Advertisement

ಫೆ. 11, 12: ಸ್ಥಳೀಯ ಉದ್ಯಮಗಳ ನಮ್ಮ ಸಂತೆ

09:29 PM Feb 09, 2023 | Team Udayavani |

ಮಣಿಪಾಲ:  ಸ್ಥಳೀಯವಾಗಿ ಉತ್ಪಾದನೆಯಾಗುತ್ತಿರುವ ಹಲವು ಬಗೆಯ ವಸ್ತುಗಳು, ಸಾವಯವ ಉತ್ಪನ್ನಗಳು, ಖಾದಿ, ಜವಳಿ ದಿರಿಸು ಸಹಿತ ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವೇ “ನಮ್ಮ ಸಂತೆ’.

Advertisement

ಉದಯವಾಣಿ, ಮಣಿಪಾಲ ಇನ್‌ಸ್ಟಿಟ್ಯೂಟ್‌ ಆಫ್ ಕಮ್ಯೂನಿಕೇಶನ್‌ (ಎಂಐಸಿ) ಒಟ್ಟಾಗಿ ಫೆ. 11 ಮತ್ತು 12ರಂದು ಉದಯವಾಣಿ ಕಚೇರಿ ಬಳಿಯ ಎಂಐಸಿ ಕ್ಯಾಂಪಸ್‌ನಲ್ಲಿ ಬೆಳಗ್ಗೆ 9.30ರಿಂದ ರಾತ್ರಿ 8 ಗಂಟೆಯ ವರೆಗೆ ಆಯೋಜಿಸಿರುವ ನಮ್ಮ ಸಂತೆಗೆ ಈಗಾಗಲೇ ಸ್ಥಳೀಯರು ಸಹಿತವಾಗಿ ವಿವಿಧ ಜಿಲ್ಲೆಗಳಿಂದ ಕರಕುಶಲ ಉತ್ಪನ್ನಗಳ ತಯಾರಕರು ಹೆಚ್ಚಿನ ಸಂಖ್ಯೆಯಲ್ಲಿ  ಭಾಗವಹಿಸುತ್ತಿದ್ದಾರೆ.

ಆಧುನಿಕ ಹೊಡೆತಕ್ಕೆ ಕುಗ್ಗಿ ಹೋಗುತ್ತಿರುವ ಪಾರಂಪರಿಕ ಕಲೆ, ಕರಕುಶಲ ವಸ್ತುಗಳಿಗೆ ಹೊಸ ರೂಪ ನೀಡಿ, ಆ ಮೂಲಕ ಜನರಿಗೆ ಸ್ಥಳೀಯ, ದೇಸೀಯ ಉತ್ಪನ್ನಗಳನ್ನು ಒದಗಿಸುತ್ತಿರುವ ಕರಕುಶಲಕರ್ಮಿಗಳ ಸಮಾಗಮವೂ ನಮ್ಮ ಸಂತೆಯಲ್ಲಿ ಆಗಲಿದೆ. ಅನೇಕರು ಉತ್ಕೃಷ್ಟ ಗುಣಮಟ್ಟದ ಉತ್ಪನ್ನಗಳನ್ನು ಸಿದ್ಧಪಡಿಸಿ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದರೂ ಜನಪ್ರಿಯತೆ ಪಡೆದಿರುವುದಿಲ್ಲ. ನಮ್ಮ ಸಂತೆಯು ಇಂತಹ ಅನೇಕರ ಉದ್ಯಮ ಬಲವರ್ಧನೆಗೂ ಸಮರ್ಥ ವೇದಿಕೆಯಾಗಲಿದೆ.

ಕರಕುಶಲ ವಸ್ತುಗಳ ಉತ್ಪಾದನೆಗೆ ಉತ್ತೇ ಜನ ಸಿಕ್ಕಾಗ ಸ್ಥಳೀಯ ಆರ್ಥಿಕತೆಗೂ ಬೆಂಬಲ ದೊರೆಯುತ್ತದೆ. ಆ ಮೂಲಕ ಕರಕುಶಲ ಕ್ಷೇತ್ರ ದಲ್ಲಿ ಕೆಲಸ ಮಾಡುತ್ತಿರುವವರ ಜೀವನವೂ ಸುಧಾರಿಸಲಿದೆ. ನಮ್ಮ ಸಂತೆಯಲ್ಲಿ ಕುಶಲ

ಕರ್ಮಿಗಳು ತಾವು ಸಿದ್ಧಪಡಿಸಿದ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಾಡುವ ಮೂಲಕ ತಮ್ಮ ಮಾರುಕಟ್ಟೆ ವ್ಯವಸ್ಥೆಯನ್ನು ಇನ್ನಷ್ಟು ವಿಸ್ತರಿಸಿಕೊಳ್ಳಲಿದ್ದಾರೆ. ಒಂದೇ ಸೂರಿನಡಿ ಹಲವು ಪ್ರದೇಶದ ಗ್ರಾಹಕರು ಕುಶಲಕರ್ಮಿಗಳಿಗೆ ಸಿಗಲಿದ್ದಾರೆ. ಇದರಿಂದ ಉತ್ಪಾದಕರ ಸಂಪರ್ಕ ವ್ಯವಸ್ಥೆಯೂ ವೃದ್ಧಿ ಯಾಗಲಿದೆ. ಇದರ ಜತೆಗೆ ಉತ್ಪಾದಕರಿಗೆ ಮಾರುಕಟ್ಟೆ ವಿಸ್ತರಣ ಸಹಿತವಾಗಿ ತಮ್ಮ ಉತ್ಪಾದನ ಕ್ಷೇತ್ರದ ಬಲವರ್ಧನೆಗೆ ಪೂರಕವಾದ ಮಾಹಿತಿ ನೀಡುವ ವ್ಯವಸ್ಥೆಯೂ ಇರಲಿದೆ.

Advertisement

ದೇಶಿಯ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವುದರ ಜತೆಗೆ ಅದರ ಮಹತ್ವ  ಸಮಾಜಕ್ಕೆ ತಿಳಿಸುವುದು ಪ್ರಸ್ತುತದ ಅನಿ ವಾರ್ಯತೆಯಾಗಿದೆ. ಕರಕುಶಲ, ಪಾರಂಪರಿಕ ಕಲಾ ಪ್ರಕಾರಗಳ ವಸ್ತುಗಳ ಮಾರಾಟಕ್ಕೆ ಬೆಂಬಲ ಹಾಗೂ ಸ್ಥಳೀಯ ಆರ್ಥಿಕತೆಗೆ ಉತ್ತೇಜನ ನೀಡುವ ಆಶಯದಿಂದ ನಮ್ಮ ಸಂತೆ ಆಯೋಜಿಸಲಾಗಿದೆ. ಉತ್ಪಾದಕರು ಮತ್ತು ಗ್ರಾಹಕರ ನಡುವೆ ಅತ್ಯಂತ ವಿಶಿಷ್ಟ ಕೊಂಡಿಯಾಗಿ ನಮ್ಮ ಸಂತೆ ರೂಪುಗೊಳ್ಳಲಿದ್ದು, ಇದೊಂದು ಅಪರೂಪದ ವಿಶಿಷ್ಟ ಸಂತೆಯಾಗಿ ಜನಮನ ಸೂರೆಗೊಳ್ಳಲಿದೆ.

Advertisement

Udayavani is now on Telegram. Click here to join our channel and stay updated with the latest news.

Next