Advertisement

ಕರಾವಳಿಯ ನಮಿತಾ ರೈ; ಅವಳಿ ಚಿನ್ನದ ಪವರ್‌

10:11 AM Dec 21, 2019 | sudhir |

ಮೂಡುಬಿದಿರೆ: ಕರಾವಳಿ ಮೂಲದ ಕನ್ನಡತಿ ನಮಿತಾ ರೈ ಪಾರೇಖ್‌ ಮಾಸ್ಕೋದಲ್ಲಿ ನಡೆದ ವಿಶ್ವ ಪವರ್‌ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ವಿಶ್ವದಾಖಲೆಯ ಸಾಧನೆಯೊಂದಿಗೆ 2 ಚಿನ್ನದ ಪದಕ ಜಯಿಸಿದ್ದಾರೆ. 55 ಕೆ.ಜಿ. ವಿಭಾಗದ ಸ್ಪರ್ಧೆಗಳಲ್ಲಿ 172.5 ಕೆಜಿ ಹಾಗೂ 165 ಕೆ.ಜಿ. ಭಾರವೆತ್ತಿ ಸ್ವರ್ಣ ಸಾಧನೆಗೈದರು.

Advertisement

ಇವರು ಕಡಂದಲೆ ಶ್ರೀ ಸುಬ್ರಹ್ಮಣ್ಯಸ್ವಾಮಿ ಪ್ರೌಢಶಾಲಾ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ, ವೇಣೂರಿನ ಸದಾಶಿವ ರೈ ಮತ್ತು ಮೂಡುಬಿದಿರೆ ಹೊಸಬೆಟ್ಟು ಸರಕಾರಿ ಪ್ರೌಢಶಾಲಾ ಶಿಕ್ಷಕಿ ಜಯಲಕ್ಷ್ಮೀ ಶೆಟ್ಟಿ ದಂಪತಿಯ ಪುತ್ರಿ.

ದೈ.ಶಿ. ಶಿಕ್ಷಕ ತಂದೆಯೇ ಸ್ಫೂರ್ತಿ
ತಂದೆ ದೈಹಿಕ ಶಿಕ್ಷಣ ಶಿಕ್ಷಕರಾಗಿರುವುದರಿಂದ ಬಾಲ್ಯದಿಂದಲೇ ಕ್ರೀಡಾಸಕ್ತಿ ಬೆಳೆಸಿಕೊಂಡಿದ್ದ ನಮಿತಾ ರೈ, ಮೂಡುಬಿದಿರೆ ಜೈನ್‌ ಹೈಸ್ಕೂಲ್‌ನಲ್ಲಿ ಪ್ರೌಢ ಶಿಕ್ಷಣ, ಆಳ್ವಾಸ್‌ನಲ್ಲಿ ಕ್ರೀಡಾ ತರಬೇತಿಯೊಂದಿಗೆ ಬಿಕಾಂನಲ್ಲಿ ಪದವಿ ಶಿಕ್ಷಣ ಪೂರೈಸಿದ್ದರು. ಆಗಲೇ ಫ‌ುಟ್‌ಬಾಲ್‌, ಹರ್ಡಲ್ಸ್‌ನಲ್ಲಿ ರಾಷ್ಟ್ರೀಯ ಮಟ್ಟದ ಸಾಧನೆಗೈದಿದ್ದರು.

