ಬೆಂಗಳೂರು: ಯಲಚೇನಹಳ್ಳಿ- ಅಂಜನಾಪುರ ನಡುವೆ ವಾಣಿಜ್ಯ ಸಂಚಾರಕ್ಕೆ ಮುಕ್ತಗೊಳಿಸಲು ಸಿದ್ಧತೆ ನಡೆಸಿರುವ ಬಿಎಂಆರ್‌ಸಿಎಲ್, ಈ ಸಂಬಂಧ ಮೆಟ್ರೋ ರೈಲು ಸುರಕ್ಷತಾ ಆಯುಕ್ತ (ಸಿಎಂಆರ್ ಎಸ್)ರಿಗೆ ಅ. 15ರೊಳಗೆ ಆಹ್ವಾನ ನೀಡಲು ನಿರ್ಧರಿಸಿದೆ. ಅಂದುಕೊಂಡಂತೆ ಗ್ರೀನ್ ಸಿಗ್ನಲ್ ಸಿಕ್ಕರೆ, ಕನ್ನಡ ರಾಜ್ಯೋತ್ಸವಕ್ಕೆ “ನಮ್ಮ ಮೆಟ್ರೋ’ ಎರಡನೇ ಹಂತದ ಮೊದಲ ಮಾರ್ಗದಲ್ಲಿ ರೈಲು ಕಾರ್ಯಾಚರಣೆ ಸಾಧ್ಯವಿದೆ.
6.29 ಕಿ.ಮೀ. ಉದ್ದದ ಈ ರೀಚ್-4ಬಿ ಮಾರ್ಗದಲ್ಲಿ ಎರಡು-ಮೂರು ದಿನಗಳಲ್ಲಿ ಗರಿಷ್ಠ ವೇಗದ ಪರೀಕ್ಷೆ (ಹೈಸ್ಪೀಡ್ ಟೆಸ್ಟ್) ನಡೆಯಲಿದೆ. ಇದಾದ ನಂತರ ಅಂತಿಮವಾಗಿ ಒಂದೇ ಹಳಿಯಲ್ಲಿ ಒಂದಕ್ಕಿಂತ ಹೆಚ್ಚು ರೈಲುಗಳ ಪರೀಕ್ಷಾರ್ಥ ಸಂಚಾರ ನಡೆಯಲಿದೆ. ಬಳಿಕ ಪರೀಕ್ಷಾ ಫಲಿತಾಂಶಗಳನ್ನು ಕ್ರೋಡೀಕರಿಸಿ, ಅ.15ರೊಳಗೆ ಸಮಗ್ರ ವರದಿಯೊಂದಿಗೆ ಮೆಟ್ರೋ ರೈಲು ಸುರಕ್ಷತಾ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಲು ಉದ್ದೇಶಿಸಲಾಗಿದೆ. ಸಾಮಾನ್ಯವಾಗಿ ಪ್ರಸ್ತಾವನೆ ಸಲ್ಲಿಕೆಯಾದ ವಾರದಲ್ಲಿ ಆಯುಕ್ತರು ಸೂಕ್ತ ದಿನದಂದು ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ.
