Advertisement
ನಿರ್ದೇಶಕ ರಮೇಶ್ ಎಸ್. ಪರವಿನಾಯ್ಕರ್ ಮಾತನಾಡಿ, “ನಾನು ಕೆಳದಿ ಚೆನ್ನಮ್ಮನ ವಂಶಸ್ಥ. 2015ರಲ್ಲಿ “ಗಾಂಧಿ ಕನಸು’ ಎಂಬ ಚಿತ್ರ ಮಾಡಿದ್ದೆ. ಬಡ ರೈತನೊಬ್ಬನ ಮಗ ಸೈನ್ಯಕ್ಕೆ ಸೇರಿಕೊಂಡಾಗ ದೇಶದ ಗಡಿ ಭಾಗದಲ್ಲಿ ಆತ ಅನುಭವಿಸುವ ಒಂದಷ್ಟು ಸಮಸ್ಯೆಗಳು, ಅಲ್ಲಿ ನಡೆದ ಕಾಶ್ಮೀರಿ ಪಂಡಿತರ ಮಾರಣಹೋಮ, ಆತನಿಗಾದ ಭಯೋತ್ಪಾದನೆಯ ಅನುಭವಗಳನ್ನು ಚಿತ್ರದಲ್ಲಿ ಹೇಳಲಾಗಿದೆ. ಈ ಮಧ್ಯೆ, ಆ ಸೈನಿಕನಿಗೆ ಕಾಡುವ ತನ್ನ ತಂದೆ-ತಾಯಿಯ ನೆನಪುಗಳು, ಜೊತೆಗೆ ಊರಲ್ಲಿ ತಾನು ಪ್ರೀತಿಸಿದ ಹುಡುಗಿಯ ನೆನಪು ಇವೆಲ್ಲವೂ ಈ ಚಿತ್ರದಲ್ಲಿದೆ’ ಎಂದರು.
Related Articles
Advertisement
“ನಮೋ ಭಾರತ್’ ಚಿತ್ರಕ್ಕೆ ಎ.ಟಿ. ರವೀಶ್ ಸಂಗೀತ, ಡಾ. ದೊಡ್ಡರಂಗೇಗೌಡ, ಡಾ.ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ, ವೀರೇಶ್ ಎಸ್.ಟಿ.ವಿ. ಹಾಗೂ ಗೌರಿ ವೆಂಕಟೇಶ್ ಛಾಯಾಗ್ರಹಣ, ರುದ್ರೇಶ್ ನಾಗಸಂದ್ರ ಸಂಭಾಷಣೆ, ಹೈಟ್ ಮಂಜು, ನಾಗೇಶ್ ಅವರ ನೃತ್ಯ ನಿರ್ದೇಶನವಿದೆ. ತಾರಗಣದಲ್ಲಿ ರಮೇಶ್ ಪರವಿನಾಯ್ಕರ್, ಸೋನಾಲಿ ಪಂಡಿತ್, ಸುಷ್ಮಾ ರಾಜ್, ಭವ್ಯ, ಮೈಕೋ ನಾಗರಾಜ್, ಬಿರಾದಾರ್, ಶಂಕರ್ ಭಟ್ ನಟಿಸಿದ್ದಾರೆ.