ಎಂಬಿಎ ಪದವಿ ಗಳಿಸಿ ಬೆಂಗಳೂರಿನ ಎಚ್‌ಎಸ್‌ಬಿಸಿಯಲ್ಲಿ 2 ವರ್ಷ ಉದ್ಯೋಗಿಯಾಗಿದ್ದರು. 2015ರಲ್ಲಿ ಛತ್ತೀಸ್‌ಗಡ ರಾಯ್‌ಪುರದ ಉದ್ಯಮಿ ಸನ್ನಿ ಪಾರೇಖ್‌ ಅವರನ್ನು ವಿವಾಹವಾಗಿ ಅಲ್ಲೇ ನೆಲೆಸಿ ದ್ದಾರೆ. ಮದುವೆ ಬಳಿಕವೂ ತರಬೇತಿ ಮುಂದುವರಿಸಿದ್ದು, ಅಕ್ಟೋಬರ್‌ನಲ್ಲಿ ಬೆಂಗಳೂರಿ ನಲ್ಲಿ ನಡೆದ ವೇಟ್‌ಲಿಫ್ಟಿಂಗ್‌ ಅರ್ಹತಾ ಸುತ್ತಿನಲ್ಲಿ ಆಯ್ಕೆಯಾಗಿದ್ದರು.

ಬದುಕು ಬದಲಿಸಿದ ಕೋಚ್‌ ಸಲಹೆ
ಬೆಂಗಳೂರಿನ ಜಿಮ್‌ನಲ್ಲಿ ವಕೌìಟ್‌ ಮಾಡುತ್ತಿ ದ್ದಾಗ ಪವರ್‌ಲಿಫ್ಟಿಂಗ್‌ ಬಗ್ಗೆ ಕೋಚ್‌ ನೀಡಿದ ಸಲಹೆಯಿಂದ ತಾನು ಈ ದಿಕ್ಕಿನಲ್ಲಿ ಯೋಚಿಸು ವಂತಾಯಿತು ಎನ್ನುತ್ತಾರೆ ನಮಿತಾ ರೈ. ಕೋಚ್‌ ಮೊಹಮ್ಮದ್‌ ಅಜ್ಮತ್‌ ಮಾರ್ಗದರ್ಶನದಲ್ಲಿ ಭಾರ ಎತ್ತುವ ಕೌಶಲ ಕಲಿತರು.

Advertisement

ಅದು ಯಾವುದೇ ಹಂತವಾಗಿರಲಿ, ಭಾರತವನ್ನು ಪ್ರತಿನಿಧಿಸುವುದೇ ಒಂದು ಹೆಮ್ಮೆ. ಮೊದಲ ಪ್ರಯತ್ನದÇÉೇ ವಿಶ್ವದಾಖಲೆಯೊಂದಿಗೆ ಎರಡು ಚಿನ್ನದ ಪದಕ ಗೆದ್ದಿರುವುದು ತುಂಬ ಖುಷಿ ಕೊಟ್ಟಿದೆ. ಮುಂದೆಯೂ ಭಾರತವನ್ನು ಪ್ರತಿನಿಧಿಸುವ ಅವಕಾಶವನ್ನು ಎದುರು ನೋಡುತ್ತಿರುತ್ತೇನೆ.
– ನಮಿತಾ ರೈ

ಚಿಕ್ಕಂದಿನಿಂದಲೇ ಆಕೆಗೆ ಕ್ರೀಡೆಯತ್ತ ವಿಶೇಷ ಆಸಕ್ತಿ. ಕಬಡ್ಡಿ, ಹಾಕಿ, ಫುಟ್‌ಬಾಲ್‌, ಹರ್ಡಲ್ಸ್‌ ಗಳಲ್ಲೂ ಗಮನಾರ್ಹ ಸಾಧನೆ ಮಾಡಿದ್ದಳು. ಹಠ ಹಿಡಿದು ಗುರಿ ಮುಟ್ಟುವ ಸ್ವಭಾವ ಆಕೆಯದು. ವಿಶ್ವದಾಖಲೆಯ ಸಾಧನೆಯ ಮೂಲಕ ನಮ್ಮ ದೇಶಕ್ಕೆ, ನಾಡಿಗೆ ಕೀರ್ತಿ ತಂದಿದ್ದು, ನಮಗೆಲ್ಲ ಬಹಳ ಸಂತಸದ ಸಂಗತಿ.

– ಸದಾಶಿವ ರೈ, ತಂದೆ

Advertisement

Udayavani is now on Telegram. Click here to join our channel and stay updated with the latest news.

Next