Advertisement
ಮೂರು ಧಾರ್ಮಿಕ ಕ್ಷೇತ್ರಗಳಾದ ನಂದಾವರ ಶ್ರೀ ವಿನಾಯಕ ಶಂಕರ ನಾರಾಯಣ ದುರ್ಗಾಂಬಾ ದೇವಸ್ಥಾನ, ನಂದಾವರ ಶ್ರೀ ವೀರಮಾರುತಿ ದೇವಸ್ಥಾನ, ಪಾಣೆಮಂಗಳೂರು ಶ್ರೀ ವೀರವಿಠuಲ ದೇವಸ್ಥಾನಗಳನ್ನು ಒಂದೇ ನೇರದಲ್ಲಿ ಬೆಸೆಯುವಂತೆ ಈ ಸೇತು ನಿರ್ಮಾಣದ ಬಗ್ಗೆ ಪ್ರಸಾವದಲ್ಲಿ ತಿಳಿಸಿದ್ದು, ಸಂಪರ್ಕ ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕೆ ಸುಮಾರು 7 ಕೋ. ರೂ. ವೆಚ್ಚ ಅಂದಾಜಿಸಲಾಗಿದೆ.
· ನಬಾರ್ಡ್ ಯೋಜನೆಯಡಿ ಪ್ರವಾಸೋದ್ಯಮದಲ್ಲಿ ಪ್ರಸ್ತಾವನೆ
· ನಂದಾವರದಿಂದ ಪಾಣೆಮಂಗಳೂರಿಗೆ 1.50 ಕಿ.ಮೀ. ದೂರದ ರಸ್ತೆ
· 60 ಮೀ. ಉದ್ದ, 3.75 ಮೀ. ಅಗಲದ ದ್ವಿಪಥ ಸೇತುವೆ
· ರಸ್ತೆ ಇಕ್ಕೆಲಗಳಲ್ಲಿ ಸುರಕ್ಷಾ ಗರ್ಡರ್
· ರಸ್ತೆಯ ಉದ್ದಕ್ಕೆ ಆಲಂಕಾರಿಕ ದೀಪಗಳು
· ನೆರಳು ನೀಡುವ ಆಲಂಕಾರಿಕ ಗಿಡಗಳು, ನೆಡುತೋಪು ಇತ್ಯಾದಿಗಳು.
Related Articles
· ರಾಜ್ಯ ಮತ್ತು ಅನ್ಯರಾಜ್ಯಗಳ ಪ್ರವಾಸಿಗರಿಗೆ ರಾ.ಹೆ.ಯಿಂದ ನೇತ್ರಾವತಿ ನದಿಯ ಬದಿಯಲ್ಲಿ ನೇರವಾಗಿ ಕ್ಷೇತ್ರ ಸಂದರ್ಶನಕ್ಕೆ ಅನುಕೂಲ.
· ನದಿ ಪಾತ್ರದಲ್ಲಿ ಯೋಜನೆ ಸಿದ್ಧ ಆಗುವುದರಿಂದ ಬೇಸಗೆಯಲ್ಲಿ ತುಂಬೆ ಡ್ಯಾಂನಲ್ಲಿ ತುಂಬುವ ತಿಳಿನೀರು, ಮಳೆಗಾಲದಲ್ಲಿ ಬೀಸು ಗಾಳಿ, ರಮಣೀಯ ನೀರಿನ ಹರಿವು ದ್ರಶ್ಯಗಳು ನೋಡಲು ಸಾಧ್ಯವಾಗುವುದು.
· ರಸ್ತೆ ನಿರ್ಮಾಣದಿಂದ ಮೂರು ದೇಗುಲಗಳಿಗೆ ಪ್ರವಾಸಿಗರು ಬರುವುದರಿಂದ ವ್ಯಾಪಾರಕ್ಕೆ ಪೂರಕ ವಾತಾವರಣ ಸೃಷ್ಟಿ ಆಗುವುದು.
Advertisement
ಸಚಿವರಲ್ಲಿ ಚರ್ಚಿಸಲಾಗಿದೆನದಿ ಪಾತ್ರದಲ್ಲಿ ಪಾಣೆಮಂಗಳೂರಿನಿಂದ ನೇರವಾಗಿ ಶ್ರೀಕ್ಷೇತ್ರ ನಂದಾವರ ಸಂಪರ್ಕದ ಕೂಡು ರಸ್ತೆ ಮತ್ತು ಸೇತುವೆ ನಿರ್ಮಾಣಕ್ಕೆ 2018ರ ಡಿ. 26ರಂದು ಪ್ರಸ್ತಾವನೆ ಸಲ್ಲಿಸಲಾಗಿದೆ. ಪ್ರವಾಸೋದ್ಯಮ ಇಲಾಖೆಯ ಮೂಲಕ ಅನುದಾನ ಒದಗಿಸಲು ಯೋಜನೆ ರೂಪಿಸಲಾಗಿದೆ. ಲೊಕೋಪಯೋಗಿ ಇಲಾಖೆ ಪ್ರಸ್ತಾವನೆ ಸಿದ್ಧಪಡಿಸಿದ್ದು, ಸರಕಾರಕ್ಕೆ ಸಲ್ಲಿಸಲಾಗಿದೆ. ಅದಕ್ಕೆ ಆರ್ಥಿಕ ಸಂಪನ್ಮೂಲ ಒದಗಿಸುವ ಬಗ್ಗೆ ಸಂಬಂಧಪಟ್ಟ ಸಚಿವರಲ್ಲಿ ಚರ್ಚಿಸಲಾಗಿದೆ.
– ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಶಾಸಕರು, ಬಂಟ್ವಾಳ ವಿಧಾನಸಭಾ ಕ್ಷೇತ್ರ ಭಕ್ತರಿಗೆ ಅನುಕೂಲ
ಸುದೀರ್ಘ ಅವಧಿಯಿಂದ ನೇತ್ರಾವತಿ ನದಿಯ ಬದಿಯಲ್ಲಿ ಪಾಣೆಮಂಗಳೂರು ತನಕದ ರಸ್ತೆ ಸೇತುವೆ ನಿರ್ಮಾಣದ ಅಪೇಕ್ಷೆ ನಮ್ಮಲ್ಲಿತ್ತು. ಯೋಜನೆ ಅನುಷ್ಠಾನ ಬಳಿಕ ಸಂಪರ್ಕ ಸುಲಭ ಹಾಗೂ ಹತ್ತಿರ ಆಗಲಿದೆ. ದೂರದ ಪ್ರದೇಶಗಳ ಭಕ್ತರಿಗೆ ಬರಲು ಅನುಕೂಲ ಆಗಲಿದೆ. ಮೂರು ಕ್ಷೇತ್ರಗಳನ್ನು ಏಕಮುಖವಾಗಿ ಸಂದರ್ಶಿಸುವುದಕ್ಕೆ ಅವಕಾಶ ಆಗುವುದು.
– ಎ. ಸಿ. ಭಂಡಾರಿ, ಅಧ್ಯಕ್ಷರು, ವ್ಯವಸ್ಥಾಪನ ಸಮಿತಿ,
ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರ - ರಾಜಾ ಬಂಟ್ವಾಳ