Advertisement

ಐದು ತಿಂಗಳ ನಂತರ ಮತ್ತೆ ಆರಂಭವಾದ ನಮ್ಮ ಮೆಟ್ರೋ: ಸೆ.10ರವರೆಗೆ ದಿನ ನಿಗಧಿತ ಓಡಾಟ

12:26 PM Sep 07, 2020 | keerthan |

ಬೆಂಗಳೂರು: ಕೋವಿಡ್ ಕಾರಣದಿಂದ ಐದು ತಿಂಗಳ ಕಾಲ ಸ್ಥಗಿತವಾಗಿದ್ದ ನಮ್ಮ ಮೆಟ್ರೋ ಇಂದಿನಿಂದ ಮತ್ತೆ ಓಡಾಟ ಆರಂಭಿಸಲಿದೆ. ಸುರಕ್ಷಿತ ಮುಂಜಾಗೃತ ಕ್ರಮಗಳೊಂದಿಗೆ ಇಂದಿನಿಂದ ನಮ್ಮ ಮೆಟ್ರೋ ಸಂಚಾರ ಆರಂಭಿಸಿದೆ.

Advertisement

ಬಯ್ಯಪ್ಪನಹಳ್ಳಿಯಿಂದ ನಾಯಂಡನಹಳ್ಳಿ ಮಾರ್ಗದಲ್ಲಿ ಇಂದಿನಿಂದ ಮೆಟದರೋ ರೈಲು ಸಂಚಾರ ಆರಂಭವಾಗಿದೆ. ನಾಗಸಂದ್ರ- ಯೆಲಚೇನಹಳ್ಳಿ ನಡುವಿನ ಸಂಚಾರ ಬುಧವಾರದಿಂದ ಆರಂಭವಾಗಲಿದೆ.

ಸೆ.10ರವರೆಗೆ ಬೆಳಿಗ್ಗೆ 8ರಿಂದ 11 ಗಂಟೆ ಮತ್ತೆ ಸಂಜೆ 4.30ರಿಂದ 7.30ರವರೆಗೆ ಮಾತ್ರ ಓಡಾಟ ನಡೆಸಲಿದೆ. ಸೆ.11ರಿಂದ ಬೆಳಿಗ್ಗೆ 7ರಿಂದ ರಾತ್ರಿ 9ರವರೆಗೆ ಮೆಟ್ರೋ ಸಂಚಾರ ಇರಲಿದೆ.

ಕೋವಿಡ್ ಭೀತಿಯಿಂದ ಪ್ರಯಾಣಿಕರು ಸಾಕಷ್ಷು ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಮಾಸ್ಕ್ ಧರಿಸುವುದು ಕಡ್ಡಾಯವಾಗಿದ್ದು, ಸಾಮಾಜಿಕ ಅಂತರದೊಂದಿಗೆ ಪ್ರಯಾಣಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next