Advertisement

8 ತಿಂಗಳ ಗರ್ಭಿಣಿ ಶಾಸಕಿ “ಮಹಾ’ಅಧಿವೇಶನಕ್ಕೆ ಹಾಜರ್‌

09:02 AM Mar 01, 2020 | sudhir |

ಮುಂಬಯಿ: ಆರೋಗ್ಯ ಎಲ್ಲವೂ ಸರಿ ಇದ್ದೇ ಸದನಕ್ಕೆ ಹಾಜರಾಗುವ ಸದಸ್ಯರ ಸಂಖ್ಯೆಗಳು ಇತ್ತೀಚೆಗೆ ಕಡಿಮೆಯಾಗುತ್ತಿವೆ. ವಿಧಾನ ಸೌಧದಲ್ಲಿ-ಲೋಕಸಭೆಯಲ್ಲಿಯೇ ಇದ್ದರೂ, ಪಕ್ಷದ ಶಾಸಕಾಂಗ ಸಭೆಯಲ್ಲಿ ಪಾಲ್ಗೊಂಡರೂ ಸದನಕ್ಕೆ ಚಕ್ಕರ್‌ ಹಾಕುವ ಶಾಸಕರು, ಸಂಸದರು ದೇಶಾದ್ಯಂತ ಇದ್ದಾರೆ, ನಾವು ನೋಡಿದ್ದೇವೆ.

Advertisement

ಆದರೆ ಮಹಾರಾಷ್ಟ್ರದ ಶಾಸಕಿರೋರ್ವರು ತಾವು ಭಿನ್ನ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹೌದು ಮಾಹಾರಾಷ್ಟ್ರದ ನೂತನ ಶಿವಸೇನೆ ಮತ್ತು ಕಾಂಗ್ರೆಸ್‌-ಎನ್‌ಸಿಪಿ ನೇತೃತ್ವದ ಮಹಾ ವಿಕಾಸ್‌ ಆಘಾಡಿ ಮೈತ್ರಿಕೂಟ ಸರಕಾರದ ಬಜೆಟ್‌ ಅಧಿವೇಶನ ವಾರಗಳ ಹಿಂದೆ ಆರಂಭವಾಗಿದೆ. ಉದ್ದವ್‌ ಠಾಕ್ರೆ ನೇತೃತ್ವದ ಸರಕಾರ ಮೊದಲ ಬಜೆಟ್‌ ಅಧಿವೇಶನ ಇದಾಗಿದೆ.

ಬಜೆಟ್‌ ಅಧಿವೇಶನದ ಕಲಾಪಗಳಿಗೆ ತುಂಬು ಗರ್ಭಿಣಿ ಶಾಸಕಿಯೊಬ್ಬರು ಆಗಮಿಸುವ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದಾರೆ. ರಾಜ್ಯದ ಬೀಡ್‌ ಜಿಲ್ಲೆಯ ಬಿಜೆಪಿ ಶಾಸಕಿ ನಮಿತಾ ಮುಂಡಾಡ ಅವರು ಎಂಟು ತಿಂಗಳ ತುಂಬು ಗರ್ಭಿಣಿಯಾಗಿದ್ದು, ಮಹಾರಾಷ್ಟ್ರ ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಂಡಿದ್ದಾರೆ. ಬಜೆಟ್‌ ಅಧಿವೇಶನದ ಕಾರಣ ಹಾಜರಿರುವುದು ನನ್ನ ಕರ್ತವ್ಯ ಎಂದು ಅವರು ಹೇಳಿದ್ದಾರೆ. ನನ್ನ ಕ್ಷೇತ್ರದಲ್ಲಿ ಹಲವು ಸಮಸ್ಯೆಗಳಿವೆ. ನನಗೆ ಅದನ್ನು ಪ್ರಸ್ತಾವಿಸಲು ಇದೇ ಒಂದು ವೇದಿಕೆಯಾಗಿದ್ದು, ಈ ಕಾರಣಕ್ಕೆ ಸದನದಲ್ಲಿದ್ದೇನೆ ಎಂದಿದ್ದಾರೆ.

ಈ ನಡುವೆ ನಮಿತಾ ಆರೋಗ್ಯ ಗಮನದಲ್ಲಿಟ್ಟುಕೊಂಡು ಕಲಾಪ ನಡೆಯುವ ಪ್ರತಿ ದಿನವೂ ಮಹಾರಾಷ್ಟ್ರ ವಿಧಾನಸಭೆ ಹೊರಗಡೆ ತುರ್ತು ಚಿಕಿತ್ಸಾ ವಾಹನ ಕಾಯ್ದಿರಿಸಲಾಗುತ್ತಿದೆ. ತುರ್ತು ಚಿಕಿತ್ಸಾ ವಾಹನದ ಜತೆ ಪರಿಣತ ವೈದ್ಯರ ತಂಡ ಹಾಜರಿರಬೇಕು ಎಂದು ಆರೋಗ್ಯ ಇಲಾಖೆಗೆ ಸರಕಾರ ಸೂಚಿಸಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next