ಈ ವೇಳೆ ಅನುಮೋದನೆ ಗೊಂಡವಿನ್ಯಾಸದ ಪ್ರಕಾರನಿ ರ್ಮಾಣ ಆಗಿರುವುದನ್ನು ಖಾತ್ರಿಪಡಿಸಿಕೊಳ್ಳಲಾಗುತ್ತದೆ. ಸಂಚರಿಸುವಾಗ ನಿರ್ಗಮನ ದ್ವಾರಗಳು, ಸಿಗ್ನಲಿಂಗ್, ಹಳಿಗಳಲ್ಲಿ ಕಂಪನ, ತುರ್ತು ಅಗ್ನಿಶಾಮಕ ವ್ಯವಸ್ಥೆ ಸೇರಿದಂತೆ ಸುರಕ್ಷಿತ ಪ್ರಯಾಣಕ್ಕೆ ಸಂಬಂಧಿಸಿದಂತೆ ವಿವಿಧ ಪ್ರಕಾರದ ಪರೀಕ್ಷೆ ನಡೆಸಲಾಗುತ್ತದೆ. ಎಲ್ಲವೂ ಸಮರ್ಪಕವಾಗಿದ್ದರೆ, ಒಂದೆರಡು ವಾರಗಳಲ್ಲಿ ಅನುಮತಿ ದೊರೆಯುತ್ತದೆ. ಬಹುತೇಕ ನವೆಂಬರ್ ಮೊದಲ ವಾರದಲ್ಲಿ ಉದ್ಘಾಟನೆಗೊಳ್ಳುವ ನಿರೀಕ್ಷೆ ಇದೆ. ಇದಕ್ಕಾಗಿ ಸಜ್ಜಾಗಿರುವಂತೆಯೂ ನಿಗಮದ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಬಿಎಂಆರ್ ಸಿಎಲ್‌ನ ಹೆಸರು ಹೇಳಲಿಚ್ಛಿಸದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಈಗಾಗಲೇ ಯಲಚೇನಹಳ್ಳಿ-ಅಂಜನಾಪುರ ನಡುವೆ ಬರುವ ಐದೂ ನಿಲ್ದಾಣಗಳಲ್ಲಿ ಸ್ಟೇಷನ್ ಕಂಟ್ರೋಲರ್, ಜೂನಿಯರ್ ಎಂಜಿನಿಯರ್ ಸೇರಿದಂತೆ ಸುಮಾರು 50ಕ್ಕೂ ಅಧಿಕ ಸಿಬ್ಬಂದಿ, ಹೌಸ್ ಕೀಪಿಂಗ್ ಮತ್ತಿತರರ ನಿಯೋಜನೆಗೆ ಸೂಚಿಸಲಾಗಿದೆ. ಈ ಮಧ್ಯೆ ಆಗಸ್ಟ್ 27ರಂದು ಉದ್ದೇಶಿತ ಈ ಮಾರ್ಗದಲ್ಲಿ ಮೆಟ್ರೋ ಪರೀಕ್ಷಾ ಸಂಚಾರ ಆರಂಭಗೊಂಡಿತ್ತು. ಆರು ಬೋಗಿಗಳ ರೈಲು ಪ್ರತಿ ಗಂಟೆಗೆ 5 ಕಿ.ಮೀ. ವೇಗದಲ್ಲಿ ಸುಮಾರು 3 ತಾಸುಗಳಲ್ಲಿ ಅಂಜನಾಪುರ ತಲುಪಿತ್ತು. ಸ್ವತಃ ಬಿಎಂಆರ್‌ಸಿಎಲ್ ಹೇಳಿದಂತೆ 30 ದಿನಗಳ ಸಂಚಾರ ಪೂರ್ಣಗೊಂಡಂತಾಗಿದೆ.
