Advertisement

24 ಗಂಟೆ ಅವಧಿಯಲ್ಲಿ ನಿರ್ಮಾಣವಾದ ‘ನಮೋ ಗಾಂಧಿ’ಕಿರುಚಿತ್ರ

03:46 PM Oct 08, 2021 | Team Udayavani |

75ನೇ ಸ್ವಾತಂತ್ರೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ, ಮಹಾತ್ಮ ಗಾಂಧೀಜಿಯವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ “ನಮೋ ಗಾಂಧಿ’ ಎಂಬ ಹೆಸರಿನ ವಿಭಿನ್ನ ಪ್ರಯತ್ನದ ಕಿರುಚಿತ್ರ ನಿರ್ಮಾಣವಾಗಿದೆ.

Advertisement

ಸುಮಾರು ಮೂರು ದಶಕಗಳಿಂದ ರಂಗಭೂಮಿಯಲ್ಲಿ ಸುಮಾರು 3000ಕ್ಕೂ ಹೆಚ್ಚು ಬೀದಿ ನಾಟಕಗಳನ್ನು ರಚಿಸಿ, ನಿರ್ದೇಶಿಸಿರುವ, ನಾಟಕ ಕ್ಷೇತ್ರದಲ್ಲೇ ಸುಮಾರು ಹದಿನೈದು ವಿಶ್ವದಾಖಲೆ ನಿರ್ಮಿಸಿರುವ ಎಸ್‌.ಎಲ್‌.ಎನ್‌ ಸ್ವಾಮಿ ನಿರ್ದೇಶನದಲ್ಲಿ “ನಮೋ ಗಾಂಧಿ’ ಕಿರುಚಿತ್ರ ಮೂಡಿಬಂದಿದೆ.

ಇದನ್ನೂ ಓದಿ:“ಸಲಗ” ಪ್ರಿ-ರಿಲೀಸ್ ಕಾರ್ಯಕ್ರಮಕ್ಕೆ ಬರಲಿದ್ದಾರೆ ಐವರು ನಾಯಕರು

ಇನ್ನೊಂದು ವಿಶೇಷವೆಂದರೆ, ಕೇವಲ 24 ಗಂಟೆಗಳಲ್ಲಿ ಈ ಕಿರುಚಿತ್ರ ನಿರ್ಮಾವಾಗಿದೆ. ಗಾಂಧೀಜಿಯವರ ತತ್ವಗಳಿಂದ ಪ್ರೇರೇಪಿತಳಾದ ಬಾಲಕಿಯೊಬ್ಬಳು, ತಾನು ಕಂಡ ಅನ್ಯಾಯ, ಅಕ್ರಮಗಳನ್ನು ಗಾಂಧಿ ಪಾತ್ರದ ಪ್ರಭಾವದ ಹಿನ್ನೆಲೆಯಲ್ಲಿ ಹೇಗೆ ಬದಲಿಸುತ್ತಾಳೆ ಎಂಬುದೇ ಕಿರುಚಿತ್ರದ ಕಥಾವಸ್ತು.

ಬಾಲ ಪ್ರತಿಭೆ ಸಾಕ್ಷಿ, ಶ್ವೇತಾ ಶ್ರೀನಿವಾಸ್‌, ಟೈಗರ್‌ ಗಂಗ, ಸಿಂಹಾದ್ರಿ ಮೊದಲಾದವರು ಈ ಕಿರುಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next