Advertisement
ನಂದಳಿಕೆ, ಸೂಡ ಗ್ರಾಮದ ಸುತ್ತಮುತ್ತಲಿನಲ್ಲಿ ಅನಧಿಕೃತ ಕಲ್ಲು ಕೋರೆಗಳಲ್ಲಿ ಹಗಲು ರಾತ್ರಿಯೆನ್ನದೆ ನಿತ್ಯ ಗಣಿಗಾರಿಕೆ ನಡೆಯುತ್ತಿದ್ದು ಇಲ್ಲಿಂದ ಭಾರೀ ಗಾತ್ರದ ಕಲ್ಲಿನ ಲೋಡು ತುಂಬಿದ ಲಾರಿ, ಟಿಪ್ಪರ್‌ಗಳು ಕಾಮಗಾರಿ ಹಂತದಲ್ಲಿರುವ ಗೋಳಿಕಟ್ಟೆ ರಸ್ತೆಯಲ್ಲಿ ಸಂಚರಿಸುತ್ತಿವೆ. ನಿತ್ಯ ಸುಮಾರು 300ಕ್ಕೂ ಅಧಿಕ ಬƒಹತ್ ಗಾತ್ರದ ಟಿಪ್ಪರ್‌ಗಳು ಇಲ್ಲಿ ಸಂಚರಿಸುತ್ತಿವೆ. ಒಂದೆಡೆಧೂಳಿನ ಸಮಸ್ಯೆ, ಮತ್ತೂಂದೆಡೆ ಜಲ್ಲಿ, ಕಲ್ಲುಗಳು ರಸ್ತೆಗೆ ಬೀಳುವುದರಿಂದ ವಾಹನ ಸವಾರರಿಗೆ ಅಡಚಣೆಯಾಗಿದೆ.
ಇಲ್ಲಿನ ಗೋಳಿಕಟ್ಟೆ ಕೊಪ್ಪಳ ರಸ್ತೆ “ನಮ್ಮ ಗ್ರಾಮ ನಮ್ಮ ರಸ್ತೆ’ ಯೋಜನೆಯಡಿಯಲ್ಲಿ ಸಂಪೂರ್ಣ ಕಾಂಕ್ರೀಟ್ ರಸ್ತೆ ನಿರ್ಮಾಣ ಹಂತದಲ್ಲಿದೆ. ಸುಮಾರು ಶೇ. 75ರಷ್ಟು ಕಾಮಗಾರಿ ಮಾತ್ರ ಪೂರ್ಣಗೊಂಡಿದ್ದು ಕ್ಯೂರಿಂಗ್ ನಡೆಯುವ ಮುನ್ನವೇ ಈ ರಸ್ತೆಯಲ್ಲೇ ನಿತ್ಯ ಘನ ವಾಹನ ಸಂಚರಿಸುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂಬುದು ಸ್ಥಳೀಯರ ಆರೋಪ.ಅಧಿಕಾರಿಗಳ ಮೌನ ನಂದಳಿಕೆ, ಸೂಡ ಗ್ರಾಮದಲ್ಲಿ ಅನೇಕ ಅಕ್ರಮ ಗಣಿಗಾರಿಕೆಗಳು ನಡೆಯುತ್ತಿದ್ದು 1-2 ಎಕರೆಗೆ ಪರವಾನಿಗೆ ಪಡೆದು ಸುಮಾರು 5-6 ಎಕರೆ ಜಾಗದಲ್ಲಿ ಅಕ್ರಮ
ವಾಗಿ ಕೆಲವೊಂದು ಕೋರೆಗಳಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಅಲ್ಲದೆ ಬೆಳಗ್ಗೆ ಹಾಗೂ ಮಧ್ಯಾಹ್ನದ ವೇಳೆ ಇಲ್ಲಿ ಸ್ಫೋಟಕ ಬಳಸಿ ಬಂಡೆಗಳನ್ನು ಅಪಾಯಕಾರಿಯಾಗಿ ನ್ಪೋಟಿಸುತ್ತಿದ್ದಾರೆ ಎಂದು ಸ್ಥಳೀಯರ ಆರೋಪಿಸಿದ್ದಾರೆ. ಪ್ರತಿಭಟನೆಗೆ ನಿರ್ಧಾರ
ಈಗಾಗಲೇ ಸ್ಥಳೀಯಾಡಳಿತಕ್ಕೆ ಮೌಖೀಕ, ಲಿಖೀತವಾಗಿಯೂ ದೂರು ನೀಡಿದ್ದು ಜಿಲ್ಲಾಧಿಕಾರಿಗಳಿಗೂ ಗ್ರಾ.ಪಂ. ಮೂಲಕ ದೂರು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಕಾನೂನು ರೀತಿಯಲ್ಲಿ ಹೋರಾಟ ನಡೆಸಲಾಗು ವುದು ಎಂದು ಇಲ್ಲಿನ ಸಾಮಾಜಿಕ ಹೋರಾಟಗಾರರು ತಿಳಿಸಿದ್ದಾರೆ.
Related Articles
ಈ ಬಗ್ಗೆ ಜಿಲ್ಲಾಧಿಕಾರಿಯವರಿಗೂ ಪತ್ರ ಬರೆಯಲಾಗಿದೆ. ಮುಂದಿನ ಜಿಲ್ಲಾಧಿಕಾರಿಗಳ ಆದೇಶದ ನಿರೀಕ್ಷೆ ಯಲ್ಲಿದ್ದೇವೆ. -ಸಂದೇಶ, ಗ್ರಾಮಸ್ಥರು.
Advertisement
ಅನಾಹುತ ತಪ್ಪಿಸಿಈ ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಆದರೆ ಅದೇ ರಸ್ತೆಯಲ್ಲಿ ಸಾಲಾಗಿ ಬೃಹತ್ ಘನ ವಾಹನ ಸಂಚರಿಸುತ್ತಿದೆ. ಸಂಬಂಧಪಟ್ಟವರ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು
-ನಿತ್ಯಾನಂದ ಅಮೀನ್, ನಂದಳಿಕೆ, ಗ್ರಾ.ಪಂ. ಅಧ್ಯಕ್ಷ