Advertisement
ಶಾಂತಿನಗರದಲ್ಲಿರುವ ನಿಗಮದ ಕಚೇರಿಯ ಸಾರ್ವಜನಿಕ ಸಂಪರ್ಕ ವಿಭಾಗದ ಸಿಬ್ಬಂದಿಯೊಬ್ಬರಿಗೆ ಸೋಂಕು ತಗುಲಿರುವುದು ಬುಧವಾರ ಸಂಜೆ ದೃಢಪಟ್ಟಿದೆ. ಬೆನ್ನಲ್ಲೇ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ ನೂರಾರು ಸಿಬ್ಬಂದಿಯನ್ನು ಮನೆಗೆ ಕಳುಹಿಸಲಾಗಿದೆ. ಇಡೀ ದಿನ ಪಾಲಿಕೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಕಚೇರಿಗೆ ಸ್ಯಾನಿಟೈಸರ್ ಸಿಂಪಡಣೆ ಸೇರಿದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಕಂಡುಬಂತು. ಶುಕ್ರವಾರದಿಂದ ಮತ್ತೆ ಎಂದಿನಂತೆ ಕೆಲಸ ಕಾರ್ಯ ಆರಂಭಗೊಳ್ಳಲಿದೆ. ಕೇಂದ್ರ ಕಚೇರಿಯಲ್ಲಿ ಆಡಳಿತ, ಯೋಜನೆ, ಸಾರ್ವಜನಿಕ ಸಂಪರ್ಕ, ಭೂಸ್ವಾಧೀನ ಸೇರಿದಂತೆ ವಿವಿಧ ವಿಭಾಗಗಳ ಸುಮಾರು 600-700 ಜನ ಕಾರ್ಯನಿರ್ವಹಿಸುತ್ತಾರೆ. ಆದರೆ, ಇದರಲ್ಲಿ ಬಹುತೇಕರು ನಿರ್ಮಾಣ ಕಾಮಗಾರಿ ನಡೆಯುವ ಜಾಗದಲ್ಲೇ ಆಫೀಸ್ ಮಾಡಿಕೊಂಡು, ಸ್ಥಳದಲ್ಲೇ ಕಾರ್ಯನಿರ್ವಹಿಸುತ್ತಾರೆ. ಹಾಗಾಗಿ, ಕೇಂದ್ರ ಕಚೇರಿಯಲ್ಲಿ ಸಾಮಾನ್ಯವಾಗಿ 200 ಜನ ಕೆಲಸ ಮಾಡುತ್ತಾರೆ. ಕೋವಿಡ್ ಹಿನ್ನೆಲೆಯಲ್ಲಿ ರೊಟೇಷನ್ ಪದ್ಧತಿಯಲ್ಲಿ ಶೇ. 50ರಷ್ಟು ಸಿಬ್ಬಂದಿ ಕಚೇರಿಗೆ ಆಗಮಿಸುತ್ತಿದ್ದಾರೆ.
Advertisement
“ನಮ್ಮ ಮೆಟ್ರೋ’ಕೇಂದ್ರ ಕಚೇರಿ ಸೀಲ್‌ಡೌನ್!
02:53 PM Jul 17, 2020 | Suhan S |
Advertisement
Udayavani is now on Telegram. Click here to join our channel and stay updated with the latest news.