Advertisement

ನಂದಗೋಕುಲ ಲೋಕಾರ್ಪಣೆ

11:36 PM May 24, 2019 | Sriram |

ಮಂಗಳೂರು: ನಿರ್ಮಾಣ್‌ ಹೋಮ್ಸ್‌ ಹಾಗೂ ಕೋಸ್ಟಲ್‌ ಕರ್ನಾಟಕ ಡೆವಲಪರ್ ಸಂಸ್ಥೆಯ ಸಹಯೋಗದಲ್ಲಿ ಬಿಜೈ ಕಾಪಿಕಾಡ್‌ನ‌ಲ್ಲಿ ನಿರ್ಮಾಣವಾಗಿರುವ ಬಹು ನಿರೀಕ್ಷಿತ 67 ಮನೆಗಳಿರುವ ನಂದಗೋಕುಲ ವಸತಿ ಸಮುಚ್ಚಯ ಶುಕ್ರವಾರ ಲೋಕಾರ್ಪಣೆಗೊಂಡಿತು.

Advertisement

ಈ ಸಂದರ್ಭ ಪಶ್ಚಿಮ ವಲಯ ಐಜಿಪಿ ಅರುಣ್‌ ಚಕ್ರವರ್ತಿ ಅವರು ಮಾತನಾಡಿ, ಒಬ್ಬ ವ್ಯಕ್ತಿಗೆ ಆಹಾರ, ಬಟ್ಟೆ, ವಸತಿ ಬಹಳ ಮುಖ್ಯವಾದುದು. ಅದಕ್ಕಾಗಿಯೇ ಜೀವನ ಪೂರ್ತಿ ದುಡಿಯುತ್ತಾರೆ. ಕಷ್ಟ ಪಟ್ಟು ಮಾಡಿದ ಸ್ವಂತ ಮನೆಯಲ್ಲಿ ಇರುವ ಖುಷಿ ದುಬಾರಿ ಬೆಲೆ ತೆತ್ತು ಬದುಕುವ ಬಾಡಿಗೆ ಮನೆಯಲ್ಲೂ ಸಿಗಲಾರದು. ಎಲ್ಲರ ಕನಸನ್ನು ನನಸು ಮಾಡುವ ಹೊಣೆ ಹೊತ್ತಿರುವ ನಿರ್ಮಾಣ್‌ ಹೋಮ್ಸ್‌ ಉತ್ತಮ ವಸತಿ ಸಮುಚ್ಚಯಗಳನ್ನು ಗ್ರಾಹಕರಿಗೆ ನೀಡುತ್ತಿದೆ. ಇದೀಗ ನಂದಗೋಕುಲ ವಸತಿ ಸಮುಚ್ಚಯವನ್ನು ಕೈಗೆಟಕುವ ದರದಲ್ಲಿ ನೀಡಿದೆ ಎಂದರು.

ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್‌ ಮಾತನಾಡಿ, ಉತ್ತಮ ಸೌಲಭ್ಯದೊಂದಿಗೆ ಕೈಗೆಟಕುವ ದರದಲ್ಲಿ ಶಿಸ್ತುಬದ್ಧವಾಗಿ ಅನೇಕ ಯೋಜನೆಗಳನ್ನು ಪೂರ್ಣಗೊಳಿಸಿದ ನಿರ್ಮಾಣ ಹೋಮ್ಸ್‌ ಇದೀಗ ನಂದಗೋಕುಲ ವಸತಿ ಸಮುಚ್ಚಯವನ್ನು ಗ್ರಾಹಕರ ಮುಂದಿಟ್ಟಿದೆ. ಇನ್ನೂ ಅನೇಕ ಉತ್ತಮ ಯೋಜನೆಗಳನ್ನು ಗ್ರಾಹಕರಿಗೆ ನೀಡಲಿ ಎಂದು ಶುಭ ಹಾರೈಸಿದರು.

ಎಂಜಿನಿಯರ್‌ ಸುರೇಶ್‌ ಪೈ, ಮಾಜಿ ಕಾರ್ಪೊರೇಟರ್‌ ಲ್ಯಾನ್ಸಿ ಲ್ಯಾಟ್‌ ಪಿಂಟೋ, ಮಹೇಶ್‌ ವರ್ಮಾ, ಬಿ.ಆರ್‌. ಇನಾಬಿಲ್ಡರ್ ಪಾಲುದಾರ
ರಾದ ಭಾಸ್ಕರ್‌ ಗಡಿಯಾರ್‌, ನಿರ್ಮಾಣ್‌ ಹೋಮ್ಸ್‌ ಆಡಳಿತ ನಿರ್ದೇಶಕ ಗುರುದತ್‌ ಶೆಣೈ ಉಪಸ್ಥಿತರಿದ್ದರು. ಕೃಷ್ಣ ಮಯ್ಯ ಸ್ವಾಗತಿಸಿದರು. ಸೌಜನ್ಯಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next