡುವೆ ಇದೊಂದು ಘಟನೆ ನಡೆದಿರುವುದು ಸಮಾಜಕ್ಕಾದ ಅವಮಾನ ಎಂದು ವೀರಶೈವ-ಲಿಂಗಾಯತ ಸಮಾಜ ಆಕ್ರೋಶ ವ್ಯಕ್ತಪಡಿಸಿದೆ.

ಸಮಾನತೆ ಸಾರಿದ ಜಗಜ್ಯೋತಿ ಬಸವಣ್ಣನವರಿಗೆ ಅವಮಾನ ಮಾಡಲೆಂದೆ ನಂದಿ ಬಸವೇಶ್ವರ ಪುತ್ಥಳಿ ಒಡೆದು ಹಾಕಲಾಗಿದ್ದು, ಆರೋಪಿಗಳು ಯಾರೇ ಇರಲಿ ಇದ್ದರೂ 24 ಗಂಟೆಯೊಳಗೆ ಬಂಧಿಸಬೇಕೆಂದು ಸಮಾಜದ ಮುಖಂಡರು ಆಗ್ರಹಿಸಿದ್ದಾರೆ.

Advertisement

ಹಲಕರ್ಟಿ ಬಸವೇಶ್ವರ ಭಾವಚಿತ್ರ ಅವಮಾನಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸಲು ತನಿಖಾ ಕಾರ್ಯ ಕೊನೆ ಹಂತದಲ್ಲಿದೆ. ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಕಾಂಕ್ ಖರ್ಗೆ ಸೋಮವಾರವಷ್ಟೇ ಹೇಳಿಕೆ ನೀಡಿದ್ದಾರೆ. ಈಗ ಮತ್ತೊಂದು ಘಟನೆ ನಡೆದಿರುವುದು ಎಲ್ಲರನ್ನು ಕೆರಳಿಸಿದೆ.

ಮುತ್ತಗಾ ಗ್ರಾಮಕ್ಕೆ ಪೊಲೀಸರು ತೆರಳಿ ಶೋಧನೆ ನಡೆಸಿದ್ದಾರೆ.‌

ಕಲಬುರಗಿ ಜಿಲ್ಲೆಯಲ್ಲಿ ಮೇಲಿಂದ ಮೇಲೆ ಇಂತಹ ಅವಮಾನ ಪ್ರಕರಣಗಳು ಯಾಕೆ ನಡೆಯುತ್ತಿವೆ? ಇದರ ಹಿಂದೆ ಯಾರ ಕೈವಾಡವಾದರು ಇದೆ ಎಂಬುದನ್ನು ಪೊಲೀಸ್ ಇಲಾಖೆ ಪತ್ತೆ ಹಚ್ಚಬೇಕು.‌ ಹಲಕರ್ಟಿಯಲ್ಲಿ ನಡೆದ ಪ್ರಕರಣದ ನಡುವೆ  ಈ ಪ್ರಕರಣ ನಡೆದಿರುವುದು ಲಿಂಗಾಯತರಿಗೆ ಬಹಳ ನೋವುಂಟು ಮಾಡಿದೆ.‌ಹೀಗಾಗಿ 24 ಗಂಟೆಯೊಳಗೆ ಪ್ರಕರಣ ಬೇಧಿಸಿ ಆರೋಪಿಗಳನ್ನು ಬಂಧಿಸಬೇಕು. ಈ ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿದರೆ ಲಿಂಗಾಯತರು ರಾಜ್ಯದ್ಯಾಂತ ಹೋರಾಟಕ್ಕಿಳಿಯುವುದು ಅನಿವಾರ್ಯವಾಗುತ್ತದೆ ಎಂದು ಅಖಲ ಭಾರತ ವೀರಶೈವ ಲಿಂಗಾಯತ್ ಮಹಾಸಭಾ ಯುವ ಘಟಕದ ಜಿಲ್ಲಾ ಗೌರವ ಅಧ್ಯಕ್ಷ ಎಂ ಎಸ್ ಪಾಟೀಲ ನರಬೋಳ ಹಾಗೂ ಮುತ್ತಗಾ ಗ್ರಾಮದ ಮುಖಂಡ ಡಾ. ಮಹೇಂದ್ರ ಕೋರಿ ಎಚ್ಚರಿಕೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next