ಕನ್ನಡದ ಪ್ರಸಿದ್ಧ ಲೇಖಕ ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕಥಾ ಸಂಕಲನ ನಮ್ಮ ಊರಿನ ರಸಿಕರು ಮೊದಲ ಬಾರಿಗೆ ವೆಬ್ ಸರಣಿಯಾಗಿ ನಿರ್ಮಾಣಗೊಂಡಿದೆ.
ಕ್ಯಾರಂಬೋಲ, ಮ್ಯಾಂಗೋ ಹೌಸ್ ಮತ್ತು ಕಟ್ಟೆ ಈ ವೆಬ್ ಸರಣಿಯನ್ನು ನಿರ್ಮಿಸಿದೆ. ನಂದಿತಾ ಯಾದವ್ ಅವರು ಇದರ ನಿರ್ದೇಶಕಿ. ಈ ವೆಬ್ ಸೀರಿಸ್ ನವೆಂಬರ್ 1ರಿಂದ ಕಟ್ಟೆ ಓಟಿಟಿಯಲ್ಲಿ ಪ್ರಸಾರಾಗಲಿದೆ.
ಈ ವೆಬ್ ಸರಣಿಯಲ್ಲಿ ಸಾಕಷ್ಟು ಕಲಾವಿದರು ನಟಿಸಿ ದ್ದಾರೆ. ರಾಜೇಶ್ ನಟರಂಗ, ಲಕ್ಷ್ಮೀ ಗೋಪಾಲಸ್ವಾಮಿ, ಪಿ ಶೇಷಾದ್ರಿ, ಮಂಡ್ಯ ರಮೇಶ್, ಬಿ ಸುರೇಶ, ರಮೇಶ್ ಪಂಡಿತ್, ಸುನೇತ್ರ ಪಂಡಿತ್, ಸುಂದರ್, ಶಶಿ ಕುಮಾರ್, ರವಿ ಕುಮಾರ್, ಮಂಗಳ ಎನ್, ಶೃಂಗಾ ಬಿ.ವಿ, ಸುಜಯ್ ಶಾಸ್ತ್ರೀ ಸೇರಿದಂತೆ ಅನೇಕರು ನಟಿಸಿದ್ದಾರೆ. ಭಾನುವಾರ ಇಡೀ ತಂಡ ಮಾಧ್ಯಮ ಮುಂದೆ ಬಂದು ವೆಬ್ ಸೀರಿಸ್‌ನ ಟ್ರೇಲರ್ ಪ್ರದರ್ಶಿಸಲಾಯಿತು.
ಇದನ್ನೂ ಓದಿ:ಎನ್ ಸಿಎ ಮುಖ್ಯಸ್ಥ ಸ್ಥಾನದ ಆಫರ್ ನಿರಾಕರಿಸಿದ ವಿವಿಎಸ್ ಲಕ್ಷ್ಮಣ್
ಜೊತೆಗೆ ಇಡೀ ತಂಡ ವೆಬ್ ಸೀರಿಸ್ ಮೂಡಿಬಂದ ರೀತಿ, ಸಿಗಂಧೂರು ಸುತ್ತ ಮುತ್ತ ಚಿತ್ರೀಕರಣ ಮಾಡಿದ ಅನುಭವವನ್ನು ಹಂಚಿಕೊಂಡಿತು. ಈ ವೆಬ್ ಸೀರಿಸ್‌ಗೆ ಅಶೋಕ್ ಕಶ್ಯಪ್ ಅವರ ಛಾಯಾಗ್ರಣ, ಸುರೇಶ್ ಅರಸ್ ಸಂಕಲನ ಮತ್ತು ಪ್ರಕಾಶ್ ಸೊಂಟಕ್ಕೆ ಸಂಗೀತ ಸಂಯೋಜನೆ ಇದೆ