Advertisement
“ಮುಖಪುಟ’, “ಚಂದ್ರ’ ಹಾಗೂ “ಕಲರ್’ನಂತಹ ಸಿನಿಮಾ ಮಾಡಿದ್ದ ರೂಪಾ ಅಯ್ಯರ್ ಈಗ ನರೇಂದ್ರ ಮೋದಿಯವರ ಕುರಿತು ಸಿನಿಮಾ ಮಾಡಲು ಕಾರಣವೇನು ಎಂದು ನೀವು ಕೇಳಬಹುದು. ಅದಕ್ಕೆ ಕಾರಣ ನರೇಂದ್ರ ಮೋದಿಯವರ ನಾಯಕತ್ವ ಗುಣವಂತೆ. “ಗಾಂಧೀಜಿ ನಂತರ ನನ್ನನ್ನು ತುಂಬಾ ಪ್ರೇರೇಪಿಸಿದ ನಾಯಕ ಎಂದರೆ ಮೋದಿ. ಅವರ ನಾಯಕತ್ವ ಗುಣ ನನಗೆ ಇಷ್ಟ. ಇಡೀ ವಿಶ್ವವೇ ತಿರುಗಿ ನೋಡುವಂತಹ ವ್ಯಕ್ತಿಯಾಗಿ ಬೆಳೆದ ಮೋದಿಯವರ ಹಿಂದೆ ಸಾಕಷ್ಟು ಕುತೂಹಲಕಾರಿ ಅಂಶಗಳಿವೆ. ಅವೆಲ್ಲವನ್ನಿಟ್ಟುಕೊಂಡು ಈ ಸಿನಿಮಾ ಮಾಡುತ್ತಿದ್ದೇವೆ. ಇದು ಆಧ್ಯಾತ್ಮ ಹಿನ್ನೆಲೆಯಲ್ಲಿ ಸಾಗುತ್ತದೆ’ ಎಂದು ಚಿತ್ರದಬಗ್ಗೆ ವಿವರ ಕೊಟ್ಟರು ರೂಪಾ. ಮೋದಿಯವರ ಗುರುಗಳು, ಅವರ ತಾಯಿ, ಮೋದಿಯವರೊಂದಿಗೆ ಹೆಚ್ಚು ಒಡನಾಟ ಇಟ್ಟುಕೊಂಡಿದ್ದವರನ್ನು ಕೂಡಾ ಮಾತನಾಡಿಸಿ, ಮಾಹಿತಿ ಪಡೆಯುತ್ತಿದ್ದಾರಂತೆ.
ಎನ್ನುತ್ತಿರುವ ಹೊತ್ತಿಗೆ ಮೋದಿಯವರು ಅಪನಗದೀಕರಣ, ಸ್ವಚ್ಛ ಭಾರತದಂತಹ ಅದ್ಭುತ ಕಾರ್ಯಗಳನ್ನು ಮಾಡುತ್ತಿದ್ದಾರೆ. ಅವರ ಸ್ವತ್ಛ ಭಾರತ ಅನೇಕರಿಗೆ ಪ್ರೇರಣೆ. ನಾನು ಕೂಡಾ ಅದರಿಂದ ಪ್ರೇರಣೆಯಾಗಿ ಕಲ್ಯಾಣಿ ಯೊಂದನ್ನು ಸ್ವಚ್ಛ ಗೊಳಿಸಿದ್ದೇನೆ. ಹೀಗೆ
ಮೋದಿ ಅವರ ಬಗ್ಗೆ ಸಾಕಷ್ಟು ವಿಷಯಗಳಿವೆ. ಹಾಗಂತ ಅವರು ಮಾಡಿದ ಕಾರ್ಯಗಳನ್ನು ಇಟ್ಟುಕೊಂಡು ಮಾಡಿದರೆ ಅದು ಡಾಕ್ಯುಮೆಂಟರಿಯಾಗುತ್ತದೆ. ಹಾಗಾಗಿ, ಸಿನಿಮೇಟಿಕ್ ಅಂಶಗಳನ್ನು ಸ್ಕ್ರಿಪ್ಟ್ನಲ್ಲಿ ಸೇರಿಸುತ್ತೇನೆ’ ಎಂದು “ನಮೋ’ ಬಗ್ಗೆ ಹೇಳಿದರು. ಸ್ಕ್ರಿಪ್ಟ್ನಲ್ಲಿ ನಿರ್ದೇಶಕ ಸುನೀಲ್ ಪುರಾಣಿಕ್ ಕೂಡಾ ಕೈ ಜೋಡಿಸುತ್ತಿದ್ದಾರೆ. ಡಾ.ಜಯಲಕ್ಷ್ಮೀ ನರೇಂದ್ರ ಮೋದಿಯವರ ಕುರಿತ ಆಧ್ಯಾತ್ಮಿಕ ಅಂಶಗಳನ್ನು ಸೇರಿಸಲಿದ್ದಾರಂತೆ. ಚಿತ್ರವನ್ನು ಅಮೆರಿಕಾದಲ್ಲಿರುವ ಗಾಯತ್ರಿ ರವಿ ನಿರ್ಮಿ ಸುತ್ತಿದ್ದಾರೆ. “ರೂಪಾ
ಅಯ್ಯರ್ ಅವ ರನ್ನು ನಾವು ಮಗಳೆಂದು ಸ್ವೀಕರಿಸಿದ್ದೇವೆ. ಆಕೆ ರಾಜಕೀ ಯಕ್ಕೆ ಬಂದರೆ ಪ್ರಧಾನಿ ಯಾಗಿ ಬೆಳೆ ಯುವ ಶಕ್ತಿ
ಆಕೆಗಿದೆ. ಈಗ ಆಕೆ ಸಿನಿಮಾ ಮಾಡುತ್ತಿದ್ದು, ನಮ್ಮ ಸಂಪೂರ್ಣ ಬೆಂಬಲವಿದೆ’ ಎಂದರು. ಚಿತ್ರಕ್ಕೆ ಗೌತಮ್ ಶ್ರೀವತ್ಸ ಸಂಗೀತವಿದೆ.