Advertisement

Sandalwood: ಸೈನಿಕನ ಸುತ್ತ ನಮೋ ಭಾರತ್‌

05:58 PM Feb 28, 2024 | Team Udayavani |

“ನಮೋ ಭಾರತ್‌’ ಸಿನಿಮಾದ ಟೀಸರ್‌ ಹಾಗೂ ಹಾಡುಗಳು ಇತ್ತೀಚೆಗೆ ಬಿಡುಗಡೆಯಾಗಿವೆ. ರಮೇಶ್‌ ಎಸ್‌. ಪರವಿನಾಯ್ಕರ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿ, ನಿರ್ಮಿಸಿ, ನಾಯಕನಾಗಿಯೂ ನಟಿಸಿದ್ದಾರೆ.

Advertisement

ನಿರ್ದೇಶಕ ರಮೇಶ್‌ ಎಸ್‌. ಪರವಿನಾಯ್ಕರ್‌ ಮಾತನಾಡಿ, “ನಾನು ಕೆಳದಿ ಚೆನ್ನಮ್ಮನ ವಂಶಸ್ಥ. 2015ರಲ್ಲಿ “ಗಾಂಧಿ ಕನಸು’ ಎಂಬ ಚಿತ್ರ ಮಾಡಿದ್ದೆ. ಬಡ ರೈತನೊಬ್ಬನ ಮಗ ಸೈನ್ಯಕ್ಕೆ ಸೇರಿಕೊಂಡಾಗ ದೇಶದ ಗಡಿ ಭಾಗದಲ್ಲಿ ಆತ ಅನುಭವಿಸುವ ಒಂದಷ್ಟು ಸಮಸ್ಯೆಗಳು, ಅಲ್ಲಿ ನಡೆದ ಕಾಶ್ಮೀರಿ ಪಂಡಿತರ ಮಾರಣಹೋಮ, ಆತನಿಗಾದ ಭಯೋತ್ಪಾದನೆಯ ಅನುಭವಗಳನ್ನು ಚಿತ್ರದಲ್ಲಿ ಹೇಳಲಾಗಿದೆ. ಈ ಮಧ್ಯೆ, ಆ ಸೈನಿಕನಿಗೆ ಕಾಡುವ ತನ್ನ ತಂದೆ-ತಾಯಿಯ ನೆನಪುಗಳು, ಜೊತೆಗೆ ಊರಲ್ಲಿ ತಾನು ಪ್ರೀತಿಸಿದ ಹುಡುಗಿಯ ನೆನಪು ಇವೆಲ್ಲವೂ ಈ ಚಿತ್ರದಲ್ಲಿದೆ’ ಎಂದರು.

ಕಾಶ್ಮೀರದಲ್ಲಿ ಚಿತ್ರೀಕರಣ ಮಾಡಿದ ಅನುಭವ ಹಂಚಿಕೊಂಡ ಅವರು, “ಅಲ್ಲಿ 48 ದಿನ ಚಿತ್ರೀಕರಣ ನಡೆಸಿದ್ದೇವೆ. ಕೊರೆವ ಚಳಿಯ ನಡುವೆ ಶೂಟಿಂಗ್‌ ನಿಜಕ್ಕೂ ಕಷ್ಟವಾಗಿತ್ತು. ಅಲ್ಲದೆ ಕೊಪ್ಪಳ, ಅಂಜನಾದ್ರಿ ಬೆಟ್ಟದಲ್ಲೂ ಚಿತ್ರೀಕರಣ ಮಾಡಿದ್ದೇವೆ, ಮಾರ್ಚ್‌ 1ಕ್ಕೆ ಸಿನಿಮಾ ರಿಲೀಸ್‌ ಆಗುತ್ತಿದೆ’ ಎಂದರು.

ಇಬ್ಬರು ನಾಯಕಿಯರೊಬ್ಬರಾದ ಸುಷ್ಮಾರಾಜ್‌ ಮಾತನಾಡಿ, ಹಳ್ಳಿಯಲ್ಲಿ ನಾಯಕನನ್ನು ಪ್ರೀತಿಸುವ ಹುಡುಗಿಯ ಪಾತ್ರ ನನ್ನದು ಎಂದರು.

ಹಿರಿಯ ನಟಿ ಭವ್ಯ ಕೂಡಾ ಚಿತ್ರದಲ್ಲಿ ನಟಿಸಿದ್ದಾರೆ. ಮಗನಲ್ಲಿ ಚಿಕ್ಕಂದಿನಿಂದಲೇ ದೇಶ ಪ್ರೇಮವನ್ನು ಬೆಳೆಸುವ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ. ಶಂಕರ್‌ ಪಾಗೋಜಿ, ಸಹ ನಿರ್ದೇಶಕ ರಾಜರತ್ನ, ಛಾಯಾಗ್ರಾಹಕ ಎಸ್‌ ಟಿವಿ ವೀರೇಶ್‌, ವಿತರಕ ವೆಂಕಟ್‌ ಗೌಡ ಮತ್ತಿತರು ಚಿತ್ರದ ಕುರಿತು ಮಾಹಿತಿ ಹಂಚಿಕೊಂಡರು.

Advertisement

“ನಮೋ ಭಾರತ್‌’ ಚಿತ್ರಕ್ಕೆ ಎ.ಟಿ. ರವೀಶ್‌ ಸಂಗೀತ, ಡಾ. ದೊಡ್ಡರಂಗೇಗೌಡ, ಡಾ.ವಿ. ನಾಗೇಂದ್ರ ಪ್ರಸಾದ್‌ ಸಾಹಿತ್ಯ, ವೀರೇಶ್‌ ಎಸ್‌.ಟಿ.ವಿ. ಹಾಗೂ ಗೌರಿ ವೆಂಕಟೇಶ್‌ ಛಾಯಾಗ್ರಹಣ, ರುದ್ರೇಶ್‌ ನಾಗಸಂದ್ರ ಸಂಭಾಷಣೆ, ಹೈಟ್‌ ಮಂಜು, ನಾಗೇಶ್‌ ಅವರ ನೃತ್ಯ ನಿರ್ದೇಶನವಿದೆ. ತಾರಗಣದಲ್ಲಿ ರಮೇಶ್‌ ಪರವಿನಾಯ್ಕರ್‌, ಸೋನಾಲಿ ಪಂಡಿತ್‌, ಸುಷ್ಮಾ ರಾಜ್, ಭವ್ಯ, ಮೈಕೋ ನಾಗರಾಜ್, ಬಿರಾದಾರ್‌, ಶಂಕರ್‌ ಭಟ್‌ ನಟಿಸಿದ್ದಾರೆ. ‌

 

Advertisement

Udayavani is now on Telegram. Click here to join our channel and stay updated with the latest news.

Next