ಏನಿದು ಹೈಸ್ಪೀಡ್ ಟೆಸ್ಟ್? : “ನಮ್ಮ ಮೆಟ್ರೋ’ ಪ್ರಸ್ತುತ ಸರಾಸರಿ ಪ್ರತಿ ಗಂಟೆಗೆ 30-40 ಕಿ.ಮೀ. ವೇಗದಲ್ಲಿಕಾರ್ಯಾಚರಣೆ ಮಾಡುತ್ತಿದೆ. ಆದರೆ, ಅದರ ಗರಿಷ್ಠ ವೇಗ ಗಂಟೆಗೆ 90 ಕಿ.ಮೀ. ಆಗಿದೆ. ಪರೀಕ್ಷೆ ಸಂದರ್ಭದಲ್ಲಿ ಈ ಗರಿಷ್ಠ ವೇಗಮಿತಿಯಲ್ಲಿ ರೈಲು ಕಾರ್ಯಾಚರಣೆ ಮಾಡಲಾಗುವುದು. ಇದನ್ನು ಹೈಸ್ಪೀಡ್ ಟೆಸ್ಟ್ ಎಂದುಕರೆಯಲಾಗುತ್ತದೆ. ಅದೇ ರೀತಿ, ಒಂದು ಹಳಿಯಲ್ಲಿ ಒಂದಕ್ಕಿಂತ ಹೆಚ್ಚು ರೈಲುಗಳನ್ನು ಓಡಿಸಿ ಮಲ್ಟಿಪಲ್ ಟ್ರೈನ್ ಟೆಸ್ಟ್ ಪರಿಣಾಮ ವನ್ನೂ ನಡೆಸಲಾಗಿದೆ. ಮೂಲಗಳ ಪ್ರಕಾರ ನಾಲ್ಕು ಅನುಸೂಚಿ (ಶೆಡ್ಯುಲ್)ಗಳಲ್ಲಿ ಈ ಪರೀಕ್ಷೆ ನಡೆಸಲು ಬಿಎಂಆರ್‌ಸಿಎಲ್ ಉದ್ದೇಶಿಸಿದೆ.
ಹಲವು ಬಾರಿ ನಿರಾಸೆ : ರಿಚ್-4ಬಿ ಮಾರ್ಗವು ಹಲವು ಬಾರಿ ಡೆಡ್‌ಲೈನ್ ಮೀರಿದೆ. ಈ ಮೊದಲು 2018ರ ಡಿಸೆಂಬರ್‌ನಲ್ಲಿ ಪೂರ್ಣಗೊಳಿಸುವ ಗುರಿ ಇತ್ತು. ನಂತರ 2019ರ ಏಪ್ರಿಲ್‌ಗೆ ಬಿಎಂಆರ್ ಸಿಎಲ್ ಸ್ವಯಂ ಗಡುವು ವಿಧಿಸಿಕೊಂಡಿತು. ಆದರೆ, ಈ ಅವಧಿಯಲ್ಲಿ ಸಾಧ್ಯವಾಗಲಿಲ್ಲ. 2020ರ ಆಗಸ್ಟ್‌ನಲ್ಲಿ ಸೇವೆಗೆ ಮುಕ್ತಗೊಳಿಸುವುದಾಗಿ ಘೋಷಿಸಲಾಯಿತು. ಅಂತಿಮವಾಗಿ 2020ರ ನ. 1ರ ಗುರಿ ನಿಗದಿಪಡಿಸಲಾಯಿತು. ಅಂದುಕೊಂಡಂತಾದರೆಕನ್ನಡ ರಾಜ್ಯೋತ್ಸವಕ್ಕೆ ಬೆಂಗಳೂರಿಗರಿಗೆ ಇದುಕೊಡುಗೆ ಆಗಲಿದೆ.
ಈ ಮೊದಲೇ ಅಂದುಕೊಂಡಂತೆ ನವೆಂಬರ್‌ನಲ್ಲಿಯಲಚೇನಹಳ್ಳಿ- ಅಂಜನಾಪುರ ನಡುವಿನ ಮೆಟ್ರೋ ಮಾರ್ಗ ಉದ್ಘಾಟಿಸುವ ಗುರಿ ಇದೆ. ಇದಕ್ಕೆ ಸಿಎಂಆರ್‌ಎಸ್ ಅನುಮತಿ ಬೇಕಾಗು ತ್ತದೆ. ಈ ಸಂಬಂಧ ಅ. 15ರ ಒಳಗೆ ಆಹ್ವಾನ ನೀಡಲು ಉದ್ದೇಶಿಸಲಾಗಿದೆ. ಪೂರಕ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. –
ಅಜಯ್ ಸೇಠ್, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ
-ವಿಜಯಕುಮಾರ್ ಚಂದರಗಿ