Advertisement

‘ನಮ್ಮ ಮೆಟ್ರೋ’ಪ್ರಯಾಣಿಕರಿಗೆ ಹೊಸ ವರ್ಷಕ್ಕೆ ಸಿಹಿ ಸುದ್ದಿ

10:08 AM Dec 11, 2019 | Hari Prasad |

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಪ್ರಯಾಣಿಸುವವರಿಗೆ ಸಿಹಿ ಸುದ್ದಿಯೊಂದು ಲಭಿಸಿದೆ. 2020ರ ಜನವರಿಯಿಂದ ಮೆಟ್ರೋ ಸಂಚಾರ ಸಮಯದಲ್ಲಿ ವಿಸ್ತರಣೆಯಾಗಿದೆ. ಇನ್ನು ಮೆಟ್ರೋ ರಾತ್ರಿ 12 ಗಂಟೆಗಳವರೆಗೆ ಪ್ರಯಾಣಿಕರಿಗೆ ಸೇವೆಯನ್ನು ಒದಗಿಸಲಿದೆ.

Advertisement

ಇದುವರೆಗೆ ಮೆಟ್ರೋ ರೈಲು ಸಂಚಾರ ಸೇವೆ ಆದಿತ್ಯವಾರ ಹೊರತುಪಡಿಸಿ ವಾರದ ಉಳಿದ ದಿನಗಳಲ್ಲಿ ಬೆಳಿಗ್ಗೆ 05 ಗಂಟೆಯಿಂದ ರಾತ್ರಿ 11 ಗಂಟೆಗಳವರೆಗೆ ಇತ್ತು. ಇದೀಗ ಸಾರ್ವಜನಿಕರ ಮನವಿಗೆ ಸ್ಪಂದಿಸಿರುವ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ ಹೊಸ ವರ್ಷದಿಂದ ತನ್ನ ಸೇವೆಯನ್ನು ಒಂದು ಗಂಟೆ ವಿಸ್ತರಿಸಲು ನಿರ್ಧರಿಸಿದೆ.

ನಾಡಪ್ರಭು ಕೆಂಪೇಗೌಡ (ಮೆಜೆಸ್ಟಿಕ್) ನಿಲ್ದಾಣದಿಂದ ರಾತ್ರಿ 12 ಗಂಟೆಗೆ ಹೊರಡುವ ಕೊನೆಯ ಮೆಟ್ರೋ ಟ್ರೈನ್ ಯಲಚೇನಹಳ್ಳಿ ಮತ್ತು ನಾಗಸಂದ್ರ, ಬೈಯಪ್ಪನಹಳ್ಳಿ ಮತ್ತು ಮೈಸೂರು ರಸ್ತೆಯಲ್ಲಿರುವ ನಿಲ್ದಾಣಗಳಿಗೆ 12.40ರ ಸುಮಾರಿಗೆ ತಲುಪಲಿದೆ.

ಮೈಸೂರು ಮೆಟ್ರೋ ನಿಲ್ದಾಣದಿಂದ ದಿನದ ಕೊನೆಯ ಮೆಟ್ರೋ ರೈಲು ರಾತ್ರಿ 11.05ರ ಬದಲಿಗೆ 11.40ಕ್ಕೆ ಹೊರಡುತ್ತದೆ, ಹಾಗೆಯೇ ಬೈಯಪ್ಪನಹಳ್ಳಿ ನಿಲ್ದಾಣದಿಂದ 11 ಗಂಟೆಯ ಬದಲಿಗೆ ದಿನದ ಅಂತ್ಯದ ಮೆಟ್ರೋ ರೈಲು ರಾತ್ರಿ 11.35ಕ್ಕೆ ಹೊರಡಲಿದೆ. ನಾಗಸಂದ್ರದಿಂದ ಇದೀಗ ರಾತ್ರಿ 10.50ಕ್ಕೆ ಹೊರಡುತ್ತಿರುವ ದಿನದ ಕೊನೆಯ ಮೆಟ್ರೋ ರೈಲು 11.25ಕ್ಕೆ ಹೊರಡಲಿದೆ ಮತ್ತು ಯಲಚೇನಹಳ್ಳಿ ನಿಲ್ದಾಣದಿಂದ ಇದೀಗ 11 ಗಂಟೆಗೆ ಹೊರಡುತ್ತಿರುವ ದಿನದ ಅಂತ್ಯದ ರೈಲು ಇನ್ನುಮುಂದೆ ರಾತ್ರಿ 11.35ಕ್ಕೆ ಹೊರಡಲಿದೆ. ಬಿ.ಎಂ.ಆರ್.ಸಿ.ಎಲ್.ನ ಈ ನಿರ್ಧಾರದಿಂದ ತಡರಾತ್ರಿ ಪ್ರಯಾಣಿಸುವವರಿಗೆ ಅನುಕೂಲವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next