Advertisement

ನಂದನೇಶ್ವರ ಯಕ್ಷಗಾನ ಮಿತ್ರಮಂಡಳಿ ವಜ್ರಮಹೋತ್ಸವ

06:00 AM Aug 17, 2018 | Team Udayavani |

ಆರ್ಥಿಕ ಕೊರತೆಯಿಂದ ಶಿಥಿಲವಾಗಿ ಮರೆಯಾದ ಪಣಂಬೂರು ಮೇಳ ದಿ| ಶ್ಯಾನುಭೋಗ್‌ ಪದ್ಮನಾಭಯ್ಯನವರ ಉತ್ಸಾಹದಿಂದ ಶ್ರೀ ನಂದನೇಶ್ವರ ಯಕ್ಷಗಾನ ಮಿತ್ರ ಮಂಡಳಿಯಾಗಿ ಬೆಳೆಯಿತು. ಸರ್ವಾಂಗೀಣ ಕಲಾವಿದ ದಿ| ವೆಂಕಟ್ರಾಯ ಐತಾಳರ ಕೊಡುಗೆಯೂ ಉಲ್ಲೇಖನೀಯ.

Advertisement

2017-18ಕ್ಕೆ ಮಂಡಳಿಗೆ ವಜ್ರಮಹೋತ್ಸವದ ಸಂಭ್ರಮ. ವರುಷವಿಡೀ ಸರಣಿ ಕಾರ್ಯಕ್ರಮಗಳನ್ನು ಆಯೋಜಿಸಿ ತಾಳ ಮದ್ದಳೆ ಮತ್ತು ಬಯಲಾಟಗಳನ್ನು ಮಾಡಿ, ಮಂಡಳಿಯಲ್ಲಿ ಸೇವೆಗೈದ ಹಿರಿಯ ಸುಮಾರು 40 ಕಲಾವಿದರನ್ನು ಗೌರವಿಸಲಾಗಿದೆ. ಅಂತೆಯೇ ಸುಮಾರು ಇಪ್ಪತ್ತು ಕಲಾವಿದರ ಮನೆಯವರನ್ನು ಗೌರವಿಸಲಾಗಿದೆ. ವಿವಿಧೆಡೆ ಕಾರ್ಯಕ್ರಮ ಗಳನ್ನು ಸಂಘಟಿಸಲಾಗಿದೆ. ಮೇ 31ರಂದು ಜೂ. 2 ಮತ್ತು 3ರಂದು ವಜ್ರಮಹೋತ್ಸವದ ಸಮಾರೋಪ ಸಮಾರಂಭ ಶ್ರೀ ನಂದನೇಶ್ವರ ದೇವಳದಲ್ಲಿ ಜರಗಿತು. ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಅಂಬಾ ಗಮನ- ಗಂಗಾಗಮನ ಆಖ್ಯಾನದ ಕೂಟ ಜರಗಿತು. ದ್ವಿತೀಯ ದಿನ ಪಣಂಬೂರು ಮಕ್ಕಳ ಮೇಳದವರಿಂದ “ತರಣಿಸೇನ’ ಬಯಲಾಟ ಮತ್ತು ಮಿತ್ರಮಂಡಳಿಯ ಕಲಾವಿದರಿಂದ “ನರಕಾಸುರ ಮೋಕ್ಷ – ದಾಶರಥಿ ದರ್ಶನ’ ಬಯಲಾಟ ಜರಗಿತು. ತೃತೀಯ ದಿನ ಅಭಿಮನ್ಯು ಕಾಳಗ , ಸೈಂಧವ ವಧೆ, ಘಟೋತ್ಕಚ ವಧೆ ಬಯಲಾಟವು ಸುಮಾರು 45 ಪ್ರಸಿದ್ಧ ಕಲಾವಿದರಿಂದ ಜರಗಿತು. 

 ಪಿ. ಮಧುಕರ ಭಾಗವತ್‌

Advertisement

Udayavani is now on Telegram. Click here to join our channel and stay updated with the latest news.

Next